ಬುಲೆಟ್ ಪ್ರಕಾಶ್ ನಿಧನರಾದಾಗ ಅವರ ಮಗಳ ಮದುವೆ ಜವಾಬ್ದಾರಿ ನನ್ನದು ಎಂದು ಹೇಳಿದ್ದ ದರ್ಶನ್. ಇದೀಗ ಮಾಡಿದ್ದೇನು

ನಟ ಬುಲೆಟ್ ಪ್ರಕಾಶ್ ಅವರು ಎಂಥ ಒಳ್ಳೆ ಹಾಸ್ಯಗಾರ ಎನ್ನುವುದು ಎಲ್ಲರಿಗೂ ಗೊತ್ತು. ಅವರು ನಟಿಸಿರುವ ಎಲ್ಲಾ ಸಿನಿಮಾಗಳಲ್ಲಿ ವಿಭಿನ್ನವಾದ ಹಾಸ್ಯ ಪಾತ್ರಗಳನ್ನು ಮಾಡುತ್ತಾರೆ. ಅಜಾನುಬಾಹು ದೇಹವನ್ನು ಹೊಂದಿದ್ದ ಬುಲೆಟ್ ಪ್ರಕಾಶ್, ತಮ್ಮದೇ ಆದ ಹಾಸ್ಯಗಳ ಮೂಲಕ ಸಿಮಿಪ್ರಿಯರನ್ನು ರಂಜಿಸಿದ್ದರು. ಆದರೆ ಇಂದು ಬುಲೆಟ್ ಪ್ರಕಾಶ್ ನಮ್ಮೊಂದಿಗೆ ಇಲ್ಲ. ಈಗ ಅವರ ಮಗ ಸಿನಿಮಾ ರಂಗವನ್ನು ಪ್ರವೇಶಿಸಿದ್ದಾರೆ.

ಹೌದು ಬುಲೆಟ್ ಪ್ರಕಾಶ್ ಅವರಿಗೆ ಮಗ ರಕ್ಷಕ್ ಬುಲೆಟ್ ಕೂಡ ಒಬ್ಬ ನಟನಾಗಬೇಕು ಎನ್ನುವ ಆಸೆ ಇತ್ತು ಹಾಗಾಗಿ ಮಗನಿಗೆ ಜಿಮ್ ಡ್ಯಾನ್ಸ್ ಮೊದಲಾದ ತರಬೇತಿಯನ್ನು ಕೊಡಿಸುತ್ತಿದ್ದರು. ಇನ್ನು ರಕ್ಷಕ ಕೂಡ ಅದಕ್ಕೆ ಬೇಕಾದ ತಯಾರಿಯನ್ನು ನಡೆಸಿದ್ದರು. ಆದರೆ ದುರ್ದೃಷ್ಟ ವಿಷಯ ಅದು ಬುಲೆಟ್ ಪ್ರಕಾಶ್ ಅನಾರೋಗ್ಯದ ಕಾರಣದಿಂದಾಗಿ ಕೊನೆಯುಸಿರೆಳೆದರು. ಇದರಿಂದ ರಕ್ಷಕ್ ಅವರಿಗೆ ತಮ್ಮ ಕನಸು ನನಸಾಗುತ್ತೋ ಇಲ್ಲವೋ ಎನ್ನುವ ಭಯವಿತ್ತು. ಆದರೆ ಈ ಸಂದರ್ಭದಲ್ಲಿ ರಕ್ಷಕ್ ಅವರಿಗೆ ಅಭಯ ನೀಡಿದ್ದು ಡಿ ಬಾಸ್!

ಹೌದು ಕನ್ನಡ ಚಿತ್ರರಂಗದಲ್ಲಿ ತಾನು ಬೆಳೆಯಬೇಕು ತನ್ನೊಂದಿಗೆ ಇತರ ಕಲಾವಿದರು ಬೆಳೆಯಬೇಕು ಎಂದು ಮನಪೂರ್ವಕವಾಗಿ ಹಾರೈಸುವ ಏಕೈಕ ವ್ಯಕ್ತಿ ಅಂದ್ರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಹಾಗಾಗಿ ಬುಲೆಟ್ ಪ್ರಕಾಶ್ ಅವರ ನಿಧನದ ನಂತರ ರಕ್ಷಕ ಅವರಿಗೆ ಅಭಯ ನೀಡಿದ್ದು ಡಿ ಬಾಸ್. ಬುಲೆಟ್ ಪ್ರಕಾಶ್ ಹಾಗೂ ನಟ ದರ್ಶನ್ ಅವರ ನಡುವೆ ಉತ್ತಮ ಸ್ನೇಹವಿತ್ತು. ನಟ ದರ್ಶನ್ ಅವರ ಹಲವಾರು ಸಿನಿಮಾಗಳಲ್ಲಿ ಬುಲೆಟ್ ಪ್ರಕಾಶ್ ಕೂಡ ನಟಿಸಿದ್ದಾರೆ. ಹಾಗಾಗಿ ಬುಲೆಟ್ ಪ್ರಕಾಶ್ ಅವರ ಕುಟುಂಬದ ಬಗ್ಗೆಯೂ ಅಷ್ಟೇ ಕಾಳಜಿ ವಹಿಸಿರುವ ನಟ ದರ್ಶನ್ ರಕ್ಷಕ ಅವರಿಗೆ ತುಂಬಾನೇ ಬೆಂಬಲ ನೀಡುತ್ತಾರೆ. ಈ ಬಗ್ಗೆ ಸಂದರ್ಶನ ಒಂದರಲ್ಲಿ ನಟ ರಕ್ಷಕ ಹೇಳಿಕೊಂಡಿದ್ದಾರೆ.

ನಾನು ದರ್ಶನ್ ಅವರ ಮನೆಗೂ ಹೋಗುತ್ತೇನೆ ನಾವೆಲ್ಲರೂ ಕುಳಿತು ಊಟ ಮಾಡುತ್ತೇವೆ. ಇನ್ನು ನಾವು ಊಟ ಮಾಡುವಾಗ ಸಿಂಹ ಬಗ್ಗೆ ಮಾತನಾಡುವುದಿಲ್ಲ ಆಗಲಿಕ್ಕೆ ನೀನು ಸ್ನೇಹಿತರ ಜೊತೆ ಹೇಗಿರಬೇಕು ಎಂಬ ಮಾಹಿತಿಯನ್ನು ನನಗೆ ತಿಳಿಸುತ್ತಾರೆ ದರ್ಶನ್. ದರ್ಶನ ಅವರು ನನ್ನನ್ನು ಅವರ ಮಗನಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ ಎಂದು ರಕ್ಷಕ್ ಹೇಳಿದ್ದಾರೆ. ಅಲ್ಲದೆ ಬುಲೆಟ್ ಪ್ರಕಾಶ್ ಅವರ ಮಗಳ ವಿವಾಹ ವನ್ನು ನೆರವೇರಿಸುವುದಾಗಿ ಜವಾಬ್ದಾರಿ ಹೊತ್ತಿದ್ದಾರೆ ದರ್ಶನ್ ಅವರು.

ರಕ್ಷಕ್ ಬುಲೆಟ್ ಅವರು ಈಗಾಗಲೇ ಸಿನಿಮಾದಲ್ಲಿ ಅಭಿನಯಿಸಲು ಆರಂಭಿಸಿದ್ದು, ಚರಣ್ ಅಭಿನಯದ ಗುರು ಶಿಷ್ಯರು ಸಿನಿಮಾದಲ್ಲಿ ಶಿಷ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳದಿದ್ದರೆ ರಕ್ಷಕ್ ಬುಲೆಟ್. ಅಪ್ಪನಂತೆ ಮಗನು ಕೂಡ ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರು ಮಾಡಲಿ ಎಂದು ಎಲ್ಲರೂ ಹಾರೈಸಿದ್ದಾರೆ.

Leave a Comment

error: Content is protected !!