ಗೂಳಿ, ಹಸು ಗಳಿಗೆ ಕೆಂಪು ಬಣ್ಣ ಕಂಡ್ರೆ ಯಾಕೆ ಆಗೋಲ್ಲ ಗೊತ್ತೇ? ಓದಿ..

ಸಾಮಾನ್ಯವಾಗಿ ಗೂಳಿಗೂ ಮತ್ತು ಕೆಂಪು ಬಣ್ಣದ ಬಟ್ಟೆಗೂ ಆಗಿ ಬರಲ್ಲ ಅನ್ನೋದು ಎಲ್ಲರಿಗೂ ತಿಳಿದ ವಿಷಯ. ಗೂಳಿಗಳು ಕೆಂಪು ಬಣ್ಣವನ್ನು ಕಂಡಾಗ ಜನರ ಮೇಲೆ ಹರಿಹಾಯೋದನ್ನ ಸಾಮಾನ್ಯವಾಗಿ ಸಿನಿಮಾಗಳಲ್ಲಿ ನೋಡಿರುತ್ತೇವೆ ಕೆಲವರಿಗೆ ನಿಜ ಜೀವನದಲ್ಲೂ ಸಹ ಅನುಭವ ಆಗಿರಬಹುದು. ಹಾಗಾದ್ರೆ ಗೂಳಿಗಳಿಗೆ ಯಾಕೆ ಕೆಂಪು ಬಣ್ಣವನ್ನು ಕಂಡರೆ ಆಗಲ್ಲಾ ಅದರ ಹಿಂದೆ ಇರುವ ವೈಜ್ಞಾನಿಕ ಕಾರಣ ಏನು ಅನ್ನೋದನ್ನ ತಿಳಿಯೋಣ.

ಮೊದಲು ಗೂಳಿಗಳಿಗೆ ಕೆಂಪು ಬಣ್ಣವನ್ನು ಕಂಡರೆ ಆಗಲ್ಲಾ ಅನ್ನುವುದು ಹುಟ್ಟಿಕೊಂಡಿದ್ದು ಸ್ಪೇನ್ ನ ಜನಪ್ರಿಯ ಕ್ರೀಡೆಯಾದ ಬುಲ್ ಫೈಟಿಂಗ್ ನಲ್ಲಿ. ಈ ಗೂಳಿ ಕಾಳಗದಲ್ಲಿ ಒಟ್ಟು ಮೂರು ಹಂತಗಳು ಇರತ್ತೆ ಈ ಮೂರು ಹಂತಗಳಲ್ಲಿ ಮ್ಯಾಟಡರ್ ಎಂಬಾತ ಮೊದಲ ಎರಡು ಹಂತಗಳಲ್ಲಿ ಬೇರೆ ಬೇರೆ ಬಣ್ಣದ ಬಟ್ಟೆಗಳನ್ನ ಬಳಸುತ್ತಾನೆ. ಆದರೆ ಕೊನೆಯ ಹಂತದಲ್ಲಿ ಮಾತ್ರ ಕೆಂಪು ಬಣ್ಣದ ಬಟ್ಟೆಗಳನ್ನ ಬಳಸುತ್ತಾನೆ. ಇದಕ್ಕೆ ನಿಖರವಾದ ಕಾರಣ ಏನು ಅಂದ್ರೆ, ಆತ ತನ್ನ ಕತ್ತಿಯಿಂದ ಆಗಾಗ ಗೂಳಿಗೆ ತಿವಿಯುತ್ತಾ ಇರುತ್ತಾನೆ.

ಅದರಿಂದಾಗಿ ಆ ಗೂಳಿಯ ರಕ್ತವನ್ನು ಕೆಂಪು ಬಣ್ಣದ ಬಟ್ಟೆ ಮರೆಮಾಚುತ್ತದೆ ಎಂಬ ಕಾರಣಕ್ಕಾಗಿ ಕೊನೆಯ ಹಂತದಲ್ಲಿ ಕೆಂಪು ಬಣ್ಣದ ಬಟ್ಟೆಯನ್ನು ಬಳಸುತ್ತಾನೆ. ಆದರೆ ಕೆಪ್ಮು ಬಟ್ಟೆ ಬಳಸುವುದಕ್ಕೆ ಮತ್ತು ಗೂಳಿಗೆ ಸಿಟ್ಟು ಬರುವುದಕ್ಕೂ ಯಾವುದೇ ಸಂಬಂಧ ಇಲ್ಲ. ಆದರೆ ಸತ್ಯ ಏನು ಅಂದ್ರೆ, ಗೂಳಿಗಳಿಗೆ ಕೆಂಪು ಬಣ್ಣ ಕಾಣುವುದೇ ಇಲ್ಲ. ಅವುಗಳಿಗೆ ಕೆಂಪು ಬಣ್ಣದ ವರ್ಣಾಂಧತೆ ಇದೆ ಅಂದಮೇಲೆ ಅವು ಕೆಂಪು ಬಟ್ಟೆಯನ್ನ ನೋಡಿ ಯಾಕೆ ದಾಳಿ ಮಾಡುತ್ತವೆ ಅನ್ನೋ ಪ್ರಶ್ನೆ ಕಾಡಬಹುದು.

ಗೂಳಿಗಳಿಗೆ, ಹಸುಗಳಿಗೆ ಹಾಗೂ ಎಲ್ಲಾ ಪ್ರಾಣಿಗಳಿಗೂ ಕೆಂಪು ಬಣ್ಣ ಕಪ್ಪು ಬಣ್ಣದಲ್ಲಿ ಕಾಣಿಸುತ್ತವೆ. ಅದರಲ್ಲೂ ಆಟಕ್ಕೆ ಬಳಸುವಂತಹ ಗೂಳಿಗಳು ಬಹು ಬೇಗ ಆಕ್ರಮಣಕಾರಿ ಗುಣವನ್ನು ಹೊಂದಿರುತ್ತವೆ. ಹಾಗಾಗಿ ಅವುಗಳಿಗೆ ಒಂದು ಚಿಕ್ಕ ಬದಲಾವಣೆಯನ್ನು ಕಂಡರೂ ಸಹ ಕೋಪ ಬರುತ್ತೆ. ಮತ್ತೆ ದಾಳಿ ಮಾಡುವುದಾದರು ಮ್ಯಾಟಡರ್ ನ ಮೇಲೆ ಅಲ್ಲ ಅವನು ತೋರಿಸುವ ಬಟ್ಟೆಯ ಮೇಲೆ. ಈ ಪ್ರಕೃತಿಯಲ್ಲಿ ಒಂದೊಂದು ಪ್ರಾಣಿಗಳಿಗೂ ಒಂದೊಂದು ಕೊಡುಗೆ ಮತ್ತು ಕೊರತೆಗಳು ಇವೆ. ನಾವು ಬೆಳಕಿನ ಪ್ರಭಾವ ಇಲ್ಲದೆ ಕತ್ತಲಲ್ಲಿ ಯಾವ ವಸ್ತುವನ್ನು ನೋಡಲು ಆಗುವುದಿಲ್ಲ. ಆದರೆ ಬೆಕ್ಕು ಹುಳಿಯಂತಹ ಪ್ರಾಣಿಗಳು ಕತ್ತಲಲ್ಲಿ ಸಹ ತಮ್ಮ ಭೇಟೆಯನ್ನ ಹುದುಕುವಂತಹ ಸಾಮರ್ಥ್ಯವನ್ನು ಹೊಂದಿರುತ್ತವೆ.

ಈ ವಾರ್ಣಾಂಧತೆ ಎನ್ನುವುದು ಮನುಷ್ಯರಲ್ಲೂ ಇದೆ. ೨೦೦೭ ರಲ್ಲಿ ಡಿಸ್ಕವರಿ ಅವರು ಒಂದು ಗೂಳಿ ಮತ್ತು ಮೂರು ಬಣ್ಣಗಳ ಒಂದು ಪ್ರಯೋಗವನ್ನು ಮಾಡುತ್ತದೆ. ಇದರ ಪ್ರಕಾರ ಗೂಳಿಯ ಮುಂದೆ ಕೆಂಪು, ಬಿಳಿ ಮತ್ತು ನೀಲಿ ಬಣ್ಣದ ಮೂರು ಬಾವುಟಗಳನ್ನು ಇಡಲಾಗಿತ್ತು. ಆಗ ಗೂಳಿ ಯಾವುದೇ ಬೇಧ ಇಲ್ಲದೆ ಆ ಬಾವುಟಗಳ ಮೇಲೆ ನುಗ್ಗುತ್ತದೆ. ನಂತರದಲ್ಲಿ ಅದೇ ಮೂರು ಬಣ್ಣಗಳ ಬಟ್ಟೆಯನ್ನು ತೊಟ್ಟಿರುವ ನಕಲಿ ವಸ್ತುಗಳನ್ನು ತಂದಿಡಲಾಯಿತು. ಆಗಲೂ ಕೂಡ ಗೂಳಿ ಯಾವುದೇ ಬೇಧ ಇಲ್ಲದೆ ಆ ವಸ್ತುಗಳ ಮೇಲೆ ನುಗ್ಗುತ್ತದೆ. ಆದರೆ ಕೊನೆಯದಾಗಿ ಅದೇ ಮೂರು ಬಣ್ಣದ ಬಟ್ಟೆಗಳನ್ನ ಮನುಷ್ಯರಿಗೆ ತೊಡಿಸಿ ನೋಡಲಾಗುತ್ತದೆ. ಆಗ ಅದು ಕೆಂಪು ಬಣ್ಣದ ವ್ಯಕ್ತಿಯನ್ನು ಬಿಟ್ಟು ಮೊದಲು ನೀಲಿ ಮತ್ತು ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿರುವ ವ್ಯಕ್ತಿಗಳ ಮೇಲೆ ಧಾಳಿ ಮಾಡಿ ನಂತರ ಕೆಂಪು ಬಣ್ಣದ ವ್ಯಕ್ತಿಯ ಮೇಲೆ ದಾಳಿ ನಡೆಸುತ್ತದೆ.

ಈ ಒಂದು ಪ್ರಯೋಗದಿಂದ ಅವರು ಹೇಳಿದ್ದು ಏನಂದರೆ, ಗೂಳಿಗಳಿಗೆ ಕೆಂಪು ಬಣ್ಣದ ಕುರುಡುತನ ಇದೆ. ಆ ಬಣ್ಣದ ವಸ್ತು ಅಥವಾ ವ್ಯಕ್ತಿ ಬೇರೆ ಬಣ್ಣಗಳ ಜೊತೆಗೆ ಎದುರು ಬಂದು ನಿಂತಾಗ ಬೇರೆ ಬಣ್ಣಗಳ ಜೊತೆ ಕೆಂಪು ಬಣ್ಣ ಕಾಣದೇ ಇದ್ದಾಗ ಗೊಂದಲಕ್ಕೆ ಈಡಾಗಿ ಭಯಕ್ಕೊ ಅಥವಾ ಕೋಪಕ್ಕೊ ಆ ಕೆಂಪು ಬಣ್ಣದ ವಸ್ತುವಿನ ಮೇಲೆ ಹರಿಹಾಯುತ್ತವೆ. ಇದು ಬಿಟ್ಟರೆ ಕೆಂಪು ಬಣ್ಣದ ಮೇಲೆ ಗೂಳಿಗಳಿಗೆ ಯಾವುದೇ ದ್ವೇಷವಿಲ್ಲ. ಅವು ಆ ರೀತಿ ನಡೆದುಕೊಳ್ಳಲು ಕಾರಣ ಕೆಂಪು ಬಣ್ಣದ ವರ್ಣಾಂಧತೆ ಅಷ್ಟೇ.

Leave a Comment

error: Content is protected !!