ಅರ್ಜುನ ಜನ್ಯ ಮಗಳ ಪ್ರತಿಭೆ ಕಂಡು ಸಿಂಗರ್ ವಿಜಯ್ ಪ್ರಕಾಶ್ ರಿಯಾಕ್ಷನ್ ಹೇಗಿತ್ತು ಗೊತ್ತಾ

ಕನ್ನಡ ಚಿತ್ರರಂಗದ ಮ್ಯೂಸಿಕ್ ಮಾಂತ್ರಿಕ ಎಂದೇ ಹೆಸರುವಾಸಿಯಾಗಿರುವ ಅರ್ಜುನ ಜನ್ಯ ಅವರ ಮಗಳ ಪ್ರತಿಭೆ ಕಂಡು ಸಿಂಗರ್ ವಿಜಯ್ ಅವರ ರಿಯಾಕ್ಷನ್ ಹೇಗಿತ್ತು ಗೊತ್ತಾ. ಎ ಅರ್ ರೆಹಮಾನ್ ಅವರ ಅಪ್ಪಟ ಅಭಿಮಾನಿ ಹಾಗೂ ಇವರನ್ನು ಕನ್ನಡ ಚಿತ್ರರಂಗದಲ್ಲಿ ಕನ್ನಡದ ಎ ಆರ್ ರೆಹಮಾನ್ ಎಂದೇ ಪ್ರಖ್ಯಾತಿ ಹೊಂದಿರುವ ಅರ್ಜುನ್ ಜನ್ಯ ಅವರು ಚಿತ್ರರಂಗಕ್ಕೆ ಬರುವ ಮೊದಲು ವಿ. ಮನೋಹರ್ ಹಾಗೂ ಕೆ ಕಲ್ಯಾಣ್ ಅವರ ಬಳಿ ಕೀ ಬೋರ್ಡ್ ಅಭ್ಯಾಸವನ್ನು ಮಾಡಿದ್ದಾರೆ.

ಇವರು ಮೇ 13 ರಂದು ಬೆಂಗಳೂರು ಅಲ್ಲಿ ಜನಿಸಿದ್ದರು ಹಾಗೂ ಒಮ್ಮೆ ಎ ಆರ್ ರೆಹಮಾನ್ ಅವರನ್ನು ಬೇಟಿಯಾಗದ ಬಳಿಕ ತಾನು ಒಬ್ಬ ಸಂಗೀತಗಾರ ಆಗಬೇಕು ಸಂಗೀತ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಛಲ ಹುಟ್ಟಿಕೊಂಡಿತ್ತು. ಅದಕ್ಕೆ ಅವಕಾಶ ಹುಡುಕಿ ಹೊರಟಾಗ 2006 ರಲ್ಲಿ ಮೈ ಆಟೋಗ್ರಾಫ್ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುವ ಅವಕಾಶ ಒದಗಿ ಬಂತು ಅಲ್ಲಿ ಅಷ್ಟೊಂದು ಹೆಸರು ಗಳಿಸಲು ಸಾಧ್ಯ ಆಗಲಿಲ್ಲ. ತದನಂತರ 2009 ರ ವೇಳೆಯಲ್ಲಿ ಬಿರುಗಾಳಿ ಚಿತ್ರದ ಮೂಲಕ ಅವರ ಹೆಸರು ಕರ್ನಾಟಕದಲ್ಲೆಡೆ ಪಸರಿಸಿತ್ತು ಹಾಗೂ 2010 ರಲ್ಲಿ ಸಂಚಾರಿ ಸಿನಿಮಾದಲ್ಲಿ ಇವರ ಸಂಗೀತ ಜನರ ಮನದಲ್ಲಿ ಅಳಿಸದೆ ನೆಲೆ ಕಾಣಿಸಿತ್ತು.

ಪ್ರತಿಯೊಬ್ಬರ ಜೀವನದಲ್ಲೂ ಒಂದು ಮಹತ್ತರವಾದ ತಿರುವು ಸಿಗುವುದು ಅದರ ಬಗ್ಗೆ ನಮಗೆ ತಿಳಿಯದೆ ಆಗುವ ಸಮಯ ಹಾಗೆಯೇ ಕೆಂಪೇಗೌಡ ಸಿನಿಮಾ ಅಲ್ಲಿನ ಹಾಡು ಇವರನ್ನು ಇಂದು ಒಂದು ಉನ್ನತ ಮಟ್ಟಕ್ಕೆ ತಲುಪಿಸಿದೆ ಏನಾದರೂ ತಪ್ಪಾಗಲಾರದು ಹಾಗೂ ಈ ಚಿತ್ರದ ವೇಳೆಯಲ್ಲಿ ತನ್ನ ಹೆಸರಿಗೆ ಜನ್ಯ ಎಂದು ಸೇರಿಸಿಕೊಳ್ಳುತ್ತಾರೆ. ಇದನ್ನು ಸ್ವತಃ ಸುದೀಪ್ ಅವರು ಸೂಚಿಸಿದ್ದು ಎಂದು ಅರ್ಜುನ್ ಅವರೇ ಹೇಳಿಕೊಂಡಿದ್ದಾರೆ. ಶರಣ್ ಅಭಿನಯದ ವಿಕ್ಟರಿ ಚಿತ್ರದಲ್ಲೂ ಸಂಗೀತ ಸಂಯೋಜನೆ ಮಾಡಿದ್ದಾರೆ.

ದೀಲೀಪ್ ರಾಜ್ ಮತ್ತು ಸಂಜನಾ ಅಭಿನಯದ ಆಟೋಗ್ರಾಫ್ ಪ್ಲೀಸ್ ಎನ್ನುವ ಸಿನಿಮಾಕ್ಕೆ ತಾವೇ ಸಂಗೀತ ನಿರ್ದೇಶನ ಮಾಡುತ್ತಾರೆ. ಹೀಗೆ ಹಲವಾರು ಸಿನಿಮಾಕ್ಕೆ ಸಂಗೀತ ಸಂಯೋಜನೆ ನಿರ್ದೇಶನ ಹಾಗೂ ಗಾಯಕರು ಆಗಿ ತಮ್ಮನ್ನು ತಾವು ಸಂಪೂರ್ಣವಾಗಿ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಅಲೆಮಾರಿ ಚಿತ್ರಕ್ಕೆ ಕರ್ನಾಟಕ ರಾಜ್ಯ ಅತ್ಯುತ್ನಮ ಸಂಗೀತ ನಿರ್ದೇಶಕ ಪ್ರಶಸ್ತಿ, ಸೀಮಾ ಅತ್ತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ,ಬಜರಂಗಿ ಚಿತ್ರದ ನಿರ್ದೇಶನಕ್ಕೆ ಫಿಲ್ಮ್ ಫೇರ್ ಹಾಗೂ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಇವರ ತೆಕ್ಕೆಗೆ ಸೇರಿಕೊಂಡಿವೆ. ಇವರು ರೋಮಿಯೋ, ಲಕ್ಕಿ, ವಿಕ್ಟರಿ ಚಿತ್ರಗಳಲ್ಲಿ ಉತ್ತಮ ಗಾಯಕ ಆಗಿ ಹಾಡಿದ್ದಾರೆ. ವಿಕ್ಟರಿ ಸಿನಿಮಾ ಅಲ್ಲಿ ಕಾಲಿ ಕ್ವಾಟ್ರು ಬಾಟಲಿ ಹಾಂಗೆ ಲೈಫ್ ಈ ಹಾಡಂತೂ ಸಕ್ಕತ್ ಫೇಮಸ್ ಆಗಿತ್ತು. ಸಂಗೀತ ನಿರ್ದೇಶಕ ಆಗಿ ಆಟೋ ಗ್ರಾಫ್ , ರಾಜಧಾನಿ, ಯುಗ ಬಾಬಾ, ಜರಾಸಂಧ ,ಬಿರುಗಾಳಿ, ಮಚ್ಚಾ , ಜುಗಾರಿ, ಸಂಚಾರಿ, ಮುಕುಂದ ಮುರಾರಿ, ಕಲ್ಪನಾ 2 ಹೀಗೆ ಹಲವಾರು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಅರ್ಜುನ ಜನ್ಯ ಅವರು 2006 ರಲ್ಲಿ ಗೀತಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಇವರಿಗೆ ರಚಿತ ಎನ್ನುವ ಮಗಳು ಇದ್ದಾಳೆ .ಅವರ ಮಗಳು ಕೂಡ ಅದ್ಭುತವಾಗಿ ಕೀ ಬೋರ್ಡ್ ನುಡಿಸುತ್ತಾರೆ. ಹಾಗೂ ಅರ್ಜುನ ಜನ್ಯ ಅವರು ಝೀ ಕನ್ನಡ ಅಲ್ಲಿ ಸ ರಿ ಗ ಮ ಪ ಅಲ್ಲಿ ತೀರ್ಪುಗಾರರು ಆಗಿದ್ದರು. ಹಾಗೂ ಡಾನ್ಸಿಂಗ್ ಶೋ ಅಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.

ಇತ್ತೀಚೆಗೆ ವಿಜಯ ಪ್ರಕಾಶ್ ಅವರ ಎದುರು ಅರ್ಜುನ ಜನ್ಯ ಅವರ ಮಗಳು ರುಚಿತ ಅವರು ಕೀ ಬೋರ್ಡ್ ಅನ್ನು ಬಹಳ ಸುಂದರವಾಗಿ ಹಾಗೂ ಲಯಬದ್ದತೆ ಇಂದ ನುಡಿಸಿದ್ದು ಸ್ವತಃ ವಿಜಯ ಪ್ರಕಾಶ್ ಅವರು ಹುಬ್ಬೇರಿಸಿ ಆಶ್ಚರ್ಯ ಚಕಿತರಾಗಿದ್ದಾರೆ ಹಾಗೂ ರಚಿತ ಅವರನ್ನು ಹಾಡಿ ಹೊಗಳಿದ್ದಾರೆ. ತಂದೆಯಂತೆ ಅವರ ಸ್ವಭಾವ ಗುಣ ಹಾಗೂ ಅವರ ಹೋಲಿಕೆ ಇವರಲ್ಲಿ ಕಂಡು ಬಂದಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ವಿಡಿಯೋ ತುಂಬಾನೇ ವೈರಲ್ ಆಗಿದೆ ಇದನ್ನು ನೋಡಿದ ಅಭಿಮಾನಿಗಳು ಮುಂದೆ ಒಂದು ದಿನ ತನ್ನ ತಂದೆ ಹಾಗೆಯೇ ಸಂಗೀತ ಕ್ಷೇತ್ರದಲ್ಲಿ ತನ್ನ ಹೆಸರನ್ನು ಮೂಡಿಸುವುದರಲ್ಲಿ ಎರಡು ಮಾತಿಲ್ಲ ಎಂದು ಹಾಡಿ ಹೊಗಳಿದ್ದಾರೆ.

Leave a Comment

error: Content is protected !!