ಕಾಫಿ ನಾಡು ಚಂದು ಬಿಗ್ ಬಾಸ್ ಮನೆಗೆ ಹೋಗಲೇ ಬೇಕು ಅಂತ ಅವನ ಅಭಿಮಾನಿಗಳು ಮಾಡಿದ ಕೆಲಸವೇನು ಗೊತ್ತಾ

ಕನ್ನಡಿಗರು ನೋಡಲು ಕಾಯ್ದು ಕುಳಿತಿರುವ ಬಿಗ್ ಬಾಸ್ ಸೀಸನ್ 9 ಇನ್ನೇನು ಆರಂಭವಾಗಲಿದೆ. ಬಿಗ್ ಬಾಸ್ ಗಾಗಿ ದೊಡ್ಮನೆಯನ್ನ ವಿಭಿನ್ನವಾಗಿ ಸಿದ್ಧಪಡಿಸಲಾಗುತ್ತಿದೆ. ಅಲ್ಲದೆ ಬಿಗ್ ಬಾಸ್ ಸ್ಪರ್ಧಿಗಳು ಇವರಾಗಬೇಕು, ಇವರಿರಬಹುದು ಎಂದು ಜನರ ಊಹೆಗಳೂ ಶುರುವಾಗಿದೆ. ಅದರಲ್ಲೂ ವಿಶೇಷವಾಗಿ ಈ ವರ್ಷದ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ಕಾಫಿನಾಡು ಸಂಧು ಅವರ ಹೆಸರು ಜೋರಾಗಿ ಕೇಳಿ ಬರುತ್ತಿದೆ.

ಹೌದು, ಬಿಗ್ ಬಾಸ್ ಸೀಸನ್ 9 ರ ಪ್ರೊಮೋ ಶೂಟ್ ಆಗಿದೆ. ಕಿಚ್ಚ ಸುದೀಪ್ ಕೂಡ ಪ್ರೊಮೋ ಸಮಯದಲ್ಲಿ ಇದ್ದ ಮೇಕಿಂಗ್ ವಿಡಿಯೋ ವೂ ವೈರಲ್ ಆಗಿತ್ತು. ಇನ್ನೇನು ಕಲರ್ಸ್ ಮಹಿನಿಯಲ್ಲಿ ಪ್ರೊಮೋ ಕೂಡ ಪ್ರಸಾರವಾಗಲಿದೆ. ಅಂದಹಾಗೆ ಈ ಬಾರಿ ಬಿಗ್ ಬಾಸ್ ತಂಡ ಬಿಗ್ ಬಾಸ್ ಪ್ರಿಯರಿಗೆ ಡಬಲ್ ಧಮಾಕಾ ನೀಡುತ್ತಿದೆ. ಅದೇನು ಗೊತ್ತಾ? ಇಬ್ಬರು ಬಿಗ್ ಬಾಸ್ ಸೀಸನ್ 9 ಜೊತೆಗೆ ಮಿನಿ ಬಿಗ್ ಬಾಸ್ ಕೂಡ ಪ್ರಸಾರವಾಗಲಿದೆ.

ಇದನ್ನು ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಪ್ರಸಾರ ಮಾಡಲೆಂದೇ ಮಿನಿ ಬಿಗ್ ಬಾಸ್ ನ್ನು ಕೂಡ ಶೂಟ್ ಮಾಡಲಾಗುತ್ತದೆ. ಹಾಗಾಗಿ ಬಾರಿಗೆ ಎರಡು ಬಿಗ್ ಬಾಸ್ ನ್ನ ನೋಡುಬಹುದು ಬಿಗ್ ಬಾಸ್ ಅಭಿಮಾನಿಗಳು.ಇನ್ನು ಬಿಗ್ ಬಾಸ್ ಸೀಸನ್ ನಲ್ಲಿ ಪ್ರತಿವರ್ಷ ಸ್ಪರ್ಧಿಗಳು ಯಾರಾಗಿರ್ತಾರೆ ಎನ್ನುವ ಕುತೂಹಲ ಇದ್ದೇ ಇರುತ್ತೆ. ಈ ಬಾರಿಯೂ ಬಿಗ್ ಬಾಸ್ ಆರಂಭಕ್ಕೂ ಮೊದಲೇ ಬಿಗ್ ಬಾಸ್ ಸ್ಪರ್ಧಿಗಳ ಹೆಸರು ಕೇಳಿಬರುತ್ತಿವೆ.

ಈಗಾಗಲೇ ಪವಿತ್ರ ಲೋಕೇಶ್, ನವೀನ್ ಕೃಷ್ಣ, ಟೆನ್ನಿಸ್ ಕೃಷ್ಣ ಮೊದಲಾದವರ ಹೆಸರುಗಳು ಪಟ್ಟಿಯಲ್ಲಿವೆ. ಆದರೆ ಇದ್ಯಾವುದೂ ಖಚಿತವಾಗಿಲ್ಲ. ಇನ್ನು ಬಿಗ್ ಬಾಸ್ ಸೀಸನ್ 9 ಹಾಗೂ ಮಿನಿ ಬಿಗ್ ಬಾಸ್ ಎರಡನ್ನೂ ಕಿಚ್ಚ ಸುದೀಪ್ ಅವರೇ ನಡೆಸಿಕೊಡಲಿದ್ದಾರೆ. ಕಿಚ್ಚ ಸುದೀಪ್ ಅವರ ವೀಕೆಂಡ್ ಪಂಚಾಯ್ತಿ ನೋಡಲು ಅಭಿಮಾನಿಗಳು ಕೂಡ ಕಾತುರರಾಗಿದ್ದಾರೆ.ಇನ್ನು ಬಿಗ್ ಬಾಸ್ ಮಿನಿ ಹಾಗೂ ಬಿಗ್ ಬಾಸ್ ಸೀಸನ್ 9ರಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಗಳನ್ನ ಕರೆತರಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಹಾಗಾಗಿ ವೈರಲ್ ಸ್ಟಾರ್ ಕಾಫಿ ನಾಡು ಚಂದುವನ್ನು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಕಳುಹಿಸಿ ಅಂತ ಜನ ಕಮೆಂಟ್ ಮಾಡುತ್ತಿದ್ದಾರೆ. ತನ್ನದೇ ಆದ ಶೈಲಿಯಲ್ಲಿ ಬರ್ತಡೇ ಸಾಂಗ್ ಹಾಡಿ ಫೇಮಸ್ ಅದ ಕಾಫಿ ನಾಡು ಚಂದು, ಚಿಕ್ಕಮಗಳೂರಿನವನು. ಇನ್ನು ಅಪ್ಪಟ ಪುನೀತ್ ರಾಜಕುಮಾರ್ ಅಭಿಮಾನಿಯೂ ಆಗಿರುವ ಕಾಫಿ ನಾಡು ಚಂದುವನ್ನೂ ಬಿಗ್ ಬಾಸ್ ಮನೆಗೆ ಕಳುಹಿಸಿ ಎಂದು ಹಲವರು ಇವರ ಹೆಸರನ್ನು ಸೂಚಿಸುತ್ತಿದ್ದಾರೆ.

ಕಾಫಿನಾಡು ಚಂದು ಅವರ ಅಭಿಮಾನಿಗಳು ಬಿಗ್ ಬಾಸ್ ನಿರ್ದೇಶಕರಾದ ಪರಮೇಶ್ವರ್ ಗುಂಡ್ಕಲ್ ಅವರಿಗೆ ಸಂದೇಶವನ್ನು ಕಳುಹಿಸಿ ಚಂದೂನನ್ನು ಬಿಗ್ ಬಾಸ್ ಗೆ ಕಳಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಅವರಿಗೆ ಕೂಡ ಸಂಪರ್ಕಿಸಿ ಕಾಫಿನಾಡಿನ ಚಂದು ಅವರು ಬಿಗ್ ಬಾಸ್ ಗೆ ಬರಲೇಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ ಯಾರ ಅಭಿಪ್ರಾಯ ಹೇಗೆ ಇದ್ರು ಬಿಗ್ ಬಾಸ್ ತಂಡದ ಲೆಕ್ಕಾಚಾರ ಬೇರೆಯೇ ಇರುತ್ತದೆ.

Leave A Reply

Your email address will not be published.

error: Content is protected !!