
ಸಪೋಟ ಹಣ್ಣು ಇದ್ರೆ ಮನೆಯಲ್ಲೇ ಮಾಡಿ, ಸಪೋಟ ಕುಲ್ಪಿ ಟೇಸ್ಟಿಯಾಗಿ.
ಸಪೋಟಹಣ್ಣು ಆರೋಗ್ಯಕ್ಕೆ ಹತ್ತಾರು ಲಾಭಗಳನ್ನು ನೀಡುವಂತ ಹಣ್ಣಾಗಿದ್ದು ಇದರಲ್ಲಿ ದೇಹಕ್ಕೆ ಬೇಕಾಗುವಂತ ಪೋಷಕಾಂಶಗಳನ್ನು ಕಾಣಬಹುದಾಗಿದೆ, ನಾನಾ ರೀತಿಯ ಐಸ್ ಹಾಗೂ ಐಸ್ಕ್ರೀಮ್ ತಿನ್ನೋ ಬದಲು ಈ ನೈಸರ್ಗಿಕ ಹಣ್ಣಿನ ಕುಲ್ಪಿ ಮಾಡಿ ಸೇವನೆ ಮಾಡುವುದರಿಂದ ದೇಹಕ್ಕೆ ಹಿತವಾದ ಅರೋಗ್ಯ ವೃದ್ಧಿಸಿಕೊಳ್ಳಬಹುದಾಗಿದೆ.
ಮನೆಯಲ್ಲಿ ಸಪೋಟ ಹಣ್ಣು ಇದ್ರೆ ಸಪೋಟಹಣ್ಣಿನ ಕುಲ್ಪಿ ಮಾಡೋದು ಹೇಗೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ ಬನ್ನಿ. ಇದಕ್ಕೆ ಬೇಕಾಗುವಂತ ಸಾಮಗ್ರಿಗಳು ಹಾಗೂ ಹೇಗೆ ತಯಾರಿಸೋದು ಅನ್ನೋದನ್ನ ನೋಡಿ ಇದನ್ನು ಬರಿ ಮಕ್ಕಳು ಅಷ್ಟೇ ಅಲ್ಲದೆ ವಯಸ್ಸಾದವರು ಕೂಡ ಇದನ್ನು ಸೇವಿಸಬಹುದಾಗಿದೆ.
ಸಪೋಟ ಕುಲ್ಪಿ ತಯಾರಿಸಲು ಬೇಕಾಗುವ ಸಾಮಗ್ರಿಗಳು: ಒಂದೆರಡು ಸಪೋಟಹಣ್ಣು ಹಾಗೂ ಒಂದು ಬಾಳೆಹಣ್ಣು ಇವುಗಳ ಜೊತೆಗೆ ಒಂದು ಗ್ಲಾಸ್ ಹಾಲು, ೧-೨ ಖರ್ಜುರ, ರುಚಿಗೆ ತಕ್ಕಸ್ಟು ಸಕ್ಕರೆ ಹಾಗೂ ಗೋಡಂಬಿ ತರಿ ೧-೨ ಚಮಚ.
ತಯಾರಿಸುವ ವಿಧಾನ: ಮೊದಲನೆಯದಾಗಿ ಹಾಲು, ಸಪೋಟ, ಬಾಳೆಹಣ್ಣು ಮತ್ತು ಸಕ್ಕರೆಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ, ನಂತರ ಹೆಚ್ಚಿದ ಖರ್ಜುರ, ಗೋಡಂಬಿ ತರಿಯನ್ನು ಸೇರಿಸಿ, ಕುಲ್ಪಿ ಮಾಡುವ ಮೊಡ್ಗ್ ಸುರಿದು ಗಟ್ಟಿ ಆಗುವವರೆಗೆ ಇಟ್ಟರೆ, ಸಾಕು ನೀವು ತಿನ್ನಲು ಬಯಸುವ ಸಪೋಟ ಕುಲ್ಪಿ ರೆಡಿ ಇರುತ್ತದೆ.