ದೇಹದ ತೂಕವನ್ನು ಹೆಚ್ಚಿಸುವ ಸರಳ ಉಪಾಯ, ಒಮ್ಮೆ ಟ್ರೈ ಮಾಡಿ

ಶರೀರದ ತೂಕವನ್ನು ಹೆಚ್ಚಿಸಿಕೊಳ್ಳಲು ಏನೆಲ್ಲಾ ಪ್ರಯತ್ನವನ್ನು ಮಾಡಿ ಸೋತಿರುತ್ತೇವೆ ಆದರೆ ಎಷ್ಟು ಏನೇ ಪ್ರಯತ್ನ ಪಟ್ಟರೂ ತೂಕ ಹೆಚ್ಚು ಆಗಲ್ಲಾ. ಅತಿ ವೇಗವಾಗಿ ಹಾಗೂ ಆರೋಗ್ಯದಿಂದ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಕೆಲವರು ಬೇರೆ ಬೇರೆ ಮೆಡಿಸಿನ್ಸ್ ತಗೊಳ್ತಾರೆ ಆದರೆ ಇದರಿಂದ ತೂಕ ಹೆಚ್ಚು ಆಗಟ್ಟೋ ಇಲ್ಲವೋ ಏನಾದರೂ ಸೈಡ್ ಎಫೆಕ್ಟ್ಸ್ ಆಗೋದಂತು ಖಂಡಿತಾ. ನಾವು ತೂಕವನ್ನು ಹೆಚ್ಚು ಅಥವಾ ಕಡಿಮೆ ಮಾಡಿಕೊಳ್ಳಬೇಕು ಅಂತ ಇದ್ರೆ, ಅದು ಆರೋಗ್ಯದಿಂದ ಕೂಡ ಇರಬೇಕು. ಹಾಗಾದರೆ ನಾವು ಈ ಲೇಖನದಲ್ಲಿ ತಿಳಿಸುವ ಈ ಟಿಪ್ಸ್ ಗಳನ್ನಾ ಅನುಸರಿಸಿದರೆ ತೂಕದಲ್ಲಿ ಹೆಚ್ಚಳ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ.

ತೂಕವನ್ನು ಹೆಚ್ಚು ಮಾಡಿಕೊಳ್ಳಬೇಕು ಅಂದ್ರೆ, ನಾವು ದಿನ ತೆಗೆದುಕೊಳ್ಳವುದಕ್ಕಿಂತ ಹೆಚ್ಚು ಕ್ಯಾಲೋರಿ ಇರುವ ಆಹಾರ ಸೇವನೆ ಮಾಡಬೇಕು. ಅಂದಾಗ ಮಾತ್ರ ನಮ್ಮ ಶರೀರದಲ್ಲಿ ಬದಲಾವಣೆ ಕಾಣಲು ಸಾಧ್ಯ. ಹೆಚ್ಚು ಕ್ಯಾಲೋರಿ ಇರುವ ಪದಾರ್ಥಗಳಲ್ಲಿ ಬಾಳೆ ಹಣ್ಣು ಕೂಡ ಒಂದು. ಬಾಳೆ ಹಣ್ಣು ಶರೀರದ ತೂಕ ಹೆಚ್ಚಿಸುವಲ್ಲಿ ತುಂಬಾ ಸಹಾಯಕಾರಿ. ಆದರೆ ಬಾಳೆ ಹಣ್ಣನ್ನ ಸರಿಯಾಗಿ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಅಂದಾಗ ಮಾತ್ರ ತೂಕ ಹೆಚ್ಚಿಸಿಕೊಳ್ಳಬಹುದು. ಬಾಳೆ ಹಣ್ಣಿನಲ್ಲಿ ಕ್ಯಾಲೋರಿ ಮತ್ತು ಪೋಷಕಾಂಶಗಳು ಹೆಚ್ಚಾಗಿ ಇರತ್ತೆ. ಇದನ್ನ ಸೇವಿಸೋಡು ಹೇಗೆ ಅಂದರೆ,

ಎರಡೂ ಬಾಳೆ ಹಣ್ಣು ತೆಗೆದುಕೊಂಡು ಸಿಪ್ಪೆ ತೆಗೆದು ಸಣ್ಣ ಸಣ್ಣ ಪೀಸ್ ಆಗಿ ಕಟ್ ಮಾಡಿಕೊಂಡು ಅದನ್ನ ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ೧೦/೧೨ ಒಣ ದ್ರಾಕ್ಷಿ, ೬/೯ ಬಾದಾಮಿ, ಕಾಯಿಸಿ ತಣ್ಣಗಾದ ಹಾಲು ೨೦೦ml ಅಷ್ಟು ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿಕೊಂಡು ಜ್ಯೂಸ್ ತರ ಮಾಡಿಕೊಂಡು ಗ್ಲಾಸಿಗೆ ಹಾಕಿಕೊಂಡು ಕುಡಿಯಬೇಕು. ಇದನ್ನ ಬೆಳಿಗ್ಗೆ ತಿಂಡಿಯ ಜೊತೆಗೆ ಒಂದು ಗ್ಲಾಸ್ ಅಷ್ಟು ತೆಗೆದುಕೊಳ್ಳಬೇಕು. ಇದು ತುಂಬಾ ಆರೋಗ್ಯವಾಗಿ ತೂಕ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ತೂಕವನ್ನು ಇನ್ನೂ ಫಾಸ್ಟ್ ಆಗಿ ಹೆಚ್ಚಿಸಿಕೊಳ್ಳಬೇಕು ಅಂದ್ರೆ, ೧/೨ ಸ್ಪೂನ್ ಅಷ್ಟು ಹಸುವಿನ ತುಪ್ಪವನ್ನು ಬೆರೆಸಿ ಕುಡಿಯಬೇಕು. ಇದರಿಂದ ಕೇವಲ ಒಂದು ವಾರದಲ್ಲಿ ನಿಮ್ಮ ಶರೀರದಲ್ಲಿ ಬದಲಾವಣೆ ಕಾಣಬಹುದು. ಬೇಕಿದ್ದರೆ ಇದರಲ್ಲಿ ಜೇನುತುಪ್ಪ ಕೂಡ ಸೇರಿಸಿ ಕುಡಿಯಬಹುದು.

ಹಾಗೇ ಈ ಜ್ಯೂಸ್ ಅನ್ನು ಪ್ರತೀ ದಿನ ಕುದಿಯುತ್ತಿದ್ದ ಹಾಗೇ ಡಯೆಟ್ ನಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು. ಮೊಟ್ಟೆಯನ್ನು ಸೇವಿಸಬೇಕು. ಇದರಲ್ಲಿ ಹೈ ಕ್ಯಾಲೋರಿ ಇರುವುದರಿಂದ ಬೇಗ ತೂಕ ಹೆಚ್ಚಿಸಿಕೊಳ್ಳಬಹುದು. ಹಾಗೇ ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ಹಾಲಿಗೆ ಬೀಜ ತೆಗೆದು ೭/೮ ಖರ್ಜೂರ ವನ್ನ ೩/೪ ಗಂಟೆಗಳ ಕಾಲ ನೆನೆಸಿಟ್ಟು ಮಲಗುವ ಮುನ್ನ ಅದನ್ನ ಕುದಿಸಿ ಆರಿಸಿ ಕುಡಿಯಬೇಕು. ಹೀಗೆ ರಾತ್ರಿ ಸಮಯದಲ್ಲಿ ಖರ್ಜೂರ ಮತ್ತು ಹಾಲನ್ನು ಸೇವಿಸುವುದರಿಂದಲೂ ಬೇಗ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಇದರಿಂದ ರಾತ್ರಿ ನಿದ್ದೆ ಕೂಡಾ ಚೆನ್ನಾಗಿ ಬರತ್ತೆ.

ಅಷ್ಟೇ ಅಲ್ಲದೆ ಕೇವಲ ಅರ್ಧ ಗಂಟೆ ಯಾವುದೇ ಎಕ್ಸರ್ಸೈಜ್ ಮಾಡಬೇಕು ಇಲ್ಲವಾದರೆ ನಾವು ತೆಗೆದುಕೊಂಡ ಈ ಆಹಾರಗಳು ಸರಿಯಾಗಿ ಜೀರ್ಣವಾಗಿ ನಮ್ಮ ದೇಹಕ್ಕೆ ಬೇಕಾದ ಕ್ಯಾಲೋರಿ ಮತ್ತು ಪೋಷಕಾಂಶಗಳು ಸಿಗದೆ ಬಾರಿ ಉಷ್ಣ ಆಗತ್ತೆ. ಇದರಿಂದ ಮುಖದಲ್ಲಿ ಮೊಡವೆಗಳು ಆಗಬಹುದು. ಪ್ರತೀ ದಿನ ಹೆಚ್ಚು ನೀರನ್ನು ಸಹ ಕುಡಿಯಬೇಕು. ಪ್ರತೀ ದಿನ ಹೀಗೆ ಮಾಡುವುದರಿಂದ ಯಾವುದೇ ಸೈಡ್ ಎಫೆಕ್ಟ್ಸ್ ಇಲ್ಲದೆ ಆರಾಮವಾಗಿ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

Leave A Reply

Your email address will not be published.

error: Content is protected !!