ಎಳನೀರು ಕುಡಿಯುವುದರಿಂದ 10 ರೋಗಗಳು ನಿಯಂತ್ರಣ

ದೇಹದ ಆರೋಗ್ಯ ಕಾಪಾಡಬಲ್ಲ ಅಮೃತ ಸಂಜೀವಿನಿ ಎಂದರೆ ಅದು ಎಳೆನೀರು ಮಾತ್ರ. ಸಾಮಾನ್ಯ ಕಾಯಿಲೆಯಿಂದ ಬಳಲಿ ಬೆಂಡಾದ ದೇಹಕ್ಕೆ ಹೊಸ ಚೈತನ್ಯ ನೀಡಬಲ್ಲ ಶಕ್ತಿ ಎಳೆನೀರಿಗಿದೆ. ಬಾಯಾರಿಕೆಗೆ ತಂಪಾದ ಪಾನೀಯವಾಗಿ, ಮುಖದ ಸೌಂದರ್ಯ ಹೆಚ್ಚಿಸುವ ಸೌಂದರ್ಯ ವರ್ದಕವಾಗಿ ಎಳೆನೀರು ಸಹಾಯಕ.

ಉಷ್ಣವಲಯಗಳಲ್ಲಿ, ಸಮುದ್ರತೀರ ಗಳಲ್ಲಿ ಬೆಳೆಯುವ ನೈಸರ್ಗಿಕದತ್ತವಾದ ಈ ಎಳೆನೀರು ದೇಹದ ಉಷ್ಣತೆ ಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.ಕರಾವಳಿ ಪ್ರದೇಶಗಳಲ್ಲಿ ಎಳನೀರನ್ನ ಹೆಚ್ಚಾಗಿ ಕಾಣಬಹುದು. ಪುರಾತನ ಕಾಲದಂದಲೂ ಔಷಧ ಹಾಗೂ ತಂಪಾದ ಪಾನೀಯ ರೂಪದಲ್ಲಿ ಎಳೆನೀರನ್ನ ಸೇವಿಸುತ್ತ ಬರಲಾಗಿದೆ. ಇದರಿಂದ ಅನೇಕ ರೋಗಗಳು ಗುಣಮುಖವಾಗಬಲ್ಲದು. ರಕ್ತದೊತ್ತಡ ನಿಯಂತ್ರಣ ಎಳೆನೀರಿನಲ್ಲಿ ಉತ್ತಮವಾದ ಪ್ರೊಟೀನ್, ಕಾರ್ಬೋಹೈಡ್ರೇಟ್ ಅಂಶಗಳಿದ್ದು ಇದರ ಸೇವನೆಯಿಂದ ಸಾಮಾನ್ಯವಾಗಿ ಕಾಡುವ ರಕ್ತದೊತ್ತಡವನ್ನು ನಿಯಂತ್ರಿಣದಲ್ಲಿಡಬಹುದು.

ಹೃದಯ ಸಮಸ್ಯೆಗಾಗಿ: ಎಳೆನೀರಿನಲ್ಲಿ ಯಾವುದೇ ಕೊಬ್ಬಿನಾಂಶ ಇರುವುದಿಲ್ಲ.ಹೃದಯ ಸಮಸ್ಯೆ ಇರುವವರು ನೈಸರ್ಗಿಕವಾದ ಈ ಪಾನೀಯವನ್ನ ಸೇವಿಸಬಹುದು.ಇದರಲ್ಲಿ ಉತ್ತಮ ರೋಗ ನಿರೋಧಕ ಶಕ್ತಿಒಳಗೊಂಡಿರುತ್ತದೆ. ಅಲ್ಲದೆ ಲಿಪೊ ಪ್ರೊಟೀನ್ ಮಟ್ಟವನ್ನು ಕಡಿಮೆಮಾಡುತ್ತದೆ.

ದೇಹದಲ್ಲಿನ ನಿರ್ಜಲೀಕರಣವನ್ನು ತಡೆಗಟ್ಟುತ್ತದೆ: ಎಳೆನೀರಿನಲ್ಲಿ ಜಿರ್ಣಕ್ರೀಯೆಗೆ ಬೇಕಾದ ಕಾರ್ಬೋಹೈಡ್ರೇಟ್ ಗಳು, ಲವಣಗಳು ಸಂಮೃದ್ಥವಾಗಿದೆ.ಹೀಗಾಗಿ ಅತಿಸಾರ, ವಾಕರಿಕೆಯಿಂದ ಬಳಲುತ್ತಿರುವ ರೋಗಿಗಳ ನಿರ್ಜಲೀಕರಣ ಸ್ಥಿತಿಯ ಅತ್ಯುತ್ತಮ ಪಾನೀಯವಾಗಿದೆ ಎಳೆನೀರು.

ಸಕ್ಕರೆ ಮಟ್ಟವನ್ನು ಕಡಿಮೆಮಾಡುತ್ತದೆ: ದೇಹದ ಜೀವಕೋಶಗಳಲ್ಲಿ ಇನ್ಸುಲಿನ್ ಉತ್ಪಾದನೆ ಮಾಡುವ ಪ್ರೊಟೀನ್ ಮತ್ತು ಫೈಬರ್ ಅಂಶ ಎಳೆನೀರಿನಲ್ಲಿ ಹೇರಳವಾಗಿದೆ.ಇದು ಮಧುಮೇಹದಿಂದ ಉಂಟಾಗುವ ಹಾನಿಕಾರಕ ಅಡ್ಡಪರಿಣಾಮದ ತೀವ್ರತೆಯನ್ನು ತಡೆಗಟ್ಟುತ್ತದೆ.

ಮೂತ್ರದ ತೊಂದರೆ ಗುಣಪಡಿಸುತ್ತದೆ: ಎಳೆನೀರಿನಲ್ಲಿ ಪೊಟಾಷಿಯಂ ಮತ್ತು ಆರೋಗ್ಯಕರ ಕಿಣ್ವಗಳ ಉಪಸ್ಥಿತಿಯು ಮೂರ್ತದ ಹೆಚ್ಚಿನ ಉತ್ಪಾದನೆ ಮೂಲಕ ದೇಹದಿಂದ ಹೊರಬರುವ ಎಲ್ಲಾ ಜೀವಾಣುಗಳನ್ನು ತೆಗೆದುಹಾಕುವುದಕ್ಕೆ ಪರಿಪೂರ್ಣ ಪಾನೀಯವಾಗಿದೆ.

ಸೌಂದರ್ಯ ವರ್ದಕವಾಗಿ: ಕೂದಲು ಉದುರಿವಿಕೆ ಸಮಸ್ಯೆಯನ್ನು ಎಳೆನೀರಿನ ನಿಯಮಿತ ಸೇವನೆಯಿಂದ ತಡೆಯಬಹುದು. ಇತರೆ ನೈಸರ್ಗಿಕ ಪದಾರ್ಥಗಳೊಂದಿಗೆ ಎಳೆನೀರಿನ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

ಮಾನಸಿಕ ಶಕ್ತಿ ಹೆಚ್ಚಿಸುತ್ತದೆ: ಎಳೆನೀರಿನಲ್ಲಿ ಅಮೈನೊ ಆಮ್ಲ ಹೆಚ್ಚಾಗಿದ್ದು, ಇದರಿಂದ ಸ್ಮರಣಾ ಶಕ್ತಿ ಹೆಚ್ಚಾಗಿ ಮಾನಸಿಕ ಸ್ಥಿಮಿತ ಬಲಗೊಳಿಸುತ್ತದೆ.ಅಲ್ಲದೆ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.ಇದರೊಂದಿಗೆ ಮೂರ್ತ ಪಿಂಡಗಳ ಕ್ಷಮತೆ, ಮಧ್ಯಪಾನದ ಮಂಪರು ಹಾಗೂ ತಲೆನೋವಿನ ನಿವಾರಣೆ, ಚರ್ಮದ ಸೌಂದರ್ಯ ವೃದ್ಧಿ, ಜೀರ್ಣಕ್ರಿಯೆ ಹೆಚ್ಚಿಸುವುದು, ದೇಹದ ಪೋಷಕಾಂಶಗಳ ವೃದ್ಧಿ, ಮಲಬದ್ಧತೆ ಯಂತಹ ಸಮಸ್ಯೆಗಳನ್ನು ಎಳೆನೀರು ಸೇವನೆಯಿಂದ ನಿವಾರಿಸಿಕೊಳ್ಳ ಬಹುದು.

Leave a Comment

error: Content is protected !!