ಅಗಸ್ಟ್ 21 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಮಗ ಮನೋರಂಜನ್. ಹುಡುಗಿ ಯಾರು ಗೊತ್ತಾ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಈ ವರ್ಷವೂ ಕೂಡ ಹಬ್ಬದ ವಾತಾವರಣ. ಹಿಂದಿನ ವರ್ಷವಷ್ಟೆ ರವಿಚಂದ್ರನ್ ಅವರ ಒಬ್ಬಳೇ ಮಗಳು ಗೀತಾಂಜಲಿ ಅವರ ಮದುವೆ ಅದ್ದೂರಿಯಾಗಿ ನಡೆದಿತ್ತು ಕನ್ನಡ ಚಿತ್ರರಂಗದ ಹಿರಿಯ ನಟರು ಮತ್ತು ಸೆಲೆಬ್ರಿಟಿಗಳು ಈ ಮದುವೆಗೆ ಬಂದು ಆಶೀರ್ವಾದ ಮಾಡಿದ್ದರು. ಇದೀಗ ಒಂದೇ ವರ್ಷದೊಳಗೆ ರವಿಚಂದ್ರನ್ ಅವರ ಮನೆಯಲ್ಲಿ ಇನ್ನೊಂದು ಮದುವೆ ಸಮಾರಂಭದ ಸಿದ್ಧತೆ ನಡೆಯುತ್ತಿದೆ. ಅದು ಬೇರೆ ಯಾರು ಅಲ್ಲ ರವಿಚಂದ್ರನ್ ಅವರ ಮಗ ಮನೋರಂಜನ್ ಅವರ ಮದುವೆ.

ರವಿಚಂದ್ರನ್ ಅವರ ಇಬ್ಬರು ಗಂಡು ಮಕ್ಕಳು ಸಹ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಇಬ್ಬರು ಕೂಡ ಯುವನಟರಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇಬ್ಬರು ನಟರು ಕೂಡ ದೊಡ್ಡ ಯಶಸ್ಸಿಗೆ ಕಾದು ನೋಡುತ್ತಿದ್ದಾರೆ.ರವಿಚಂದ್ರನ್ ಅವರ ಮೊದಲನೆ ಮಗ ಮನೋರಂಜನ್ ಅವರು ಈಗಾಗಲೇ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಮಾಡಿಕೊಂಡಿದ್ದಾರೆ. ಮನೋರಂಜನ್ ಅವರು ತಮ್ಮ ವೃತ್ತಿ ಜೀವನದಲ್ಲಿ ಸೆಟಲ್ ಆಗಿದ್ದಾರೆ ಅಂತಲೇ ಹೇಳಬಹುದು. ಹಾಗೆ ಮದುವೆಯಾಗೋ ಕಂಕಣಬಲ ಕೂಡಿಬಂದಿದೆ ಅಂತಲೇ ಹೇಳಬಹುದು.

ಇನ್ನೊಂದು ವಿಚಾರವೇನೆಂದರೆ ಮನೋರಂಜನ್ ಅವರಿಗೆ ಈಗಾಗಲೇ 34 ವರ್ಷ ವಯಸ್ಸಾಗಿದೆ. ಒಂದು ಕಡೆ ವಯಸ್ಸು ಆಗ್ತಾ ಇದೆ ಇನ್ನೊಂದು ಕಡೆ ಚಿತ್ರರಂಗದಲ್ಲಿ ಕೂಡ ಒಳ್ಳೆಯ ಸಿನಿಮಾಗಳ ಆಫರ್ ಗಳು ಬರುತ್ತಿವೆ ಇಂಥ ಸಮಯದಲ್ಲಿ ಒಂದು ಹೆಣ್ಣನ್ನು ನೋಡಿ ಮದ್ವೆ ಆಗಿ ಸೆಟಲ್ ಆಗೂ ಅಂಥ ಮನೋರಂಜನ್ ಗೆ ರವಿಚಂದ್ರನ್ ಅವರು ಹೇಳಿದ್ದರಂತೆ. ತನ್ನ ತಂದೆಯ ಮಾತಿಗೆ ಇಲ್ಲ ಎಂದು ಹೇಳಲಾಗದೆ ಮನೋರಂಜನ್ ಮದುವೆಗೆ ಒಪ್ಪಿಕೊಂಡಿದ್ದಾರೆ ಅಷ್ಟಕ್ಕೂ ಮನೋರಂಜನ್ ಗೆ ಹುಡುಗಿಯನ್ನು ನೋಡಿದ್ದು ರವಿಚಂದ್ರನ್ ಅವರೇ. ತಮ್ಮ ಸೊಸೆಯನ್ನು ರವಿ ರವಿಚಂದ್ರನ್ ಸೆಲೆಕ್ಟ್ ಮಾಡಿದ್ದಾರೆ.

ತಮ್ಮ ಮನೆಗೆ ಬರುವ ಸೊಸೆ ಹೇಗಿರಬೇಕೆಂದು ರವಿಚಂದ್ರನ್ ಅವರೇ ನಿರ್ಧಾರ ಮಾಡಿದ್ದಾರಂತೆ. ಹಾಗೇ ತನ್ನ ಮನೆಗೆ ಡಾಕ್ಟರ್ ಸೊಸೆಯನ್ನು ರವಿಚಂದ್ರನ್ ಹುಡುಕಿದ್ದಾರೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ ನ ನಿವಾಸಿಯಾಗಿರುವ ರವಿಚಂದ್ರನ್ ಅವರ ಸ್ನೇಹಿತರ ಮಗಳು ಡಾಕ್ಟರ್ ಜೊತೆ ಮಗನ‌ ಮದುವೆಯನ್ನು ನಿಶ್ಚಯ ಮಾಡಿದ್ದಾರೆ. ಮುಂದಿನ ತಿಂಗಳು ಅಂದರೆ ಆಗಸ್ಟ್ 21 ಮತ್ತು 22 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ನಡೆಯಲಿದೆ. ಹಿಂದಿನ ವರ್ಷ ನಡೆದ ರವಿಚಂದ್ರನ್ ಅವರ ಮಗಳ ಮದುವೆಯಲ್ಲಿ ಮಾಧ್ಯಮದವರಿಗೆ ಅವಕಾಶವಿರಲಿಲ್ಲ. ತಮ್ಮ ಮನೆಯ ಮದುವೆಯನ್ನು ನೇರ ಪ್ರಸಾರವಾಗಿ ತೋರಿಸೋಕೆ ರವಿಚಂದ್ರನ್ ಇಷ್ಟಪಟ್ಟಿರಲಿಲ್ಲ.

ಇದೀಗ ತಮ್ಮ ಮಗನ ಮದುವೆಯನ್ನು ಕೂಡ ಮಗಳ ಮದುವೆಯ ರೀತಿ ನಡೆಯಲಿದೆ ಎಂದು ರವಿಚಂದ್ರನ್ ಹೇಳಿದ್ದಾರೆ. ಕೇವಲ ಬಂಧು ಮಿತ್ರರಿಗೆ ಮಾತ್ರ ಮದುವೆಗೆ ಅವಕಾಶವಿರುತ್ತೆ ಮತ್ತು ಮಾಧ್ಯಮದವರಿಗೆ ಮತ್ತು ನ್ಯೂಸ್ ಚಾನಲ್ ಗಳಿಗೆ ಅವಕಾಶ ನೀಡುವುದಿಲ್ಲ. ಮದುವೆಯ ಎಲ್ಲಾ ವಿಡಿಯೋ ಮತ್ತು ಫೋಟೋಗಳನ್ನು ರವಿಚಂದ್ರನ್ ಅವರು ಮದುವೆಯ ಸಮಾರಂಭಗಳು ಮುಗಿದ ನಂತರ ನಂತರ ಮಾಧ್ಯಮಗಳಿಗೆ ಹಂಚುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ. ಸದ್ಯದ ಮಟ್ಟಿಗೆ ಕಿರುತೆರೆ ಶೋ ಗಳಲ್ಲಿ ಬ್ಯುಸಿಯಾಗಿರುವ ರವಿಚಂದ್ರನ್ ಅವರು ಇನ್ನೇನು ಕೆಲವೇ ದಿನಗಳಲ್ಲಿ ಸಮಯವನ್ನು ಬಿಡುವು ಮಾಡಿಕೊಂಡು ತನ್ನ ಮಗನ ಮದುವೆಯ ಸಿದ್ಧತೆಗೆ ತಯಾರಿ ನಡೆಸಲಿದ್ದಾರೆ.

Leave A Reply

Your email address will not be published.

error: Content is protected !!