ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಟ್ ಆಗುತ್ತಿದೆಯೇ, ಹಾಗಿದ್ದರೆ ATM ಕಾರ್ಡ್ ಹೊಂದಿದ ಪ್ರತಿಯೊಬ್ಬರು ಈ ಬಗ್ಗೆ ತಿಳಿಯಿರಿ

ಈಗಂತೂ ಎಲ್ಲರೂ ಬ್ಯಾಂಕ್ ಖಾತೆ ಹೊಂದಿದ್ದು,ATM ಕಾರ್ಡ್ ಗಳ ಮೂಲಕ ತಮ್ಮ ಹಣವನ್ನು ಡ್ರಾ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಕಳ್ಳರ ಕೈಚಳದಿಂದ ಎಟಿಎಂ ಮಿಷನ್ ಗಳಲ್ಲಿ ಹಲವಾರು ಮೋಸ ನಡೆಯುತ್ತಿದೆ. ಗ್ರಾಹಕರಿಗೆ ತಿಳಿಯದ ಹಾಗೆ ಅವರ ಅಕೌಂಟ್ ನಿಂದ ಹಣ ಕಟ್ ಆಗುತ್ತಿದೆ. ಇದರ ಹಿಂದೆ ಕಳ್ಳರ ಕರಾಮತ್ತಿದೆ.

ಕಳ್ಳರು ಎಟಿಎಂಗಳಲ್ಲಿ ಹಣ ಕದಿಯಲು ಎರಡು ಟೆಕ್ನಿಕ್ ಉಪಯೋಗಿಸುತ್ತಾರೆ ಒಂದು ATM ಕ್ವೀಟ್, ಹಾಗೂ ಇನ್ನೊಂದು ಎಟಿಎಂ ಕಾರ್ಡ್ ಹಿಂದೆ ಇರುವ ಕಪ್ಪುಪಟ್ಟಿ. ಅದರಲ್ಲಿ ನಮ್ಮ ಅಕೌಂಟ್ ಡಿಟೇಲ್ಸ್ ಇರುತ್ತದೆ.ಕಳ್ಳರು ನಾವು ಹಣ ಡ್ರಾ ಮಾಡುವ ಮಿಷನ್ ನಲ್ಲಿ ಸ್ಕೀಂ ಡಿವೈಸ್ ಅನ್ನು ಅಳವಡಿಸಿರುತ್ತಾರೆ. ನಾವು ಕಾರ್ಡ್ ಸ್ಕ್ಯಾನ್ ಮಾಡಿದಾಗ ಅದರಲ್ಲಿ ನಮ್ಮ ಡಿಟೇಲ್ಸ್ ಎಲ್ಲಾ ಫೋರ್ಜರಿ ಯಾಗುತ್ತದೆ.

ಈ ಡುಬ್ಲಿಕೇಟ್ ಡಿವೈಸ್ ನಲ್ಲಿ ಒಂದು ಮೆಮೊರಿ ಕಾರ್ಡ್ ಹಾಗೂ ಬ್ಯಾಟರಿ ಇಟ್ಟಿರುತ್ತಾರೆ. ಎಟಿಎಂ ಪೀನ್ ಎಂಟರ್ ಮಾಡುವಾಗ ಸಿಸಿ ಕ್ಯಾಮರಾವನ್ನು ಫಿಕ್ಸ್ ಮಾಡಿರುತ್ತಾರೆ ಇದರಿಂದ ಕಳ್ಳರಿಗೆ ನಿಮ್ಮ ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿ ಸುಲಭವಾಗಿ ಸಿಗುವಂತಾಗುತ್ತದೆ.

ಆದರೆ ಕೇಂದ್ರ ಸರ್ಕಾರವು ಇದನ್ನು ತಡೆಗಟ್ಟಲು ಹೊಸ ನಿಯಮ ಜಾರಿಗೆ ತಂದಿದೆ. ಅದೇನೆಂದರೆ ಇನ್ನು ಮುಂದೆ 10 ಸಾವಿರಕ್ಕಿಂತ ಅಧಿಕ ಹಣವನ್ನು ವಿತ್ ಡ್ರಾ ಮಾಡಿದರೆ ನಿಮ್ಮ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಆ ಒಟಿಪಿಯನ್ನು ವೇರಿಫೈ ಮಾಡಿದ ನಂತರವೇ ನಿಮ್ಮ ಕೈಗೆ ನಿಮ್ಮ ಹಣ ಸಿಗುವುದು. ಈ ನಿಯಮವನ್ನ ಈಗಾಗಲೇ ಎಸ್ ಬಿಐ ಬ್ಯಾಂಕ್ ಜಾರಿಗೊಳಿಸಿದ್ದು, ಬೇರೆ ಬ್ಯಾಂಕ್ ಗಳು ಇ ನಿಯಮವನ್ನು ಜುಲೈ 1 ರಿಂದ ಜಾರಿಗೊಳಿಸುತ್ತವೆ. ಜೊತೆಗೆ ಇಎಂಇ ಚೀಪ್ ಇರುವ ಡೆಬಿಟ್ ಕಾರ್ಡ್ ಬಳಸುವುದರಿಂದ ನಿಮ್ಮ ಹಣ ಸೇಫ್ ಆಗಿ ಇರುತ್ತದೆ.

Leave A Reply

Your email address will not be published.

error: Content is protected !!