ಕೋಟಿ ಖರ್ಚು ಸರ್ಜರಿ ಮಾಡಿಸಿಕೊಂಡ ಮಾಡೆಲ್! ಸರ್ಜರಿ ನಂತರ ನಡೆದಿದ್ದೇ ಬೇರೆ

ಮಾಡೆಲ್ ಲೋಕದ ಒಂದು ವಿಚಿತ್ರ ಇದು. ಮಾಡೆಲ್ ಗಳು ತಾವು ಇನ್ನಷ್ಟು ಸುಂದರವಾಗಿ ಕಾಣಬೇಕು, ಫೇಮಸ್ ಆಗ್ಬೇಕು ಅಂತ ಇದ್ದ ಸೌಂದರ್ಯವನ್ನು ಬಿಟ್ಟು ಸರ್ಜರಿಯ ಮೊರೆ ಹೋಗುತ್ತಾರೆ. ಇದರಿಂದ ಅವರು ಅನುಭವಿಸುವ ಅನಾರೋಗ್ಯ ಸಮಸ್ಯೆ ಅಷ್ಟಿಷ್ಟಲ್ಲ. ಹೀಗೆ ತಾನು ಕೂಡ ಫೇಮಸ್ ಆಗಬೇಕು. ಕಿಮ್ ಕರ್ದಾಶಿಯನ್ ಅಂತೆ ಮಾಡೆಲ್ ಲೋಕದಲ್ಲಿ ಮಿಂಚಬೇಕು ಅಂದುಕೊಂಡಿದ್ದ ಜನಿಫರ್ ಪಂಪ್ಲೋನ ಮಾಡಿದ್ದೇನು ಗೊತ್ತಾ!?

ಮಾಡೆಲ್ ಹಾಗೂ ನಟಿಯಾಗಿರುವ ಕಿಮ್ ಕರ್ದಾಶಿಯನ್ ಬಗ್ಗೆ ನಿಮ್ಮಲ್ಲಿ ಹಲವರಿಗೆ ಗೊತ್ತಿರಬಹುದು. ಆಕೆ ಒಬ್ಬ ಪೇಮಸ್ ಮಾಡೆಲ್ ನಟಿ ಹಾಗೂ ಯಶಸ್ವಿ ಉದ್ಯಮಿ ಕೂಡ. ಮಾಡೆಲ್ ಜಗತ್ತಿಗೆ ಕಾಲಿಡುವ ಹಲವರಿಗೆ ಕಿಮ್ ಕರ್ದಾಶಿಯನ್ ಸ್ಪೂರ್ತಿ. ತಾನು ಕೂಡ ಅವರಂತೆ ಕಾಣಿಸಬೇಕು ಅಂತ ಜೆನಿಫರ್ ಪಂಪ್ಲೋನ ಕಳೆದ 12 ವರ್ಷಗಳಿಂದ ಸುಮಾರು 40 ಬಾರಿ ಸರ್ಜರಿಗೆ ಒಳಗಾಗಿದ್ದಾರೆ.

ದೇಹದ ವಿವಿಧ ಭಾಗಗಳಿಗೆ ಬೇರೆಬೇರೆ ರೀತಿಯ ಸರ್ಜರಿಯನ್ನ ಮಾಡಿಸಿಕೊಂಡಿದ್ದಾರೆ ಜೆನಿಫರ್ ಪಂಪ್ಲೋನ. ಈ ಶಸ್ತ್ರಚಿಕಿತ್ಸೆಗಳೇನು ಯಶಸ್ವಿಯಾಗಿದ್ವು ಒಂದು ಕಾಲದಲ್ಲಿ ಆಕೆಯು ಕೂಡ ಥೇಟ ಕಿಮ್ ಕರ್ದಾಶಿಯನ್ ತರಾನೇ ಕಾಣುತ್ತಿದ್ರು. ಇದೇ ಕಾರಣಕ್ಕೆ ಜನಿಫರ್ ತುಂಬಾ ಫೇಮಸ್ ಆದ್ರೂ. ಜನ ಅವರನ್ನ ಕಿಮ್ ಕರ್ದಾಶಿಯನ್ ಅಂತಲೇ ಗುರುತಿಸುವುದಕ್ಕೆ ಶುರು ಮಾಡಿದ್ರು. ಸುಮಾರು ನಾಲ್ಕು ಕೋಟಿಗೂ ಅಧಿಕ ವೆಚ್ಚದಲ್ಲಿ ಸರ್ಜರಿಯನ್ನ ಮಾಡಿಸಿಕೊಂಡಿದ್ದರು ಜೆನಿಫರ್ ಪಂಪ್ಲೋನಾ.

ಜೆನಿಫರ್ ಪಂಪ್ಲೋನ ಒಂದು ರೇಂಜ್ ಗೆ ಫೇಮಸ್ ಆದ್ರೂ ಸರಿ. ಆದರೆ ಒಂದು ಹಂತ ತಲುಪಿದ ಮೇಲೆ ಜೆನಿಫರ್ ಗೆ ಈ ಲುಕ್ ಇಷ್ಟವಾಗಲಿಲ್ಲ. ತಾನು ಕಿಮ್ ಕರ್ದಾಶಿಯನ್ ಆಗಿಯೇ ಗುರುತಿಸಿಕೊಳ್ಳುವುದು ಬೇಡ ತಾನು ಮೊದಲಿನಂತೆ ಆಗಬೇಕು ಅಂತ ಜನಿಫರ್ ಪಂಪ್ಲೋನಾಗೆ ಅನಿಸಿದೆ. ಅದಕ್ಕಾಗಿ ಈಗ ಮತ್ತೆ ಕೋಟಿಗಟ್ಟಲೆ ಖರ್ಚು ಮಾಡಿ ತಾನು ಮೊದಲಿನಂತೆ ಆಗಲು ಸರ್ಜರಿ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.

ಜನಿಫರ್ ಪಂಪ್ಲೋನ ಅವರಿಗೆ ಮೊದಮೊದಲು ಕಿಮ್ ಕರ್ದಾಶಿಯನ್ ಅಂತ ಜನ ಗುರುತಿಸುವುದು ಹಾಗೆ ಕರೆಯುವುದು ಇಷ್ಟವಾಗುತ್ತಿತ್ತು. ಆದ್ರೆ ಈಗೀಗ ಅವರಿಗೆ ಇದು ಕಿರಿಕಿರಿ ಅನ್ನಿಸುತ್ತಿದೆಯಂತೆ. ಹಾಗಾಗಿ ತಾವು ಮೊದಲಿನಂತೆಯೇ ಕಾಣಲು ಮತ್ತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಅನಾರೋಗ್ಯದ ಸಮಸ್ಯೆಯನ್ನು ಕೂಡ ಎದುರಿಸಿರುವ ಜೆನಿಫರ್ ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾದರೆ ಯಾವ ರೀತಿಯ ಅನಾರೋಗ್ಯ ಸಮಸ್ಯೆ ಕಾಡಬಹುದೋ ಗೊತ್ತಿಲ್ಲ. ಒಟ್ಟಿನಲ್ಲಿ ಜೆನಿಫರ್ ಪಂಪ್ಲೋನ ಅವರ ನಿರ್ಧಾರ ಅವರಿಗೆ ಸಮಸ್ಯೆಯನ್ನು ಉಂಟುಮಾಡದಿದ್ದರೆ ಸಾಕು.

Leave A Reply

Your email address will not be published.

error: Content is protected !!