ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ನಟಿ ಅನುಶ್ರೀ. ಮದುವೆ ಆಗೋಕೆ ಸಿದ್ಧರಾದ್ರು ಅನುಶ್ರೀ. ಹುಡುಗ ಯಾರು ಗೊತ್ತಾ

ನಟಿ ಅನುಶ್ರೀ ಅವರು ಕನ್ನಡದ ಬೆಳ್ಳಿತೆರೆಯ ನಂಬರ್ ಒನ್ ನಿರೂಪಕಿ. ಪ್ರಖ್ಯಾತ ಹೀರೋಯಿನ್ ಗಳಿಗಿಂತ ಹೆಚ್ಚಾಗಿ ನಟಿ ಅನುಶ್ರೀ ಅವರು ಕರ್ನಾಟಕದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ರಿಯಾಲಿಟಿ ಶೋ ಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡುವ ಅನುಶ್ರೀ ಅವರು ಕನ್ನಡದ ಮೂಲೆಮೂಲೆಗೂ ತಮ್ಮ ವೈಖರಿಯನ್ನು ಪಸರಿಸಿದ್ದಾರೆ. ಒಟ್ಟಿನಲ್ಲಿ ಅನುಶ್ರೀ ಅವರು ಇಲ್ಲದೇ ಇದ್ದರೆ ರಿಯಾಲಿಟಿ ಶೋ ತುಂಬಾ ಸಪ್ಪೆ ಆಗಿ ಕಾಣುತ್ತೆ. ಅನುಶ್ರೀ ಯಿಂದಲೇ ರಿಯಾಲಿಟಿ ಶೋಗೆ ಕಳೆ ಬಂದಿದೆ ಎಂದರೂ ತಪ್ಪಾಗಲ್ಲ.

ಅನುಶ್ರೀ ಅವರು ಮೂಲತಃ ಮಂಗಳೂರಿನ ಮೂಲದ ಹುಡುಗಿ. ಚಿಕ್ಕ ವಯಸ್ಸಿನಲ್ಲೇ ತಂದೆ ಅನುಶ್ರೀ ಅವರನ್ನು ಬಿಟ್ಟು ಹೋದರು ತಾಯಿಯ ಜೊತೆಯಲ್ಲೇ ಬದುಕು ಕಟ್ಟಿಕೊಂಡು ಸ್ವಂತ ಪರಿಶ್ರಮದಿಂದ ಮೇಲಕ್ಕೆ ಬಂದಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತುಂಬಾ ಕಷ್ಟಪಟ್ಟಿದ್ದರು. ಇದೀಗ ನುಸಿ ಯವರು ಸುಖದ ಜೀವನವನ್ನು ಅನುಭವಿಸುತ್ತಿದ್ದಾರೆ. ನಿರೂಪಕಿಯಾಗಿ ಕೈತುಂಬ ಹಣವನ್ನೂ ಕೂಡ ಸಂಪಾದಿಸುತ್ತಿದ್ದಾರೆ. ನಿಜ ಹೇಳಬೇಕೆಂದರೆ ಅನುಶ್ರೀ ಅವರು ನಟಿಯರಿಗಿಂತ ಹೆಚ್ಚು ಹಣವನ್ನು ಸಂಪಾದನೆ ಮಾಡುತ್ತಾರೆ.

ಬಲ್ಲ ಮೂಲಗಳ ಪ್ರಕಾರ ಇವರು ಒಂದು ಎಪಿಸೋಡ್ ಗೆ ಎಂಬತ್ತು ರಿಂದ ತೊಂಬತ್ತು ಸಾವಿರ ರುಪಾಯಿಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ಮಾಹಿತಿ ಇದೆ. ಅಷ್ಟೇ ಅಲ್ಲದೆ ಸಿನಿಮಾಗಳ ಇವೆಂಟ್ ಗಳಲ್ಲಿ ಕೂಡ ಅನುಶ್ರೀ ಅವರು ನಿರೂ ಪಣೆ ಮಾಡಿ ಹಣವನ್ನು ಸಂಪಾದನೆ ಮಾಡುತ್ತಾರೆ. ಇತ್ತೀಚೆಗೆ ಬೆಂಗಳೂರಿನ ಜಯನಗರದಲ್ಲಿ ಸ್ವಂತ ಜಮೀನು ಖರೀದಿ ಮಾಡಿ ಭೂಮಿ ಪೂಜೆಯನ್ನು ಕೂಡ ಮಾಡಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಅನುಶ್ರೀ ಅವರು ಸ್ವಂತ ವಾದ ಮನೆ ಕೂಡ ಕಟ್ಟಿಸುತ್ತಾರೆ. ಮನೆಯೊಂದು ಕಟ್ಟಿಸಿದರೆ ಅನುಶ್ರೀ ಅವರ ಜೀವನ ಸೆಟಲ್ ಆಗುತ್ತೆ.

ಆದರೆ ಇದೀಗ ಅಭಿಮಾನಿಗಳಿಗೆ ಇನ್ನೊಂದು ಖುಷಿಯ ವಿಚಾರವನ್ನು ಅನಸಿ ತಿಳಿಸಿದ್ದಾರೆ. ಹೌದು ಸ್ನೇಹಿತರೆ ನಟಿ ಅನುಶ್ರೀ ಅವರು ಮದುವೆಯಾಗುವುದರ ಬಗ್ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅನುಶ್ರೀ ಅವರ ಈಗಿನ ವಯಸ್ಸು 34 ವರ್ಷ. ಇಷ್ಟು ವರ್ಷಗಳಾದಮೇಲೆ ಮನಸ್ಸಿನವರು ಮದುವೆಯಾಗಲು ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಸ್ವತಃ ಅನುಶ್ರೀ ಅವರೇ ಖಾಸಗಿ ರಿಯಾಲಿಟಿ ಶೋವೊಂದರಲ್ಲಿ ಮದುವೆ ಆಗಬೇಕೆಂದು ಆಸೆ ಹುಟ್ಟಿದೆ ಎಂದು ಅಂತರಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುವ ಜೋಡಿ ನಂಬರ್ ವನ್ ರಿಯಾಲಿಟಿ ಶೋ ಗೆ ಅನುಶ್ರೀ ಅವರು ಅತಿಥಿಯಾಗಿ ಹೋಗಿದ್ದರು ಈ ಸಮಯದಲ್ಲಿ ಜೋಡಿ ನಂಬರ್ ವನ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳ ಜೋಡಿಯನ್ನು ನೋಡಿ ಅನುಶ್ರೀ ಅವರು ಭಾವುಕರಾದರು. ಸ್ಪರ್ಧಿಗಳ ತರಲೆ ತಂಟೆ ಮತ್ತು ಅನ್ಯೋನ್ಯತೆಯನ್ನು ನೋಡಿ ಅನುಶ್ರೀ ಅವರ ಮನಸ್ಸಿನಲ್ಲಿ ಮದುವೆಯ ಆಸೆ ಹುಟ್ಟಿದೆ. ಮದುವೆಯ ಆಸೆ ಚಿಗುರಿರುವ ಅನುಶ್ರೀ ಅವರು ಈ ವರ್ಷ ಮದುವೆಯಾಗುತ್ತಾಳಾ ಎಂದು ಕಾದು ನೋಡಬೇಕಿದೆ.

Leave a Comment

error: Content is protected !!