ಜೀವನದಲ್ಲಿ ಶ್ರೇಷ್ಠ ವ್ಯಕ್ತಿ ಆಗಲು ಚಾಣಿಕ್ಯ ಹೇಳಿದ ಮಾತು ಹೀಗಿದೆ

ಜೀವನದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಬೇಕು ಎಂದು ಕೆಲವರು ನಿರ್ಧಾರ ಮಾಡುತ್ತಾರೆ. ಅವರಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಅವು ಯಾವುದು ಇರಬೇಕು ಎಂದು ಸಲಹೆಗಾರನಾಗಿ, ಲೇಖಕನಾಗಿ ತನ್ನ ರಾಜಕೀಯ ಸೂತ್ರಗಳಿಂದ ಹೆಸರುವಾಸಿ ಆದ ಚಾಣಕ್ಯರು ಹೇಳಿದ್ದಾರೆ. ನಾವು ಇಲ್ಲಿ ಆ ಅವರು ಹೇಳಿದ ಶ್ರೇಷ್ಠ ವ್ಯಕ್ತಿಗಳ ಲಕ್ಷಣಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕಳೆದುಹೋದ ಕಾಲವನ್ನು ಅನಾವಶ್ಯಕ ನೆನಪಿಸಿಕೊಂಡು ದುಃಖ ಪಡುವುದು ಅನಾವಶ್ಯಕ. ಹಿಂದೆ ಮಾಡಿದ ತಪ್ಪನ್ನು ಪ್ರಸ್ತುತ ಪಡಿಸಿಕೊಂಡು ವ್ಯರ್ಥ ಮಾಡಿಕೊಳ್ಳಬಾರದು. ಆದರೆ ಆ ತಪ್ಪಿನಿಂದ ಆದ ನೋವನ್ನು ಭವಿಷ್ಯತ್ತಿನಲ್ಲಿ ಕೈಗೊಳ್ಳಬೇಕಾದ ದಾರಿಯಲ್ಲಿ ಉಪಯೋಗಿಸಿಕೊಳ್ಳಬೇಕು.

ಒಬ್ಬರನ್ನು ಮೋಸಮಾಡಿ ಆಸ್ತಿ, ಹಣವನ್ನು ಸಂಪಾದನೆ ಮಾಡುವ ಅತಿ ಆಸೆ ಇರಬಾರದು. ಹೀಗೆ ಮಾಡಿದರೆ ಅವರಿಗೆ ಅವರೇ ಮೋಸ ಮಾಡಿಕೊಳ್ಳುವುದರ ಜೊತೆ ಅವರ ಮೌಲ್ಯ ಕುಸಿಯುತ್ತದೆ. ಒಂದೊಂದು ಸಾರಿ ವಿಷವೂ ಸಹ ಕುಡಿಯುವಾಗ ಸಿಹಿಯಾಗಿರುತ್ತದೆ. ಆದರೆ ಎಲ್ಲವನ್ನೂ ನಂತರ ಕಳೆದುಕೊಳ್ಳಬೇಕಾಗುತ್ತದೆ. ಯಾರಿಗೂ ಕೂಡ ಹಣ, ಅಧಿಕಾರದ ಮೇಲೆ ಅತೀ ಆಸೆ ಇರಬಾರದು.

ಒಬ್ಬ ವ್ಯಕ್ತಿ ಮಾಡುವ ಪ್ರತೀ ಕೆಲಸ, ಮಾತನಾಡುವ ಮಾತು ತನ್ನ ಮೇಲೆ ಅಲ್ಲದೇ ಇತರರ ಮೇಲೂ ಕೂಡ ಪ್ರಭಾವ ಬೀರುತ್ತದೆ. ಪ್ರತೀ ವ್ಯಕ್ತಿಗೂ ತಾನು ಮಾತನಾಡುವ ಮಾತಿನ ಮೇಲೆ ನಿಯಂತ್ರಣ ಇರಬೇಕು. ಯಾವುದಾದರೂ ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಮೊದಲು ತನಗೆ ತಾನೇ ಪ್ರಶ್ನಿಸಿಕೊಳ್ಳಬೇಕು.

ಮನುಷ್ಯನ ಮಾತು, ಕೈಗಳಷ್ಟೇ ಅಲ್ಲ ಅವರ ಮುಖ ಕೂಡ ಮೋಸ ಮಾಡುತ್ತದೆ. ಏಕೆಂದರೆ ಎಷ್ಟು ದುಃಖದಲ್ಲಿ ಇದ್ದರೂ, ಎಷ್ಟು ಕಷ್ಟದಲ್ಲಿ ಇದ್ದರೂ ಕೂಡ ಅವುಗಳನ್ನು ಮುಖದ ಮೇಲೆ ತೋರಿಸಿಕೊಳ್ಳಬಾರದು. ವಿಷ ಇಲ್ಲದ ಹಾವೂ ಕೂಡ ವಿಷ ಇದ್ದಂತೆ ಇರುತ್ತದೆ.

ಶ್ರೇಷ್ಠರು ಎಂದು ಎಲ್ಲರ ಬಾಯಲ್ಲಿ ಹೇಳಿಸಿಕೊಳ್ಳುವ ಕೊರಗು ಇರಬಾರದು. ಸುಗಂಧ ಪರಿಮಳಗಳು ಆಸ್ವಾದಿಸುವುದಕ್ಕೆ ಗಾಳಿಯ ಅವಶ್ಯಕತೆ ಇದೆ. ಆದರೆ ಶ್ರೇಷ್ಠ ವ್ಯಕ್ತಿಗೆ ತಾನು ಶ್ರೇಷ್ಠ ವ್ಯಕ್ತಿ ಎಂದು ನಿರೂಪಿಸಿಕೊಳ್ಳಲು ಯಾವುದರ ಅವಶ್ಯಕತೆ ಕೂಡ ಇಲ್ಲ. ಇಂತಹ ಸಣ್ಣ ಸಣ್ಣ ವಿಷಯಗಳಿಗೆ ಲಕ್ಷ್ಯ ವಹಿಸುವ ಬದಲು ಏಳಿಗೆಯ ಕುರಿತು ಲಕ್ಷ್ಯ ವಹಿಸಬೇಕು.

ಬಲಹೀನ ವ್ಯಕ್ತಿಯನ್ನು ಎಂದಿಗೂ ಕಡೆಗಣಿಸಬಾರದು. ಬಲಹೀನನ ಜೊತೆ ಶತ್ರುತ್ವ ಹಾವಿನ ಕಡಿತಕ್ಕಿಂತಲೂ ಅಧಿಕವಾಗಿರುತ್ತದೆ. ಉನ್ನತ ಮಟ್ಟದಲ್ಲಿರುವವರ ಜೊತೆ ಸಮಾನವಾಗಿ ಕೆಲವರಿಗೆ ಇರಲು ಆಗುವುದಿಲ್ಲ. ಆದ್ದರಿಂದ ಅವರ ವಿರುದ್ಧ ಮಾತನಾಡಿಕೊಳ್ಳುತ್ತಾರೆ. ಬಲಹೀನರಾದವರು ತಾವು ಮೇಲೆ ಏರುವುದಕ್ಕಿಂತಲೂ ಅಕ್ಕ ಪಕ್ಕದವರನ್ನು ಬೀಳಿಸುವ ಬಗ್ಗೆ ಯೋಚನೆ ಜಾಸ್ತಿ ಮಾಡುತ್ತಾರೆ.

Leave A Reply

Your email address will not be published.

error: Content is protected !!