ಆ್ಯಂಕರ್ ಅನುಶ್ರೀ ನಿರೂಪಣೆ ಅಷ್ಟೇ ಅಲ್ಲ, ಚಿಕನ್ ಅಡುಗೆ ಎಷ್ಟು ಚೆನ್ನಾಗಿ ಮಾಡ್ತಾರೆ ನೋಡಿ

ಆ್ಯಂಕರ್ ಅನುಶ್ರೀ ಎಂದರೆ ಎಲ್ಲರಿಗೂ ಗೊತ್ತು, ಅವರು ಮಾತು ಬಲು ಹುರುಪು. ಅಷ್ಟು ಸುಪ್ರಸಿದ್ಧಿ ಪಡೆದ ಅನುಶ್ರೀ ಬದುಕಿನ ಕಥೆ ಜನರಿಗೆ ತಿಳಿದಿಲ್ಲ. ಮಂಗಳೂರಿನ ಒಂದು ಮೂಲೆಯಿಂದ ಆಂಕರ್‌ ಆಗಬೇಕು ಅನ್ನುವ ಕನಸು ಹೊತ್ತು ಬೆಂಗಳೂರಿಗೆ ಬಂದಿಳಿದವರು ಅನುಶ್ರೀ. ಅನುಶ್ರೀ ದೂರದರ್ಶನದಲ್ಲಿ ಕನ್ನಡವಾಹಿನಿಗಳಲ್ಲಿ ಕಾರ್ಯಕ್ರಮ ನಿರೂಪಕಿ. ಅವರು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಹಾಗೂ ಇತರ ಪ್ರಶಸ್ತಿಗಳು ದೊರಕಿದೆ. ಅನುಶ್ರೀ ಕನ್ನಡ ಸಿನಿರಂಗದಲ್ಲಿ ಕಿರುತೆರೆ ನಿರೂಪಕಿಯಾಗಿ ಮತ್ತು ಚಿತ್ರನಟಿಯಾಗಿ ಸಕ್ರಿಯರಾಗಿದ್ದಾರೆ.

ಅನುಶ್ರೀ ಬೆಂಗಳೂರಿನಲ್ಲಿ 25 ಜನವರಿ 1988 ರಲ್ಲಿ ಜನಿಸಿದರು. ತಂದೆ ಸಂಪತ್, ಮತ್ತು ತಾಯಿ ಶಶಿಕಲಾ. ಮನೆಯಲ್ಲಿ ತುಳು ಮಾತಾಡುವ ಕುಟುಂಬವಾಗಿತ್ತು. ಅವರ ತಮ್ಮ ಅಭಿಜಿತ್. ಅನು ಅವರು, ಚಿಕ್ಕವಳಿದ್ದಾಗ ಅವರ ತಂದೆ-ತಾಯಿಯಿಂದ ದೂರ ಇದ್ದರು. ಅವರು ನಾರಾಯಣ ಗುರು ಶಾಲೆಗೆ ಹೋಗುವ ಮುನ್ನ ಅವರು ತನ್ನ ೫ನೇ ತರಗತಿಯನ್ನು ಸೈಂಟ್ ಥೋಮಸ್ ಬೆಂಗಳೂರಿನಲ್ಲಿ ಕಲಿತಿದ್ದರು. ಅವರಿಗೆ ಪದವಿ ಮುಗಿದ ತಕ್ಷಣ ದೂರದರ್ಶನದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು. ಅನುಶ್ರೀ ಅವರು ಉದ್ಯೋಗವನ್ನು ಕಾರ್ಯಕ್ರಮ ನಿರೂಪಕಿಯಾಗಿ ಈ ಟಿ.ವಿ ಕನ್ನಡ ಕಾರ್ಯಕ್ರಮ ಡಿಮ್ಯಾಂಡಪೊ ಡಿಮ್ಯಾಂಡು ಎಂಬ ಕಾರ್ಯಕ್ರಮದಲ್ಲಿ ಅವರ ಪ್ರತಿಭೆಯನ್ನು ತೋರಿಸಿದ್ದಾರೆ.

ಅನುಶ್ರೀ ಅವರು ಬಿಗ್ ಬಾಸ್ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅದರಲ್ಲಿ ಅವರು ೮೦ ದಿನಗಳ ಕಾಲ ಆ ಮನೆಯಲ್ಲಿದ್ದರು. ಇದಲ್ಲದೆ ಅವರು ಬೇರೆ ಕಾರ್ಯಕ್ರಮಗಳಾದ ಕಾಮಿಡಿ ಕಿಲಾಡಿಗಳು, ಕಾಮಿಡಿ ಕಪ್. ಇತ್ಯಾದಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಭಾಗವಹಿಸಿದ್ದರು. ಅವರು ಬೆಂಕಿಪಟ್ಟಣ ಎಂಬ ಚಿತ್ರವನ್ನು ಮಾಡಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಅಲ್ಲಿ ಅವರು ಸಾಧನೆಯನ್ನು ಮಾಡಿ ಬೆಸ್ಟ್ ಡಿಬೇಟ್ ಎಂಬ ಪ್ರಶಸ್ತಿಯನ್ನು ಗಳಿಸಿದ್ದಾರೆ. ಹಾಗೂ ಮುರಳಿ ಮೀಟ್ಸ್ ಮೀರಾ ಎಂಬ ಚಲನಚಿತ್ರಕ್ಕೆ ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ ದೊರಕಿದೆ.

ಇವರು 2011 ರಲ್ಲಿ ತೆರೆಕಂಡ ಮುರಳಿ ಮೀಟ್ಸ್ ಮೀರಾ ಚಿತ್ರದ ಡಬ್ಬಿಂಗ್ ಗಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಹಾಗೆಯೇ 2015 ರಲ್ಲಿ ಜೀ ಕನ್ನಡದ ಪಾಪುಲರ್ ಆಂಕರ್ ಪ್ರಶಸ್ತಿ ಪಡೆದಿದ್ದಾರೆ. ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ ಕಾರ್ಯಕ್ರಮದ ಹಲವು ಸೀಸನ್ ಗಳನ್ನು ಯಶಸ್ವಿ ನಿರೂಪಣೆ ಮಾಡಿದ್ದಾರೆ.

2014 ರಲ್ಲಿ ಬಿಗ್ ಬಾಸ್ ಸೀಸನ್ ಒಂದರಲ್ಲಿ ಭಾಗವಹಿಸಿ ಹೊರ ಬಂದ ಅನುಶ್ರೀ ಜೀವನ ಸಂಪೂರ್ಣವಾಗಿ ಬದಲಾಯಿತೆನ್ನಬಹುದು. 2015 ರಲ್ಲಿ ಜೀ ಕನ್ನಡ ವಾಹಿನಿಗೆ ಸರಿಗಮಪ ಸೀಸನ್ 10 ರ ನಿರೂಪಕರಾಗಿ ಕಾಲಿಟ್ಟ ಅನುಶ್ರೀ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಸರಿಗಮಪ ಸೀಸನ್ 10 ರಿಂದ ಮೊನ್ನೆ ಮೊನ್ನೆಯಷ್ಟೇ ಮುಗಿದ ಸೀಸನ್ 17 ರವರೆಗೂ ಯಶಸ್ವಿಯಾಗಿ ನಡೆಸಿಕೊಂಡು ಬಂದರು. ಇದರ ಜೊತೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಕೂಡ ಅವರದ್ದೇ ನಿರೂಪಣೆ. ಅಷ್ಟೇ ಅಲ್ಲದೇ ಯಾವುದೇ ದೊಡ್ಡ ದೊಡ್ಡ ಸಿನಿಮಾಗಳ ಆಡಿಯೋ ಬಿಡುಗಡೆ ಅಥವಾ ಮತ್ಯಾವುದೇ ಕಾರ್ಯಕ್ರಮವಾದರೂ ನಿರೂಪಣೆ ಎಂದ ಕೂಡಲೇ ಕೇಳಿ ಬರುವ ಹೆಸರು ಸಹ ಅನುಶ್ರೀ ಅವರದ್ದೇ‌‌ ಆಗಿದೆ. ಅನುಶ್ರೀ ಅವರು ಕಾಮಿಡಿ ಕಿಲಾಡಿಗಳು, ಕಾಮಿಡಿ ಕಪ್, ಸ್ಟಾರ್ ಲೈವ್, ನಮಸ್ತೇ ಕಸ್ತೂರಿ ಹೀಗೆ ಅನೇಕ ಹಿಟ್ ಕಾರ್ಯಕ್ರಮಗಳ ನಿರೂಪಕಿಯಾಗಿದ್ದರು.

ಇನ್ನು ಕೆಲ ತಿಂಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಸುದ್ದಿಯಾದ ಡ್ರಗ್ಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಅನುಶ್ರೀ ಅವರ ಹೆಸರೂ ಸಹ ಕೇಳಿ ಬಂದಿದ್ದು ಅನುಶ್ರೀ ಮಂಗಳೂರಿಗೆ ತೆರಳಿ ವಿಚಾರಣೆಗೂ ಸಹ ಹಾಜರಾಗಿ ಬಂದರು. ಆ ಸಮಯದಲ್ಲಿ ಅನುಶ್ರೀ ಕುರಿತಾಗಿ ಸಾಕಷ್ಟು ವಿಚಾರಗಳು ಸುದ್ದಿಯಾದರೂ ಸಹ ಹೆಚ್ಚು ದಿನ ಉಳಿಯಲಿಲ್ಲ.

ನಂತರ ಅದೆಲ್ಲವನ್ನು ಧೈರ್ಯದಿಂದ ಎದುರಿಸಿ ಹೊರ ಬಂದ ಅನುಶ್ರೀಗೆ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಜನಮೆಚ್ಚಿದ ನಿರೂಪಕಿ ಎಂದೂ ಸಹ ಅವಾರ್ಡ್ ಬಂದಿದ್ದು ಆ ಸಮಯದಲ್ಲಿ ಮಾತನಾಡಿದ ಅನುಶ್ರೀ ಕೆಲ ದಿನಗಳಿಂದ ನನ್ನ ಬಗ್ಗೆ ಎದ್ದಿದ್ದ ಅನುಮಾನಗಳಿಗೆ ಇದೇ ಉತ್ತರ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು ಎಂದಿದ್ದರು.

ಸದ್ಯ ಜೀ ಕನ್ನಡ ವಾಹಿನಿಯ ಸರಿಗಮಪ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕಮಗಳ ನಿರೂಪಣಾ ಜವಾಬ್ಧಾರಿಯನ್ನು ಹೊತ್ತಿದ್ದಾರೆ. ಸದ್ಯ ಕನ್ನಡ ಕಿರುತೆರೆಯ ನಂಬರ್ ಒನ್ ನಿರೂಪಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೀವನದಲ್ಲಿ ಎದುರಾದ ಅದೆಷ್ಟೋ ಕಷ್ಟಗಳನ್ನು ಏಕಾಂಗಿಯಾಗಿ ಎದುರಿಸುತ್ತಾ, ಈ ಹಂತಕ್ಕೆ ಬೆಳೆದಿರುವುದು ನಿಜಕ್ಕೂ ಇತರರಿಗೆ ಮಾದರಿಯೇ ಸರಿ. ಈಗ ಅನುಶ್ರೀ ಅವರು ತಾವೇ ಸ್ವತಃ ಚಿಕನ್ ಅಡುಗೆ ಮಾಡಿ ತಮ್ಮ ಸೋಶಿಯಲ್ ಮೀಡಿಯ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ.

Leave A Reply

Your email address will not be published.

error: Content is protected !!