ಕೆಲವೇ ನಿಮಿಷಗಳಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವ ಸುಲಭ ವಿಧಾನ

ಕೆಲವೇ ವರ್ಷಗಳ ಹಿಂದೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಬೇಕು ಎಂದರೆ ತಿಂಗಳೇ ಕಳೆಯುತ್ತಿತ್ತು. ಆದರೆ, ಸರ್ಕಾರ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಆನ್‌ಲೈನ್ ಮೂಲಕ ಪಡೆಯುವಂತಹ ಸೌಲಭ್ಯವನ್ನು ಜಾರಿಗೆ ತಂದಿದ್ದು, ಕೇವಲ 5 ನಿಮಿಷಗಳಲ್ಲಿ ನೀವೀಗ ಆನ್‌ಲೈನಿನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಬಹುದು.

ಹೌದು, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸರ್ಕಾರ ಈ ವ್ಯವಸ್ಥೆವನ್ನು ಜಾರಿಗೆ ತಂದಿದ್ದು, ನಿಮಿಷಗಳಲ್ಲೇ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್‌ಗಳ ಮೂಲಕ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಬಹುದಾಗಿದೆ. ನಿಮ್ಮ ರೇಷನ್ ಕಾರ್ಡ್ ನಂಬರ್‍ ಒಂದಿದ್ದರೆ ಆನ್‌ಲೈನಿನಲ್ಲೇ ಈಗ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕ್ಷಣಮಾತ್ರದಲ್ಲಿ ಪಡೆಯಬಹುದಾಗಿದೆ.

ಇದಕ್ಕೆ 25 ಶುಲ್ಕವನ್ನು ನಿಗದಿಪಡಿಸಲಾಗಿದ್ದು, ನಿಮ್ಮ ಡೆಬಿಟ್ ಕಾರ್ಡ್‌ನಿಂದ ಅಥವಾ ನೆಟ್‌ ಬ್ಯಾಂಕಿಂಗ್‌ನಿಂದ ಹಣವನ್ನು ಪಾವತಿಸಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಹಾಗಾದರೆ, ನಿಮಿಷಗಳಲ್ಲೇ ಕಂಪ್ಯೂಟರ್ ಅಥವಾ ಮೊಬೈಲ್ ಮೂಲಕ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವುದು ಹೇಗೆ ಎಂದು ಮುಂದೆ ಓದಿರಿ.

ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ www.nadakacheri.karnataka.gov.inಗೆ ಭೇಟಿ ನೀಡಿ
2.ಪೇಜ್ ತೆರೆದ ನಂತರ ಮೇಲ್ಭಾಗದಲ್ಲಿ ಎಡಗಡೆ ಕಾಣಿಸುವ ಮೂರು ಗೆರೆ ಇರುವ Home ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

3.ಈಗ ಕಾಣುವ ಅನ್‌ಲೈನ್‌ ಅಪ್ಲಿಕೇಷನ್ ಮೇಲೆ ಕ್ಲಿಕ್ ಕೊಟ್ಟು ‘ ಅಪ್ಲೈ ಆನ್‌ಲೈನ್’ (apply online) ಅನ್ನು ಆಯ್ದುಕೊಳ್ಳಿ.
4.ನಂತರ ಮೊಬೈಲ್ ನಂಬರ್ ಮೂಲಕ ಲಾಗ್‍ಇನ್ ಅಗಿ.
5.ಲಾಗಿನ್ ಆದ ಮೇಲೆ ಕಾಣಿಸುವ ನ್ಯೂ ರಿಕ್ವೆಸ್ಟ್ ‘new request’ ಮೇಲೆ ಕ್ಲಿಕ್‌ ಮಾಡಿ. ಆಗ ಆಯ್ಕೆಗಳು ಬರುತ್ತವೆ. ನಿಮ್ಮ ಬೇಕಾದ ಆಯ್ಕೆಯನ್ನು ಆಯ್ದುಕೊಳ್ಳಿ.

6.ಜಾತಿ ಮತ್ತು ಆದಾಯ ಪತ್ರದ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ರೇಷನ್ ಕಾರ್ಡ್‌ ನಂಬರ್ ಹಾಕಿ. ಅಲ್ಲಿ ಕೇಳುವ ಮಾಹಿತಿಯನ್ನು ಭರ್ತಿ ಮಾಡಿ.
7.ನಿಮಗೆ ಅಗತ್ಯವಿರುವ ಸದಸ್ಯರ ಆಯ್ಕೆಯನ್ನು ಆಯ್ದುಕೊಂಡು ನಂತರ ಪರಿಶೀಲಿಸಿ.
8,ನೀವು ಆಯ್ದುಕೊಂಡ ಪ್ರಮಾಣ ಪತ್ರ ಬೇಕಿದ್ದಲ್ಲಿ ಕೆಳಗೆ ಕಾಣಿಸುವ ‘pay service fee’ ಮೇಲೆ ಕ್ಲಿಕ್‌ ಮಾಡಿ.
9.ಆನ್‌ಲೈನ್ ಮೂಲಕ ಹಣ ಪಾವತಿಸಿದ ನಂತರ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಪ್ರಿಂಟ್ ಪಡೆಯಬಹುದು.

Leave a Comment

error: Content is protected !!