ಆಗಸ್ಟ್ ನಲ್ಲಿ ಶುರುವಾಗಲಿದೆ ಈ ವರ್ಷದ ಬಿಗ್ ಬಾಸ್. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಿರುತ್ತಾರೆ ಗೊತ್ತಾ

ಕನ್ನಡದಲ್ಲಿ ಎಲ್ಲರಿಗೂ ಅತ್ಯಂತ ಇಷ್ಟವಾಗುವ ರಿಯಾಲಿಟಿ ಶೋಗಳಲ್ಲಿ ಒಂದು ಬಿಗ್ ಬಾಸ್ ಕೂಡ ಒಂದು. ಹಿಂದಿಯಲ್ಲಿ ಮೊದಲು ಆರಂಭವಾದ ಬಿಗ್ ಬಾಸ್, ಇದೀಗ ಸೌತ್ ನ ಎಲ್ಲಾ ಭಾಷೆಗಳಲ್ಲಿಯೂ ಪ್ರಸಾರವಾಗುತ್ತಿವೆ. ಅದರಲ್ಲೂ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ತುಂಬಾನೇ ಫೇಮಸ್ ಆಗಿದೆ ಯಾಕೆಂದರೆ ಈ ಬಿಗ್ ಬಾಸ್ ಕಾರ್ಯಕ್ರಮವನ್ನು ಹೋಸ್ಟ್ ಮಾಡ್ತಾ ಇರೋದು ಕಿಚ್ಚ ಸುದೀಪ್. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುತ್ತಿರುವ ಕಾರಣದಿಂದಲೇ ಬಿಗ್ ಬಾಸ್ ಇನ್ನಷ್ಟು ಹಿಟ್ ಆಗಿದೆ.

ಬಿಗ್ ಬಾಸ್ ಈಗಾಗಲೇ ಎಂಟು ಸೀಸನ್ ಗಳನ್ನ ಮುಗಿಸಿದೆ. ಇದೀಗ ಬಿಗ್ ಬಾಸ್ 9ನೇ ಸೀಸನ್ ಯಾವಾಗ ಆರಂಭವಾಗುತ್ತೆ ಅಂತ ಬಿಗ್ ಬಾಸ್ ಅಭಿಮಾನಿಗಳು ಕಾಯ್ತಾ ಇದ್ದಾರೆ. ಈಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಅನ್ನು ಕೊಟ್ಟಿದೆ ಬಿಗ್ ಬಾಸ್ ತಂಡ. ಹೌದು ಕಲರ್ಸ್ ನಲ್ಲಿ ಈ ಬಾರಿ ಎರಡು ಬಗೆಯ ಬಿಗ್ ಬಾಸ್ ಪ್ರಸಾರವಾಗಲಿದೆ. ಒಂದು ಬಿಗ್ ಬಾಸ್ ದೊಡ್ಡ ಸೀಸನ್. ಇನ್ನೊಂದು ಮಿನಿ ಬಿಗ್ ಬಾಸ್. ಹೌದು ಈ ಬಾರಿ ಮಿನಿ ಬಿಗ್ ಬಾಸ್ ಕೂಡ ಪ್ರಸಾರವಾಗುತ್ತದೆ. ಕಳೆದ ಬಾರಿಯೂ ಬಿಗ್ ಬಾಸ್ ಸೀಸನ್ 8 ಮುಗಿದ ನಂತರ ಮಿನಿ ಬಿಗ್ ಬಾಸ್ ಆರಂಭವಾಗಿತ್ತು. ಇದರಲ್ಲಿ ಧಾರಾವಾಗಿಯಲ್ಲಿ ನಟಿಸುವ ಕಲಾವುದರು ಸ್ವರ್ಧಿಯಾಗಿ ಬಿಗ್ ಬಾಸ್ ಮನೆ ಸೇರಿದ್ದರು!

ಈ ಬಾರಿಯೂ ಮಿನಿ ಬಿಗ್ ಬಾಸ್ ಪ್ರಸಾರವಾಗಲಿದ್ದು ವೋಟ್ ಸೆಲೆಕ್ಟ್ ನಲ್ಲಿ ವೀಕ್ಷಿಸಬಹುದು. ಸುಮಾರು 45 ದಿನಗಳ ಕಾಲ ನಡೆಯುವ ಬಿಗ್ ಬಾಸ್ ಮಿನಿ ಮುಗಿದ ಮೇಲೆ, ಬಿಗ್ ಬಾಸ್ ಸೀಸನ್ 9 ಪ್ರಸಾರವಾಗಲಿದೆ. ಇದು 90 ದಿನಗಳ ಕಾಲ ನಡೆಯಲಿದೆ. ಇನ್ನು ಬಿಗ್ ಬಾಸ್ ಮಿನಿ ಹಾಗೂ ಬಿಗ್ ಬಾಸ್ 9ನೇ ಸೀಸನ್ ಎರಡನ್ನು ಕಿಚ್ಚ ಸುದೀಪ್ ಅವರೇ ನಡೆಸಿಕೊಡಲಿದ್ದಾರೆ. ಈ ಬಾರಿಯ ಬಿಗ್ ಬಾಸ್ ನ ಸ್ಪರ್ಧಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮುಖಗಳೇ ಆಗಿರ್ತಾರೆ

ಇನ್ನು ಮಿನಿ ಬಿಗ್ ಬಾಸ್ ನಲ್ಲಿ ಯಾರೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ ಎನ್ನುವುದು ಎಲ್ಲರ ಕುತೂಹಲ. ಮಿನಿ ಬಿಗ್ ಬಾಸ್ ಗೆ 15 ಸ್ಪರ್ಧಿಗಳನ್ನು ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವವರು, ಇನ್ಫ್ಲೂಯೆನ್ಸರ್ ಗಳು ಹೆಚ್ಚಾಗಿ ಭಾಗವಹಿಸಲಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಈ ವರ್ಷದ ಬಿಗ್ ಬಾಸ್ ಗೆ ಆರ್ಯವರ್ಧನ್ ಗುರೂಜಿ, ಡ್ರೋನ್ ಪ್ರತಾಪ್, ಟಿಕ್ ಟಾಕ್ ಸ್ಟಾರ್ ಗಳಾದ ಸೋನು ಗೌಡ ಮತ್ತು ಬಿಂದು ಗೌಡ , ಕಾಫಿನಾಡು ಚಂದು , ಲಾಯರ್ ಜಗದೀಶ್ ಹಾಗೆ ಸೀರಿಯಲ್ ಸೆಲೆಬ್ರಿಟಿಗಳಾದ ನಮ್ರತ ಗೌಡ ವಿಜಯ್ ಸೂರ್ಯ, ಮತ್ತು ಸಿನಿಮಾ ಕ್ಷೇತ್ರದಿಂದ ರಾಗಿಣಿ ದ್ವಿವೇದಿ ಮತ್ತು ಶಾನ್ವಿ ಶ್ರೀವಾತ್ಸವ ಈ ಎಲ್ಲ ಸ್ಪರ್ಧಿಗಳ ಹೆಸರು ಈ ವರ್ಷದ ಬಿಗ್ ಬಾಸ್ ಗೆ ಹೋಗುವುದು ಖಚಿತ ಎಂಬ ಸುದ್ದಿ ಹೊರಬರುತ್ತಿದೆ.

ಈಗಾಗಲೇ ಬಿಗ್ ಬಾಸ್ ತಂಡ ಸ್ಪರ್ಧಿಗಳ ಹುಡುಕಾಟದ ಕಾರ್ಯದಲ್ಲಿ ತೊಡಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವವರ ಬಯೋಡೇಟಾ ತೆಗೆದು ಅವರನ್ನು ಸಂಪರ್ಕಿಸುತ್ತಿದೆ ಅಂತ ವರದಿಯಾಗಿದೆ. ಇನ್ನು ಮಿನಿ ಬಿಗ್ ಬಾಸ್ ನಲ್ಲಿ ಇದ್ದ ಕೆಲವು ಸದಸ್ಯರು ಬಿಗ್ ಬಾಸ್ ಸೀಸನ್ 9ರಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಇನ್ನು 90 ದಿನಗಳ ಕಾಲ ನಡೆಯಲಿರುವ ಬಿಗ್ ಬಾಸ್ ಸೀಸನ್ 9 ಈ ಬಾರಿಯೂ ವಿಶೇಷವಾಗಿರಲಿದು ಸ್ಪರ್ಧಿಗಳ ಆಯ್ಕೆಯೂ ಕೂಡ ಅಷ್ಟೇ ವಿಭಿನ್ನವಾಗಿರಲಿದೆ. ಆದರೆ ಇದರಲ್ಲಿ ಯಾವೆಲ್ಲಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎನ್ನುವುದನ್ನು ವಾಹಿನಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಈ ಬಾರಿ ಎರಡು ಬಿಗ್ ಬಾಸ್ ನಡೆಯಲಿದೆ ಎನ್ನುವುದರ ಬಗ್ಗೆ ಮಾತ್ರ ಸದ್ಯ ಮಾಹಿತಿ ಸಿಕ್ಕಿದೆ.

Leave a Comment

error: Content is protected !!