ತೆಂಗಿನಕಾಯಿ ಭೂಮಿ ಒಳಗಿನ ನೀರು ಪತ್ತೆ ಹಚ್ಚುತ್ತಾ? ಇದರ ಹಿಂದಿರುವ ಅಸಲಿಯತ್ತೇನು ತಿಳಿಯಿರಿ

ತೆಂಗಿನ ಕಾಯಿಯ ಸಹಾಯದಿಂದ ಭೂಮಿಯ ಒಳಗೆ ನೀರು ಇದೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಬಹುದೋ ಇಲ್ಲವೋ ಎಂಬುದನ್ನು ತಿಳಿಯೋಣ. ನಾವಿಂದು ಜಾಗತೀಕರಣಕ್ಕೆ ಒಳಗಾಗಿದ್ದೇವೆ. ಕನಿಷ್ಠ ಒಂದು ಐವತ್ತು ವರ್ಷ ಹಿಂದಕ್ಕೆ ಹೋದರೆ ಭೂಮಿ ಮೇಲೆ ನೀರು ಸಿಗ್ತಾ ಇತ್ತು ಆಗಿನ ಕಾಲದ ಜನರು ಅಲ್ಲೇ ಶೌಚಾಲಯಕ್ಕೆ ಹೋಗಿ ಅದೇ ನೀರನ್ನೇ ಕುಡಿತಾ ಇದ್ದರು ಆದರೂ ಆರೋಗ್ಯವಾಗಿ ಇದ್ದರು. ಇಂದು ನೀರು ಬಹಳಷ್ಟು ಕಲುಷಿತ ಆಗ್ತಾ ಇದೆ. ಹೀಗೆ ಹೇಳುವುದಕ್ಕಿಂತ ನಾವು ನೀರನ್ನು ಕಲುಷಿತ ಮಾಡ್ತಾ ಇದ್ದೇವೆ ಎನ್ನುವುದು ಇಂದಿನ ದಿನಕ್ಕೆ ಸೂಕ್ತ.

ನೀರನ್ನು ತಡೆಹಿಡಿಯಲಾಗದೆ ನಾವು ವಿಫಲರಾಗಿದ್ದೇವೆ ಅಂದರೆ, ಮಳೆಯ ಪ್ರಮಾಣ ಎಷ್ಟೇ ಇದ್ದರು ಸಹ ಬಂದಂತಹ ಮಳೆಯನ್ನು ಹಿಡಿದಿಡುವಲ್ಲಿ ನಾವು ಸೋತಿದ್ದೇವೆ. ಭೂಮಿಯಲ್ಲಿ ಅಂತರ್ಜಾಲ ಮಟ್ಟ ಕಡಿಮೆ ಆದಂತೆ ನಾವು ಭೂಮಿಯ ಆಳಕ್ಕೆ ಹೋಗುತ್ತಿದ್ದೇವೆ. ನಾವಿಂದು ನೀರಿಗಾಗಿ 1200 ಅಡಿಗಳಷ್ಟು ಆಳಕ್ಕೆ ಹೋಗಿದ್ದೇವೆ. ಎಷ್ಟೇ ನೀರಿನ ಶೋಧನೆ ನಡೆದರೂ ನೀರು ಲಭಿಸುತ್ತಾ ಇಲ್ಲ. ಮುಂದೊಂದು ದಿನ ಈಗ ನಾವು ಇಪ್ಪತ್ತು ರೂಪಾಯಿಗೆ ಕೊಂಡುಕೊಳ್ಳುತ್ತಿರುವ ನೀರು ಮುಂದೊಂದು ದಿನ ಸಾವಿರ ಲಕ್ಷ ಕೋಟಿ ಕೊಟ್ಟರೂ ಸಿಗದೇ ಇರಬಹುದು. ಇದು ಒಂದು ಕಡೆ ಆದರೆ ಇನ್ನೊಂದು ಕಡೆ ತೆಂಗಿನ ಕಾಯಿಯ ಸಹಾಯದಿಂದ ಭೂಮಿಯ ಒಳಗೆ ನೀರನ್ನ ಹುಡುಕುತ್ತೀವಿ ಅಂತ ಹೇಳೋ ಜನ. ನಿಜವಾಗ್ಲೂ ಈ ತೆಂಗಿನ ಕಾಯಿ ಭೂಮಿ ಒಳಗೆ ನೀರು ಇರೋದನ್ನ ಪತ್ತೆ ಹಚ್ಚುತ್ತಾ?

ನೀರನ್ನ ಪತ್ತೆ ಹಚ್ಚುವವರು ಜಮೀನಿಗೆ ಕರಕೊಂಡು ಹೋಗಿ ಅಲ್ಲಿ ತೆಂಗಿನ ಕಾಯಿಯನ್ನ ತಮ್ಮ ಕೈಯ್ಯ ಮೇಲೆ ಇಟ್ಟು ಅದನ್ನು ನಮಗೆ ತಿಳಿಯದಂತೆ ಅವರ ಕೈ ಅಲ್ಲೇ ಹಿಡಿದು ಬೆರಳಿನಿಂದ ತಿರುಗಿಸುತ್ತಾರೆ ಅದು ನಮ್ಮ ಬೆರಳಿನ ವಿರುದ್ಧ ದಿಕ್ಕಿಗೆ ವಾಲುತ್ತಾ ನಿಲ್ಲುತ್ತದೆ ಹಾಗೆ ನಿಂತ ಕಡೆ ಆ ದಿಕ್ಕಿನಲ್ಲಿ ಜಲ ಇದೆ ಇಲ್ಲಿ ಬಾವಿ ಇಲ್ಲ ಬೋರು ತೆಗೆಯಬಹುದು ಎಂದು ಹೇಳುತ್ತಾರೆ. ಆದರೆ ತೆಂಗಿನ ಕಾಯಿ ಒಂದು ನಿರ್ಜೀವ ವಸ್ತು ಹೀಗಿರೋವಾಗ ತೆಂಗಿನ ಕಾಯಿ ಇಂದ ಜಾಲವನ್ನು ಶೋಧಿಸುವುದು ಸಾಧ್ಯಾನ?

ಆದರೆ ನಾವು ಮೊದಲಿಂದಲೂ ನಂಬಿಕೊಂಡು ಬಂದಿದ್ದೇವೆ ತೆಂಗಿನಕಾಯಿ ನಿಂತ ಕಡೆ ನೀರು ಬರತ್ತೆ ಅಂತ. ಹಾಗಾದ್ರೆ ಇದು ನಿಜಾನಾ ಅಥವಾ ಸುಳ್ಳಾ? ಇದು ಕೇವಲ ನಮ್ಮ ಮೂಢ ನಂಬಿಕೆ ಅಷ್ಟೇ. ಭೂ ಗರ್ಭದಲ್ಲಿ ಅಂತರ್ಜಾಲ ಇದ್ರೆ ಅಷ್ಟೆ ನೀರು ಸಿಗೋದು. ಭೂಗರ್ಭ ವಿಜ್ಞಾನಿಗಳು ಭೂಮಿಯ ಆಲದ ೩೦೦ ಅಡಿಯಷ್ಟು ಮಾತ್ರ ಏನಿದೆ ಅಂತ ಹೇಳೋಕೆ ಸಾಧ್ಯ ಅದಕ್ಕೂ ಕೆಳಗೆ ಏನಿದೆ ಎಂಬುದು ವಿಜ್ಞಾನಿಗಳಿಗೂ ಸಹ ಇನ್ನೂ ಪತ್ತೆ ಹಚ್ಚಲು ಆಗಲಿಲ್ಲ .

ಕೈ ಅಲ್ಲಿ ತೆಂಗಿನ ಕಾಯಿ ಹಿಡಿದು ಜಲ ಶೋಧನೆ ಮಾಡುತ್ತೇನೆ ಎಂದು ಈ ರೀತಿಯಾಗಿ ಹೇಳಿ ನಂಬಿಸುವ ಜನರು ಅದನ್ನು ನಂಬುವ ಜನರೂ ಇದ್ದಾರೆ ಇದು ವಿಪರ್ಯಾಸವೇ ಸರಿ. ತೆಂಗಿನ ಕಾಯಿ ತಾನಾಗಿ ತಾನೇ ನಿಲ್ಲಲ್ಲ ನಿಲ್ಲಿಸುತ್ತಾರೆ. ಇದರಿಂದ ಯಾವುದೇ ರೀತಿಯ ಜಲ ಸಂಶೋಧನೆ ಅಸಾಧ್ಯ.
ಈಗ ಸಧ್ಯದ ಸ್ಥಿತಿಯಲ್ಲಿ ನಮಗೆ ಇರುವುದು ಒಂದೇ ಮಾರ್ಗ ಆದಷ್ಟು ನೀರನ್ನು ಮಿತವಾಗಿ ಬಳಸುವುದು. ಹೆಚ್ಚು ಹೆಚ್ಚು ಗಿಡ ಮರಗಳನ್ನು ನೆಟ್ಟು ಬೆಳೆಸಿ ಪೋಷಿಸುವುದು.

Leave a Comment

error: Content is protected !!