ಈ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಎರಡು ಪಟ್ಟು ಆಸೆಯಂತೆ

ಚಾಣಕ್ಯನ ನೀತಿಗಳು ಯಾರಿಗೆ ತಾನೇ ತಿಳಿದಿಲ್ಲ, ಸಮಾಜದಲ್ಲಿ ಹೇಗೆ ಬದುಕಬೇಕು, ಜೀವನ ಹೇಗೆ ನಡೆಸಬೇಕು ಎಲ್ಲದನ್ನೂ ಚಾಣಕ್ಯ ನೀತಿಯಲ್ಲಿ ವಿವರವಾಗಿ ತಿಳಿಸಲಾಗಿದೆ. ಚಾಣಕ್ಯ ಸ್ತ್ರೀಯರ ಬಗ್ಗೆ ಕೆಲವೊಂದಿಷ್ಟು ವಾಸ್ತವಗಳನ್ನು ತಿಳಿಸಿದ್ದಾರೆ ಅದು ಏನು ಅಂತ ತಿಳಿಯೋಣ.

ಮಹಿಳೆಯರಿಗೆ ಪುರುಷರಿಗಿಂತ ಆಸೆ ಜಾಸ್ತಿ ಎಂದು ಚಾಣಕ್ಯ ಹೇಳಿರುವ ಮಾತು. ಅದನ್ನು ಕೇಳಿದರೆ ಆಶ್ಚರ್ಯ ಆಗುವುದಂತು ಖಂಡಿತ. ನೀರಿನಲ್ಲಿ ಮೀನಿನ ಹೆಜ್ಜೆಯನ್ನು ಬೇಕಾದರೂ ಕಂಡುಹಿಡಿಯಲು ಸಾಧ್ಯ ಆದರೆ ಒಂದು ಹೆಣ್ಣಿನ ಮನಸಲ್ಲಿ ಏನಿದೆ ಎಂದು ತಿಳಿಯುವುದು ಅಸಾಧ್ಯ ಎಂಬ ಗಾದೆ ಮಾತಿದೆ. ಹಾಗೇ ಚಾಣಕ್ಯ ಹೇಳುವಂತೆ, ಮಹಿಳೆಯರು ಯಾರಿಗೂ ಅರ್ಥ ಆಗುವುದಿಲ್ಲ ಮತ್ತು ಮಹಿಳೆಯರ ಮನಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.

ಯಾವ ಹೆಣ್ಣು ಗಂಡನನ್ನು ಅತಿಯಾಗಿ ಪ್ರೀತಿಸುತ್ತಾಳೋ ಅಂತಹ ಹೆಣ್ಣಿಗೆ ಗಂಡ ಅವಳು ಹೇಳಿದಂತೆ ಕೇಳುವ ಅಡಿಯಾಳಾಗಿ ಇರುತ್ತಾನಂತೆ. ತಾಮ್ರದ ಪಾತ್ರೆಗಳನ್ನು ಹುಳಿಯಿಂದ ಸ್ವಚ್ಛಗೊಳಿಸುವ ಹಾಗೆ ಋತುಚಕ್ರ ಹೆಣ್ಣುಮಕ್ಕಳನ್ನು ಶುದ್ಧ ಗೊಳಿಸುತ್ತದೆಯಂತೆ.

ಯಾರಿಂದ ಅಪಾಯ ಹೆಚ್ಚು ಎಂಬುದರ ಕುರಿತು ಚಾಣಕ್ಯ ತಮ್ಮ ಚಾಣಾಕ್ಷ ಬುದ್ಧಿಯಿಂದ ತಿಳಿಸಿದ್ದಾರೆ. ಅವೇನೆಂದರೆ, ಬೆಂಕಿಯಿಂದ, ನೀರಿನಿಂದ ಹಾಗೂ ಅತಿಯಾಗಿ ಆಸೆ ತುಂಬಿದ ಹೆಣ್ಣಿನಿಂದ ಮೂರ್ಖ ಜನರಿಂದ, ದದ್ದ ಜನರಿಂದ ಅಪಾಯ ಕಟ್ಟಿಟ್ಟ ಬುತ್ತಿ ಇಂಥವರಿಂದ ಸಾಧ್ಯ ಆದಷ್ಟು ದೂರ ಇರಬೇಕು ಎಂದು ಚಾಣಕ್ಯ ತಿಳಿಸಿದ್ದಾರೆ.

ಒಬ್ಬ ಹೆಣ್ಣು ಮಗಳು ಸುಂದರವಾಗಿ ಇಲ್ಲದಿದ್ದರೂ ಒಳ್ಳೆಯ ಸಂಸ್ಕೃತಿ, ನಡತೆಯನ್ನು ಹೊಂದಿದ ಒಳ್ಳೆಯ ಕುಟುಂಬದ ಹೆಣ್ಣನ್ನು ವಿವಾಹ ಆಗಬೇಕು ಎಂದು ಚಾಣಕ್ಯ ತಮ್ಮ ನೀತಿಯಲ್ಲಿ ತಿಳಿಸಿದ್ದಾರೆ. ಕಾರಣ, ಹೆಣ್ಣು ಸುಂದರ ಸುಂದರವಾಗಿದ್ದು, ರೂಪವತಿ ಆಗಿದ್ದರು ಅವಳಲ್ಲಿ ಒಳ್ಳೆಯ ಸಂಸ್ಕಾರ ಇಲ್ಲ ಎಂದಾಗ ಅಂತಹ ಹೆಣ್ಣನ್ನು ವಿವಾಹ ಆಗಬಾರದು ಎನ್ನುತ್ತಾರೆ.

ಪುರುಷನಲ್ಲಿರುವ ಎಲ್ಲಾ ಶಕ್ತಿಯನ್ನೂ ಸ್ತ್ರೀ ಒಂದೇ ಬಾರಿ ಹೀರಿಬಿಡುತ್ತಾಳಂತೆ. ಎಲ್ಲಾ ವಿಷಯಗಳಿಗೂ ಗಂಡನ ಅನುಮತಿ ಪಡೆಯಬೇಕಂತೆ ಹಾಗೇ ಮಾಡದಿದ್ದಲ್ಲಿ ಗಂಡನ ಆಯಸ್ಸು ಕಡಿಮೆ ಆಗುತ್ತದೆ ಎಂದು ಚಾಣಕ್ಯ ತಿಳಿಸುತ್ತಾರೆ. ಮಹಿಳೆಯರಿಗೆ ಪುರುಷರಿಗಿಂತ 2ಪಟ್ಟು ಹಸಿವು ಹೆಚ್ಚು, ನಾಚಿಕೆ ನಾಲ್ಕು ಪಟ್ಪು, ಧೈರ್ಯ ಆರು ಪಟ್ಟು ಮತ್ತು ಆಸೆ ಎಂಟು ಪಟ್ಪು ಹೆಚ್ಚಾಗಿ ಇರುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.

Leave A Reply

Your email address will not be published.

error: Content is protected !!