ಹೃದಯದ ಆರೋಗ್ಯಕ್ಕೆ ಟಾನಿಕ್ ನಂತೆ ಕೆಲಸ ಮಾಡುವ ದಾಳಿಂಬೆ ರಸ

ದಾಳಿಂಬೆ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಕೆಲಸ ಮಾಡುತ್ತದೆ, ಅಷ್ಟೇ ಅಲ್ಲದೆ ಬಳಷ್ಟು ದೈಹಿಕ ಸಮಸ್ಯೆಗಳಿಗೆ ಕಡಿವಾಣ ಹಾಕುವ ಜೊತೆಗೆ ಉತ್ತಮ ಆರೋಗ್ಯವನ್ನು ನೀಡುವಲ್ಲಿ ದಾಳಿಂಬೆ ಹೇಗೆ ಸಹಕಾರಿಯಾಗಿದೆ ಅನ್ನೋದನ್ನ ಈ ಮೂಲಕ ತಿಳಿಯೋಣ, ದಾಳಿಂಬೆಯಲ್ಲಿದೆ ಹಲವು ಔಷದಿ ಗುಣಗಳು ಅವುಗಳು ಯಾವುವು ಅನ್ನೋದನ್ನ ಇಲ್ಲಿ ಗಮನಿಸಿ.

ಸಿಹಿ ದಾಳಿಂಬೆ ಹಣ್ಣಿನ ರಸ ಅರ್ಧ ಲೀಟರ್ ಮತ್ತು ಕಲ್ಲು ಸಕ್ಕರೆ ಚೂರ್ಣ ಒಲೆಯ ಮೇಲಿಟ್ಟು ಜಾಯಿಸಿ ಪಾಕ ಮಾಡಿಕೊಳ್ಳಿ, ಇದಕ್ಕೆ ಏಲಕ್ಕಿ ಪುಡಿ, ಕೊತ್ತಂಬರಿ ಬೀಜದ ಪುಡಿ, ದಾಲ್ಚಿನ್ನಿ, ಜಾಯಿಕಾಯಿ ಬೀಜದ ಪುಡಿ, ಶುಂಠಿ ಪುಡಿಗಳನ್ನು ಬೆರಸಿ, ಇದನ್ನು ನಿತ್ಯ ಬೆಳಗ್ಗೆ ರಾತ್ರಿ ಎರಡು ಚಮಚ ಸೇವಿಸಿದರೆ ಹೃದಯಕ್ಕೆ ಉತ್ತಮ ಟಾನಿಕ್ ನಂತೆ ಕೆಲಸ ಮಾಡುತ್ತದೆ ಅಷ್ಟೇ ಅಲ್ದೆ ಹಸಿವು ಇಲ್ಲದವರು ಅಜೀರ್ಣ, ಅಭಿರುಚಿ ಬೇಧಿ ಇತ್ಯಾದಿಗಳನ್ನು ನಿವಾರಿಸುತ್ತದೆ.

ಮೂಲವ್ಯಾಧಿಯ ನೋವು ಊತ ಕಡಿಮೆ ಮಾಡುವ ದಾಳಿಂಬೆ: ದಾಳಿಂಬೆಯ ಬೀಜವನ್ನು ಸುಟ್ಟು ಕರಕು ಮಾಡಿ ಅದನ್ನು ಬೆಲ್ಲದೊಂದಿಗೆ ಬೆರಸಿ ಒಂದು ಗ್ರಾಂ ನಷ್ಟು ಸೇವಿಸಿದರೆ ಮೂಲವ್ಯಾಧಿಯ ನೋವು ಊತ ಕಡಿಮೆಯಾಗುತ್ತದೆ. ಇನ್ನು ಒಂದು ಚಮಚ ದಾಳಿಂಬೆ ಸಿಪ್ಪೆ ಪುಡಿಗೆ ಎರಡು ಚಮಚ ಕಲ್ಲುಸಕ್ಕೆರೆ ಪುಡಿ, ಬೆರಸಿ ಸೇವಿಸಿದರೆ ಒಣಕೆಮ್ಮು ಪರಿಹಾರ ಸಿಗುವದು.

Leave A Reply

Your email address will not be published.

error: Content is protected !!