Anirudh: ರನ್ವೀರ್ ಮತ್ತು ಆಲಿಯ ಭಟ್ ದಂಪತಿಗಳೊಂದಿಗೆ ರಾಷ್ಟ್ರಪ್ರಶಸ್ತಿ ಪಡೆದ ಡಾಕ್ಟರ್ ವಿಷ್ಣುವರ್ಧನ್ ಅವರ ಹೆಮ್ಮೆಯ ಅಳಿಯ ಅನಿರುದ್ಧ್

ಸ್ನೇಹಿತರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಸೀರಿಯಲ್ ಮೂಲಕ ಮನೆ ಮಾತಾದಂತಹ ನಟ ಅನಿರುದ್(Anirudh) ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಲೇ ಇರುತ್ತಾರೆ. ಅದರಂತೆ ಸದ್ಯ ಅನಿರುಧ್ (Anirudh) ಅವರು ಬಾಲಿವುಡ್ ನ ಪ್ರಖ್ಯಾತ ನಟ ನಟಿಯರಾದ ಅಲಿಯಾ ಭಟ್ ಮತ್ತು ರನ್ವೀರ್ ಕಪೂರ್ ಅವರೊಂದಿಗೆ ಸೆಲ್ಫಿ ಒಂದನ್ನು ತಗಿಸಿ ತಮ್ಮ instagram ಖಾತೆಯಲ್ಲಿ

ಹಂಚಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ. ಹೌದು ಗೆಳೆಯರೇ ಅಕ್ಟೋಬರ್ 17 ನೇ ತಾರೀಕು ದೆಹಲಿಯಲ್ಲಿ ನಡೆದಂತಹ 69ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್ (Vishnuvardhan) ಅವರ ಅಳಿಯರಾದಂತಹ ಅನಿರುಧ್ ಜಟ್ಕರ್ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿತು. ಅವರ ಬಾಳೇ ಬಂಗಾರ(Bale Bangara) ಎನ್ನುವ ಸಾಕ್ಷ್ಯ ಚಿತ್ರವನ್ನು ನಾನ್ ಫೀಚರ್ ಫಿಲಂ ವಿಭಾಗದಲ್ಲಿ ಗುರುತಿಸಿ ರಾಷ್ಟ್ರಪತಿ ಮುರ್ಮು ಅವರಿಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಅವರ ಈ ಸಾಧನೆಗೆ ಎಲ್ಲ ಕಡೆಯಿಂದ ಅಭಿನಂದನೆಗಳು ವ್ಯಕ್ತವಾಗುತ್ತಿದ್ದು, ಈ ಕುರಿದಾದ ಸಾಲು ಸಾಲು ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿರುವಂತಹ ನಟ ಅನಿರುಧ್ (Anirudh) ಅವರು ಕಾರ್ಯಕ್ರಮಕ್ಕೆ ಬಂದಿದ್ದಂತಹ ಆಲಿಯ ಭಟ್(Alia Bhatt) ಹಾಗೂ ರನ್ವೀರ್ ಕಪೂರ್(Ranbir Kapoor) ದಂಪತಿಗಳನ್ನು ಮಾತನಾಡಿಸಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ನಿನ್ನೆ ಮುಂಜಾನೆ ಶುಭೋದಯ ಎಂಬ ಕ್ಯಾಪ್ಶನ್ ಬರೆದು ದಂಪತಿಗಳ ಜೊತೆಗಿನ ಫೋಟೋವನ್ನು ಅನಿರುಧ್ ಹಂಚಿಕೊಂಡಿದ್ದಾರೆ. ಇನ್ನೂ ನಟಿ ಅಲಿಯಾ ಭಟ್ ಕೂಡ ತಮ್ಮ ಗಂಗೂಬಾಯಿ ಖಾತ್ಯಾವಾಡಿ (Gangubai Kathiyawadi) ಸಿನಿಮಾದ ಅಮೋಘ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಸ್ವೀಕರಿಸಿದರು ಈ ಸಂದರ್ಭದಲ್ಲಿ ಅವರು ತಮ್ಮ ಮದುವೆ ಸೀರೆಯನ್ನು ಧರಿಸಿ ಬಂದದ್ದು ವಿಶೇಷ ಆಕರ್ಷಣೆಯಾಗಿ ಕಂಡುಬಂದಿತ್ತು. ಇನ್ನು ರನ್ವೀರ್ ಕಪೂರ್ ಕೂಡ ಪತ್ನಿಯ ವಿಶೇಷ ದಿನದಲ್ಲಿ ಅವರ ಜೊತೆಗಿದ್ದು ಸಾತ್ ನೀಡಿದರು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!