ಶೀತ ಕೆಮ್ಮು ಕಫದಿಂದ ಮುಕ್ತಿ ನೀಡುವ ಮೆಣಸಿನಕಾಳು

ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಗಮನ ಹರಿಸದೆ ದೈಹಿಕವಾಗಿ ಒಂದಲೊಂದು ಸಮಸ್ಯೆಗಳಿಗೆ ಗುರಿ ಯಾಗಬೇಕಾಗುತ್ತದೆ.ಇದರ ಪರಿಣಾಮ ಶೀತ,ಕೆಮ್ಮು,ಕಫದಂತಹ ಸಾಮಾನ್ಯವಾದ ರೋಗಗಳು ಮನುಷ್ಯನ ದೇಹವನ್ನು ಚೈತನ್ಯರಹಿತವಾಗಿ ಮಾಡಿಬಿಡುತ್ತವೆ. ಇಂತಹ ಆರೋಗ್ಯ ಸಮಸ್ಯೆಗಳಿಗೆ ಮಾತ್ರೆಗಳೇ ಪರಿಹಾರವಲ್ಲ ಇದರ ಹೊರತಾಗಿ ಮನೆಯಲ್ಲಿನ ಅಡುಗೆ ಸಾಮಾಗ್ರಿಗಳಿಂದಲೂ ಮನೆಮದ್ದು ತಯಾರಿಸಬಹುದು ಹೇಗೆ ಅಂತೀರ ಇಲ್ಲಿದೆ ನೋಡಿ

ಮಧ್ಯದ ಉರಿಯಲ್ಲಿ ಹಂಚಿನ ಮೇಲೆ ನಾಲ್ಕು ಲವಂಗ, 10 ರಿಂದ 15 ಮೆಣಸಿನಕಾಳನ್ನುಕಂದು ಬಣ್ಣಕ್ಕೆ ಬರುವ ಹಾಗೆ ಹುರಿಯಿರಿ. ನಂತರ ಹುರಿದ ಲವಂಗ ಹಾಗೂ ಮೆಣಸಿನ ಕಾಳನ್ನು ಕುಟ್ಟಾಣಿಯಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿ, ಪುಡಿಯೊಂದಿಗೆ 2 ಚಮಚ ಜೇನುತುಪ್ಪ ಬೆರಸಿ ಸೀರಪ್ ರೀತಿ ಮಾಡಿಕೊಂಡು ದಿನಕ್ಕೆ 3 ಚಮಚ ಸೇವಿಸಿದರೆ ಶೀತ, ಕೆಮ್ಮು, ಕಫದಿಂದ ಗುಣಮುಖರಾಗಬಹುದು.ಆದರೆ ಚಿಕ್ಕಮಕ್ಕಳಿಗೆ ಈ ಮದ್ದನ್ನು ನೀಡುವ ಮುನ್ನ ವೈದ್ಯರ ಸಲಹೆ ಪಡೆಯುವುದು ಒಳಿತು.

ಈ ರೀತಿಯ ಆರೋಗ್ಯದ ಚಿಕ್ಕಪುಟ್ಟ ಸಮಸ್ಯೆಗಳಿಗೆ ಮನೆಯಲ್ಲಿಯೇ ಔಷಧ ತಯಾರಿಸಿ ಪರಿಹಾರ ಕಂಡುಕೊಳ್ಳಬಹುದು. ನಿಮಗೆ ಆರೋಗ್ಯಕರ ವಿಚಾರದ ಬಗ್ಗೆ ಇನ್ನು ಮತ್ತಷ್ಟು ತಿಳಿಯಲು ನಮ್ಮ ಪುಟವನ್ನು ಅನುಸರಿಸಿ ಹಾಗು ನಮ್ಮಲ್ಲಿ ತಿಳಿಯುವಂತ ವಿಚಾರಗಳನ್ನು ನಿಮ್ಮ ಆತ್ಮೀಯ ಸ್ನೇಹಿತರಿಗೂ ತಿಳಿಸಲು ಮರೆಯದಿರಿ ಶುಭವಾಗಲಿ

Leave A Reply

Your email address will not be published.

error: Content is protected !!