ಕೋರೋನ ವೈರಸ್ ಗೆ ಆಯುರ್ವೇದದಲ್ಲಿ ಔಷಧಿ ಇದೆಯಾ?

ಆಯುರ್ವೇದವು ಪುರಾತನ ಕಾಲದ ವೈದ್ಯ ಪದ್ಧತಿ. ಆಯುರ್ವೇದದ ಮೂಲಕ ಹಲವಾರು ದೊಡ್ಡ ದೊಡ್ಡ ಕಾಯಿಲೆಗಳನ್ನು ವಾಸಿ ಮಾಡಿರುವ ಉದಾಹರಣೆಗಳು ಬೇಕಾದಷ್ಟು ಇವೆ. ಪ್ರಸ್ತುತ ಜಗತ್ತಿನಲ್ಲಿ ಕೂಡಾ ನಮ್ಮ ಅನೇಕ ಕಾಯಿಲೆಗಳಿಗೆ ಆಯುರ್ವೇದದಲ್ಲಿ ಔಷಧಿಗಳು ಇವೆ. ಇಂದಿಗೂ ಕೂಡ ಕೆಲವು ಜನರು ಇಂಗ್ಲಿಷ್ ಔಷಧಿಗಳನ್ನು ಬಿಟ್ಟು ಆಯುರ್ವೇದ ಔಷಧಿಗಳ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಇಂದು ನಾವು ಈಗ ಸಧ್ಯ ಇತ್ತೀಚಿನ ದಿನಗಳಲ್ಲಿ ಚೀನಾದಲ್ಲಿ ಸೃಷ್ಟಿಯಾದ ವ್ಯಾಪಕವಾಗಿ ಹರಡುತ್ತಿರುವ ಕೊರೋನ ವೈರಸ್ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಇದು ವಿಶ್ವದಲ್ಲಿ ಎಲ್ಲರಿಗೂ ಆತಂಕವನ್ನು ಸೃಷ್ಟಿ ಮಾಡುತ್ತಿದೆ ಇದುವರೆಗೂ ಈ ಕರೋನ ವೈರಸ್ ಗೆ ಯಾವುದೇ ಔಷಧಿಯನ್ನು ಕಂಡು ಹಿಡಿದಿಲ್ಲ ಇದಕ್ಕೆ ನಮ್ಮ ಆಯುರ್ವೇದದಲ್ಲಿ ಏನಾದ್ರೂ ಔಷಧಿ ಇದೆಯಾ ಇದ್ದರೆ ಅದನ್ನ ಹೇಗೆ ಬಳಸೋದು ಅಂತೆಲ್ಲ ತಿಳಿಯೋಣ.

ಚೆನ್ನೈ ನ ಆಯುರ್ವೇದ ಸೆಂಟರ್ ನ ವೈದ್ಯರೊಬ್ಬರು ಕರೋನ ವೈರಸ್ ಗೆ ತಾವು ಸೂಕ್ತ ಆಯುರ್ವೇದ ಔಷಧಿಯನ್ನು ಕಂಡು ಹಿಡಿದಿರುವುದಾಗಿ ತಿಳಿಸಿದ್ದಾರೆ. ತಾನು ಕಂಡು ಹಿಡಿದಿರುವ ಗಿಡ ಮೂಲಿಕೆಗಳ ಮದ್ದು ಇಂಥದ್ದೇ ವೈರಸ್ ಗಳನ್ನು ಸಹ ನಾಶ ಮಾಡುತ್ತೆ ಅಂತ ಹೇಳಿರುವ ಚನ್ನೈ ನ ವೈದ್ಯರು ಈ ಹಿಂದೆ ಆಯುರ್ವೇದ ಸೆಂಟರ್ ನಿಂಡ ತಯಾರಿಸಿದ ಔಷಧಿಯಿಂದಲೇ ಡೆಂಗ್ಯೂ ಗೆ ಚಿಕಿತ್ಸೆ ನೀಡಿರುವುದಾಗಿ ತಿಳಿಸಿದ್ದಾರೆ. ಅವರು ನೀಡಿದ ಚಿಕಿತ್ಸೆಯಿಂದ ಬಿಳಿ ರಕ್ತ ಕಣಗಳು ಹೆಚ್ಚಾಗಿ ಡೆಂಗ್ಯೂ ಕಡಿಮೆ ಆಗಿದೆ ಎನ್ನುವ ಈ ವೈದ್ಯರು ಕರೋನ ಕೂಡಾ ತೀವ್ರವಾದ ಜ್ವರ ಇದಕ್ಕೆ ತುತ್ತಾದವರಿಗೆ ಒಂದು ದಿನದ ಒಳಗೆ ಚಿಕಿತ್ಸೆಯನ್ನು ಆರಂಭಿಸಿದರೆ ಗುಣಮುಖರಾಗುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.

ಕೊರೋನಾ ಗೆ ಚಿಕಿತ್ಸೆ ಕಂಡು ಹಿಡಿಯುವ ಸಂದರ್ಭದಲ್ಲಿ ಸಾಮಾಜಿಕ ಜಾತಾಣಗಳಲ್ಲಿ ಕೂಡಾ ಇದರ ಬಗ್ಗೆ ಸಾಕಷ್ಟು ವಿಚಾರಗಳು ಹರಿದಾಡುತ್ತಿವೆ. ನೂರಕ್ಕೂ ಹೆಚ್ಚು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇರೋ ನಮ್ಮ ದೇಸಿ ಔಷಧಿ ಗಿಡ ಲೋಳೆ ರಸ ಅಂದರೆ ಅಲೋವೆರಾ ಇದಕ್ಕೆ ಈ ಕರೋನ ವೈರಸ್ ಅನ್ನು ಒದ್ದೊಡಿಸುವ ಶಕ್ತಿ ಇದೆ ಅಂತ ಹೇಳ್ತಾರೆ. ಅಲೋವೆರಾ ರಸವನ್ನು ಶುದ್ಧ ನೀರಿನಲ್ಲಿ ಬೆರೆಸಿ ಕುಡಿದರೆ ಕರೋನ ವೈರಸ್ ನಿಮ್ಮ ಹತ್ತಿರವೂ ಸಹ ಸುಳಿಯಲ್ಲ ಅಂತ ಹೇಳ್ತಾರೆ ಅಷ್ಟೆ ಅಲ್ಲದೆ ಮನೆಯ ಮುಂದೆ ಈ ಲೋಳೆಸರದ( ಅಲೋವೆರಾ) ಗಿಡವನ್ನು ಬೆಳೆಸುವುದರಿಂದ ಗಾಳಿಯಲ್ಲಿ ಸುಲಭವಾಗಿ ಹರಡುವ ಈ ಕರೋನ ವೈರಸ್ ನಮ್ಮ ಬಳಿ ಬರದಂತೆ ತಡೆಯುತ್ತದೆ.

ಲೋಳೆಸರ ಅಷ್ಟೆ ಅಲ್ಲದೆ ಇನ್ನೊಂದು ಗಿಡವು ಕೂಡಾ ನಮ್ಮನ್ನ ಕರೋನ ಇಂದ ಕಾಪಾಡುವ ಔಷಧೀಯ ಗುಣಗಳನ್ನು ಹೊಂದಿದೆ ಎನ್ನುತ್ತಾರೆ ಚೆನ್ನೈ ನ ಆಯುರ್ವೇದ ವೈದ್ಯರು. ಪ್ರತಿಯೊಬ್ಬರ ಮನೆಯಲ್ಲೂ ಪೂಜಿಸುವ ತುಳಸಿ ಗಿಡ ಕರೋನ ವೈರಸ್ ಹರಡುವುದನ್ನು ನಿಯಂತ್ರಿಸುತ್ತದೆ ಎನ್ನಲಾಗುತ್ತದೆ. ಕೆಲವು ತುಳಸಿ ದಳಗಳನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಬೆರೆಸಿ ಕಷಾಯ ಮಾಡಿ ನಿಯಮಿತವಾಗಿ ಸೇವಿಸುವುದರಿಂದ ಕರೋನ ಅಲ್ಲದೆ ಬೇರೆ ಯಾವುದೇ ಜ್ವರವು ಸಹ ಬರುವುದಿಲ್ಲ. ಜ್ವರ ಅಷ್ಟೆ ಅಲ್ಲದೆ ಎಲ್ಲ ರೀತಿಯ ಜೀವ ನಿರೋಧ ಶಕ್ತಿಯನ್ನು ನಮಗೆ ಈ ತುಳಸಿ ನೀಡುತ್ತೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಲೋಳೆಸರ, ತುಳಸಿ ಅಂತೆ ಅರಳಿ ಮರದ ಎಲೆಗಳು ಮತ್ತು ಅಮೃತ ಬಳ್ಳಿ ಯಿಂದ ತಯಾರಿಸಿದ ಕಷಾಯ ಕೂಡಾ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕರೋನ ದಂತಹ ಮಾರಕ ರೋಗಗಳಿಂದ ನಮಗೆ ರಕ್ಷಣೆ ನೀಡಬಲ್ಲದು.

ಆದರೂ ಚೆನ್ನೈ ನ ಆಯುರ್ವೇದ ಸೆಂಟರ್ ನ ವೈದ್ಯರು ಹೇಳಿದ ಹೇಳಿಕೆ ಇರಬಹುದು ಅಥವಾ ಆಂಧ್ರದ ಆಯುರ್ವೇದ ಸೆಂಟರ್ ನ ವೈದ್ಯರು ಕೊಟ್ಟ ಹೇಳಿಕೆಯು ಇರಬಹುದು ಇವುಗಳನ್ನ ಸಂಪೂರ್ಣ ಸತ್ಯ ಎಂದೂ ಸಂಪೂರ್ಣ ಸುಳ್ಳು ಎಂದು ಹೇಳಿ ಅಲ್ಲಗಳೆಯುವಂತಿಲ್ಲ. ಇನ್ನಷ್ಟು ಸಂಶೋಧನೆಗಳು ಇವುಗಳಮೇಲೆ ಆಗಬೇಕಿದೆ. ಯಾವುದೇ ಔಷಧ ಕೂಡಾ ಸಂಶೋಧನೆಯಿಂದ ಧೃಢ ಪಡದೇನೆ ಯಾವುದೇ ಒಂದು ಮಾರಣಾಂತಿಕ ಹಾಗೂ ಸಾಂಕ್ರಾಮಿಕ ರೋಗಗಳಿಗೆ ಬಳಸುವುದು ಸರಿ ಅಲ್ಲಾ. ಹಾಗಂತ ಮದ್ದೆ ಇಲ್ಲದ ರೋಗಗಳಿಗೆ ಅಲೋಪತಿ ವೈದ್ಯರು ಕೊಡುವ ಔಷಧಿಗಳ ಜೊತೆಗೆ ಆಯುರ್ವೇದದ ಔಷಧಿಯನ್ನು ತೆಗೆದುಕೊಂಡರೆ ತಪ್ಪೇನು ಇಲ್ಲ. ಖಾಯಿಲೆ ಯಾವುದೋ ಒಂದು ರೀತಿಯಲ್ಲಿ ವಾಸಿಯಾಗುವುದಷ್ಟೇ ಮುಖ್ಯ. ಇವು ಕರೋನ ವೈರಸ್ ನ ವಿರುದ್ಧ ಅದನ್ನ ನಿವಾರಣೆ ಮಾಡೋಕೆ, ಗುಣಪಡಿಸೋಕೆ ಅಂತ ಒಂದಿಷ್ಟು ಜನ ವೈದ್ಯರು ಮಾಡುತ್ತಿರುವ ಸಂಶೋಧನೆಗಳ ಕುರಿತು ಚಿಕ್ಕ ಮಾಹಿತಿ.

Leave a Comment

error: Content is protected !!