
ಚಿಕ್ಕ ಮಕ್ಕಳಿಗೆ ಬಾಧಿಸುವ ಕೆಮ್ಮು ಶೀತ ಕಫಕ್ಕೆ ಸೂಕ್ತ ಮನೆಮದ್ದು
ಚಿಕ್ಕ ಮಕ್ಕಳಲ್ಲಿ ಕಾಣಿಸುವ ಕೆಮ್ಮು, ಶೀತ, ಕಫದಂತಹ ರೋಗಗಳು ಬಹುಬೇಗನೆ ವಾಸಿಯಾಗದೆ ಆಸ್ಪತ್ರೆಗಳಿಲ್ಲಿ ಚಿಕಿತ್ಸೆ ಕೊಡಿಸುವ ಸಂಭವವಿರುತ್ತದೆ. ಹೀಗಾಗಿ ಮಕ್ಕಳ ಆರೋಗ್ಯ ತುಂಬಾ ಸೂಕ್ಷ್ಮ ವಾಗಿದ್ದು ತುಂಬಾ ಕಾಳಜಿ ವಹಿಸಬೇಕಾತ್ತದೆ. ಅಡುಗೆ ಪದಾರ್ಥಗಳನ್ನೇ ಬಳಸಿ ಮಕ್ಕಳಿಗೆ ಮನೆಮದ್ದು ನೀಡಬಹುದು.
ಚಿಕ್ಕ ಮಕ್ಕಳಿಗೆ ಕಾಡುವ ಶೀತ, ಕೆಮ್ಮು, ಕಫಾದಂತಹ ಸಮಸ್ಯೆಗಳಿಗೆ ಆರೋಗ್ಯಕರ ಪದಾರ್ಥ ಗಳಿಂದ ಮಾಡಿದ ಉತ್ತಮ ಕಷಯ ಉಪಯುಕ್ತ. ಕಶಾಯಕ್ಕೆ ಬೇಕಾದ ಪದಾರ್ಥಗಳು ವೀಳ್ಯದೆಲೆ, ದೊಡ್ಡ ಪತ್ರೆ, ಕಪ್ಪು ತುಳಸಿ, ಜಜ್ಜಿದ ಬೆಳ್ಳುಳ್ಳಿ, ಪುಡಿ ಮಾಡಿದ ಕರಿ ಮೆಣಸು,ಒಂದು ಚಿಟಿಕೆ ಉಪ್ಪು

ಕಶಾಯ ಮಾಡುವ ವಿಧಾನ: ವೀಳ್ಯದೆಲೆಯ ಮೇಲೆ ದೊಡ್ಡ ಪತ್ರೆ, ಕಪ್ಪು ತುಳಸಿ, ಜಜ್ಜಿದ ಬೆಳ್ಳುಳ್ಳಿ, ಪುಡಿ ಮಾಡಿದ ಕರಿ ಮೆಣಸು,ಒಂದು ಚಿಟಿಕೆ ಉಪ್ಪು ಹಾಕಿ ಮಡಜಿ ಬೀಡಾದ ರೀತಿ ಮಾಡಿಕೊಳ್ಳಬೇಕು . ಕಡ್ಡಿಆಕಾರದ ಚಮಚದಿಂದ ಈ ಬೀಡಾವನ್ನು ಚುಜ್ಜಿಕೊಂಡು ಒಲೆಯ ಮೇಲೆ ಸುಡಬೇಕು, ಸುಟ್ಟು ವೀಳ್ಯದೆಲೆ ಬೀಡಾವನ್ನು ಚೆನ್ನಾಗಿ ಹಿಡಿ ರಸ ತೆಗೆದು ಚಿಕ್ಕ ಮಕ್ಕಳಿಗೆ ಒಂದು ಚಮಚದಂತೆ ನೀಡಿದರೆ ಶೀತ , ಕಫ, ಕೆಮ್ಮಿ ನಂತಹ ರೋಗದಿಂದ ಮುಕ್ತಿ ಪಡೆಯಬಹುದು.