ನಟ ಚಿಕ್ಕಣ್ಣವರ ಮನೆ ಎಷ್ಟು ಸುಂದರವಾಗಿದೆ ಹೇಗಿದೆ ನೋಡಿ

ಕನ್ನಡ ಸಿನಿಮಾದಲ್ಲಿ ಚಿಕ್ಕಣ್ಣ ಅವರ ಹಾಸ್ಯವೊಂದಿಷ್ಟಿದ್ದರೆ ಆ ಸಿನಿಮಾ ಜನರಿಗೆ ಇಷ್ಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಚಿಕ್ಕಣ್ಣ ಅವರು ಸಿನಿಮಾದಲ್ಲಿ ಅಭಿನಯಿಸುವುದಲ್ಲದೆ ತಮ್ಮದೇ ಆದ ಫಾರ್ಮ್ ಹೌಸ್ ಮಾಡಿದ್ದಾರೆ ಹಾಗೂ ಭವ್ಯವಾದ ಮನೆಯನ್ನು ನಿರ್ಮಿಸಿದ್ದಾರೆ. ಚಿಕ್ಕಣ್ಣ ಅವರು ನಿರ್ಮಿಸಿದ ಮನೆಯ ಬಗ್ಗೆ ಹಾಗೂ ಅವರ ಸಂಭಾವನೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಶೈಲಿಯ ಹಾಸ್ಯದಿಂದ ತಮ್ಮತ್ತ ಜನರನ್ನು ಆಕರ್ಷಿಸಿದವರು ಚಿಕ್ಕಣ್ಣ. ಕನ್ನಡ ಚಿತ್ರರಂಗದಲ್ಲಿ ತಮ್ಮ ನೈಜ ಹಾಗೂ ಮುಗ್ಧ ನಟನೆಯಿಂದ ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಚಿಕ್ಕಣ್ಣ ಅವರು 1986 ರಲ್ಲಿ ಮೈಸೂರಿನ ಹತ್ತಿರ ಒಂದು ಹಳ್ಳಿಯಲ್ಲಿ ಜನಿಸಿದ್ದಾರೆ. ಅವರು ಚಿಕ್ಕಂದಿನಿಂದಲೇ ನಾಟಕದಲ್ಲಿ ಆಸಕ್ತಿಯಿದ್ದು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನಂತರ ಉದಯ ಚಾನೆಲ್ ನಲ್ಲಿ ನಿರೂಪಕನಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಕಾಮಿಡಿ ಕಿಲಾಡಿಗಳು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿ ಜನರ ಮನಗೆದ್ದಿದ್ದಾರೆ. ಚಿಕ್ಕಣ್ಣ ಅವರು ಪ್ರಾರಂಭದಲ್ಲಿ ಕೇವಲ ದಿನಕ್ಕೆ 200 ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದರು. ರಾಕಿಂಗ್ ಸ್ಟಾರ್ ಯಶ್ ಅವರ ಕಿರಾತಕ ಸಿನಿಮಾದಲ್ಲಿ ಚಿಕ್ಕಣ್ಣ ಅವರು ಕೂಡ ನಟಿಸಿದ್ದರು ಇದರಿಂದ ಅವರು ಫೇಮಸ್ ಆದರು ಇದಾದನಂತರ ಕಡಿಮೆ ಸಮಯದಲ್ಲಿಯೇ ಕನ್ನಡ ಚಿತ್ರರಂಗದ ಟಾಪ್ ಕಾಮಿಡಿ ನಟರಲ್ಲಿ ಚಿಕ್ಕಣ್ಣ ಅವರು ಒಬ್ಬರಾದರು.

ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಮಿಡಿ ಪಾತ್ರದಲ್ಲಿ ನಟಿಸಿ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದರಿಂದ ಅವರಿಗೆ ಹೆಚ್ಚು ಹಣ ಬರುತ್ತಿದ್ದು ಮೈಸೂರಿನಲ್ಲಿ ಫಾರ್ಮ್ ಹೌಸ್ ನಿರ್ಮಿಸಿ ಕುರಿ, ಹಸು ಸಾಕಾಣಿಕೆ ಹಾಗೂ ಹಲವು ಉಪಯುಕ್ತ ಗಿಡಗಳನ್ನು ಬೆಳೆಸಿದ್ದಾರೆ. ಫಾರ್ಮ್ ಹೌಸ್ ನಿರ್ವಹಣೆ ಹಾಗೂ ಪ್ರಾಣಿ ಸಾಕಾಣಿಕೆಯನ್ನು ಅವರು ಪ್ರೀತಿಯಿಂದ, ಖುಷಿಯಿಂದ ಮಾಡುತ್ತಿದ್ದಾರೆ. ಚಿಕ್ಕಣ್ಣ ಅವರು ನಾಯಕ ನಟನಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಉಪಾಧ್ಯಕ್ಷ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಚಿಕ್ಕಣ್ಣ ಅವರು ನಟಿಸಿದ್ದಾರೆ, ಈ ಸಿನಿಮಾ ಖಂಡಿತವಾಗಿಯೂ ಜನರಿಗೆ ಮನರಂಜನೆ ನೀಡುತ್ತದೆ. ಈ ಚಿತ್ರದಲ್ಲಿ ನಟಿಸಲು ಚಿಕ್ಕಣ್ಣ ಅವರು ದುಬಾರಿ ಹಣವನ್ನು ಸಂಭಾವನೆಯಾಗಿ ಪಡೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸಿನಿಮಾದಲ್ಲಿ ಕಾಮಿಡಿ ಪಾತ್ರ ಮಾಡಲು ದಿನಕ್ಕೆ 3-4 ಲಕ್ಷ ಸಂಭಾವನೆ ಪಡೆಯುತ್ತಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಚಿಕ್ಕಣ್ಣ ಅವರು ತಮ್ಮದೇ ಆದ ಭವ್ಯವಾದ, ಸುಂದರವಾದ ಮನೆಯನ್ನು ನಿರ್ಮಿಸಿದ್ದಾರೆ. ಅವರ ಮನೆ ನೋಡಲು ಎರಡು ಕಣ್ಣು ಸಾಲದು ಎಂದರೆ ತಪ್ಪಾಗಲಾರದು, ಅಲ್ಲದೆ ಅವರ ಮನೆ ಬಹಳ ವೈಭವದಿಂದ ಕೂಡಿದೆ.

Leave a Comment

error: Content is protected !!