ಭಕ್ತರಿಗೆ ಬಿರಿಯಾನಿಯನ್ನು ಪ್ರಸಾದವಾಗಿ ನೀಡುವ ದೇಶದ ಏಕೈಕ ದೇವಾಲಯ ಯಾವುದೇ ಗೊತ್ತೇ?

ಯಾವುದೇ ದೇವಾಲಯಗಳು ಭಕ್ತರಿಗೆ ಬಿರಿಯಾನಿಯನ್ನು ಪ್ರಸಾದವಾಗಿ ಕೊಡೋದಿಲ್ಲ ಆದ್ರೆ ಇಲ್ಲೊಂದು ದೇವಾಯಲ ತುಂಬಾನೇ ವಿಶೇಷತೆಯನ್ನು ಹೊಂದಿದೆ ಅಂದ್ರೆ ನಿಜಕ್ಕೂ ನಂಬಲೇ ಬೇಕು. ಹೌದು ಈ ದೇವಾಯಲದಲ್ಲಿ ಬರುವಂತ ಭಕ್ತರಿಗೆ ಬಿರಿಯಾನಿಯನ್ನು ಪ್ರಸಾದವಾಗಿ ಕೊಡಲಾಗುತ್ತದೆ ಆದ್ದರಿಂದ ಈ ದೇವಾಯಲಕ್ಕೆ ಬಿರಿಯಾನಿ ನೀಡುವ ದೇವಾಯಲ ಎಂಬುದಾಗಿ ಹೆಸರು ಪಡೆದುಕೊಂಡಿದೆ. ಅಷ್ಟಕ್ಕೂ ಈ ದೇವಾಯಲ ಎಲ್ಲಿದೆ ಹಾಗೂ ಇದರ ವಿಶೇಷತೆ ಏನು? ಇಲ್ಲಿ ಪ್ರಾಸದವಾಗಿ ಬಿರಿಯಾನಿಯನ್ನು ಕೊಡಲು ಕಾರಣವೇನು ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ.

ಈ ದೇವಾಲಯ ಇರೋದು ಭಾರತದಲ್ಲೇ ಇದು ಇರೋದಾದ್ರೂ ಎಲ್ಲಿ ಅನ್ನೋದನ್ನ ತಿಳಿಯುವುದಾದರೆ ತಮಿಳುನಾಡಿನ ಮಧುರೈನಲ್ಲಿರುವ ವಡಕ್ಕಂಪಟ್ಟಿ ಎಂಬ ಹಳ್ಳಿಯಲ್ಲಿ ಇಲ್ಲಿ ಸುಮಾರು 1937ರಿಂದ ಬಿರಿಯಾನಿಯನ್ನು ಪ್ರಸಾದದಂತೆ ನೀಡಲಾಗುತ್ತಿದೆ, ಈ ಹಳ್ಳಿಯ ಗ್ರಾಮ ದೇವತೆ ಮುನಿಯಾಂದಿ ಎಂಬುದಾಗಿ ಈ ದೇವತೆಯ ಹೆಸರಿನಲ್ಲಿ ಗುರುಸಾಮಿ ನಾಯ್ಡು ಎಂಬವರು ಹೋಟೆಲ್ ಒಂದನ್ನು ಆರಂಭಿಸಿದ್ದರು, ಇದಾದ ಬಳಿಕ ಇದೆ ಹೆಸರಿನಲ್ಲಿ ಹಲವು ಹೋಟಲ್ಗಳು ನಿರ್ಮಾಣವಾಗಿವೆ.

ಈ ದೇವಾಯಕ್ಕೆ ಅಂದಿನಿಂದ ಇಂದಿನವರೆಗೂ ಹಬ್ಬ ಹರಿದಿನಗಳಲ್ಲಿ ಈ ದೇವಸ್ಥಾನದಲ್ಲಿ ಬಿರಿಯಾನಿಯನ್ನು ಪ್ರಸಾದವಾಗಿ ಕೊಡಲು ಕಾರಣವೇನು ಅನ್ನೋದನ್ನ ತಿಳಿಯುವುದಾದರೆ ಈ ಎಲ್ಲ ಹೋಟೆಲ್ ಗಳು ಉತ್ತಮವಾದ ಹಾಗೂ ರುಚಿಯಾದ ಮಾಂಸಾಹಾರಿ ಆಹಾರವನ್ನು ಗ್ರಾಹಕರಿಗೆ ನೀಡಿ ಫೇಮಸ್ ಆಗಿವೆ ಹಾಗಾಗಿ ಇಲ್ಲಿ ಬರುವಂತ ಭಕ್ತರಿಗೆ ಹೋಟೆಲ್ ಮಾಲೀಕರು ಬಿರಿಯಾನಿಯನ್ನು ಪ್ರಸಾದವಾಗಿ ಕೊಡುತ್ತಾರೆ.ಇಡೀ ದಕ್ಷಿಣ ಭಾರತದಲ್ಲಿ ಈಗ ಸುಮಾರು 1500 ಕ್ಕೂ ಹೆಚ್ಚು ಮುನಿಯಾಂದಿ ಹೋಟೆಲ್ ಗಳಿವೆ.

ಸುಮಾರು 8,000 ಸಾವಿರಕ್ಕೂ ಅಧಿಕ ಜನ ಬಿರಿಯಾನಿ ಪ್ರಸಾರವನ್ನು ಸ್ವೀಕಾರ ಮಾಡುತ್ತಾರೆ. ಹಾಗಾಗಿ ಈ ಎಲ್ಲ ಹೋಟೆಲ್ ಮಾಲೀಕರು ಮುನಿಯಾಂದಿ ದೇವಿಯ ಹೆಸರಲ್ಲಿ ಹಬ್ಬವನ್ನು ಆಯೋಜಿಸಿ ಒಂದುಗೂಡುತ್ತಾರೆ. ಈ ವೇಳೆ ಮಟನ್ ಬಿರಿಯಾನಿಯನ್ನೇ ಪ್ರಸಾದವಾಗಿ ವಿತರಿಸಲಾಗುತ್ತದೆ. ವರದಿಗಳ ಪ್ರಕಾರ ಮುನಿಯಾಂದಿ ದೇವಿಯ ದೇವಸ್ಥಾನಕ್ಕೆ ಸುಮಾರು 4 ಟನ್ ಅಕ್ಕಿ ಮತ್ತು 600 ಮೇಕೆಗಳನ್ನು ಅರ್ಪಣೆ ಮಾಡಲಾಗುತ್ತದೆ. ಅದನ್ನು ಬಿರಿಯಾನಿ ಮಾಡಲು ಬಳಸಲಾಗುತ್ತದೆ ಮತ್ತು ನಂತರ ಅದನ್ನು ಪ್ರಸಾದದ ರೂಪದಲ್ಲಿ ನೈವೇದ್ಯ ಮಾಡುತ್ತಾರೆ.

Leave a Comment

error: Content is protected !!