ಒಂದು ಗ್ಲಾಸ್ ನೀರಿನ ಜೊತೆಗೆ ಜೇನುತುಪ್ಪ ಸೇವನೆ ಮಾಡುವುದರಿಂದ ಏನ್ ಲಾಭವಿದೆ ಗೊತ್ತೇ

ತುಂಬಾ ಜನ ನಮ್ಮಲ್ಲಿ ಬೆಳಿಗ್ಗೆ ಎದ್ದಕೂಡಲೇ ಬಿಸಿ ನೀರನ್ನು ಕುಡಿಯುವ ಅಭ್ಯಾಸವನ್ನ ಇಟ್ಟುಕೊಂಡಿರುತ್ತಾರೆ. ಇನ್ನೂ ಕೆಲವರು ನೀರಿನ ಜೊತೆಗೇ ನಿಂಬೆಹಣ್ಣಿನ ರಸ ಅಥವಾ ಜೇನು ತುಪ್ಪ ಇವುಗಳನ್ನು ಸಹ ಬೆರೆಸಿ ಕುಡಿಯುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ‌ . ನಿಜಕ್ಕೂ ಇದು ನಮ್ಮ ಆರೋಗ್ಯದ ದ್ರಷ್ಟಿಯಿಂದ ನೋಡಿದರೆ ಒಳ್ಳೆಯ ಅಭ್ಯಾಸ ಎನ್ನಬಹುದು‌ . ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಜೇನು ತುಪ್ಪ ಸೇರಿಸಿ ಕುಡಿಯುವುದರಿಂದ ಹಲವಾರು ಲಾಭದಾಯಕ ಆರೋಗ್ಯಕಾರೀ ಅಂಶಗಳು ಇವೆ ಹಾಗಾದ್ರೆ ಅವು ಏನು? ತಿಳಿಸಿಕೊಡ್ತೀವಿ ನೋಡಿ.

ಜೇನು ಬೆರೆಸಿದ ನೀರು ಆರೋಗ್ಯ ನೂರು”.. ಜೇನು ನಮ್ಮ ದೇಹಕ್ಕೆ ಒಂದು ಅತ್ಯುತ್ತಮ ಬ್ಯಾಕ್ಟೀರಿಯಾ ನಿವಾರಕ. ದೇಹವನ್ನು ಹಲವು ರೀತಿಯ ಸೋಂಕುಗಳಿಂದ ಇದು ರಕ್ಷಣೆ ಮಾಡುತ್ತದೆ‌ ಇದೇ ರೀತಿಯಾಗಿ ನಾವು ಪಾರತೀ ದಿನ ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿಗೆ ಜೇನು ತುಪ್ಪ ಸೇರಿಸಿ ಕುಡಿಯುವುದರಿಂದ ಹಲವು ರೀತಿಯಲ್ಲಿ ನಮ್ಮ ದೇಹಕ್ಕೆ ಪೋಶಕಾಂಶಗಳನ್ನು ನೀಡಬಹುದು. ದಿನದ ಸುಸ್ತನ್ನು ನಿವಾರಿಸುತ್ತದೆ ಜೊತೆಗೆ ದೇಹದ ರೋಗ ನಿರೋಧಕ ಶಕ್ತಿಯನ್ನೂ ಸಹ ಹೆಚ್ಚಿಸುತ್ತದೇ. ಜೊತೆಗೆ ದೇಹದಲ್ಲಿರುವ ಕೊಬ್ಬನ್ನು ಕರಗಿಸಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡತ್ತೆ .

ದಿನದಲ್ಲಿ ನಾವು ಹೆಚ್ಚಿನ ವ್ಯಾಯಾಮ ಮಾಡ್ತಾ ಇದ್ದರೆ ಬೇಗ ಸುಸ್ತು ಆಗತ್ತೆ ಆಗ ಬಿಸಿ ನೀರಿಗೆ ಜೇನು ಬೆರೆಸಿ ಕುಡಿಯುವುದರಿಂದ ವ್ಯಾಯಾಮದಿಂದ ಆಗುವ ಸುಸ್ತನ್ನು ಬೇಗ ಕಡಿಮೆ ಮಾಡಿಕೊಳ್ಳಬಹುದು. ನೀರಿಗೆ ಜೇನು ಬೆರೆಸಿ ಕುಡಿಯುವುದರಿಂದ ಇದು ಗಂಟಲಿಗೆ ಸಂಬಂಧಿಸಿದ ಗಂಟಲು ಬೇನೆ, ಗಂಟಲು ಉರಿ ಮುಂತಾದ ಸಮಸ್ಯೆಗಳನ್ನೂ ದೂರ ಮಾಡುತ್ತದೆ. ಹಾಗೇ ಚರ್ಮಕ್ಕೆ ಕೂಡಾ ತುಂಬಾ ಒಳ್ಳೆಯದು. ಇದರಲ್ಲಿರುವ ಬ್ಯಾಕ್ಟೀರಿಯಾ ನಿವಾರಕಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳು ಚರ್ಮವನ್ನ ಮ್ರದುವಾಗಿ ಇಡತ್ತೆ ಮತ್ತು ಇತರೆ ಚರ್ಮ ರೋಗಗಳಿಂದಲೂ ಕಾಪಾಡುತ್ತವೆ. ಕೆಲವು ರಸರ್ಚ್ ಗಳ ಪ್ರಕಾರ ಜೇನುತುಪ್ಪ ನಮ್ಮ ದೇಹದ ರಕ್ತದಲ್ಲಿ ಇರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ. ಹಾಗೇ ಜೇನುತುಪ್ಪದಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗಳು ನಮ್ಮ ಹ್ರದಯಕ್ಕೆ ತೊಂದರೆ ಆಗದೇ ಇರುವ ಹಾಗೇ ನೋಡಿಕೊಳ್ಳುತ್ತವೆ‌ ದೇಹಕ್ಕೆ ಬೇಡವಾದ ವಿಷಕಾರಿ ಅಂಶಗಳನ್ನ ಹೊರ ಹಾಕಿ, ನಾವು ಚೈತನ್ಯಯುತವಾಗಿ ಇರುವಕದಕ್ಕೆ ಜೇನು ಸಹಕಾರಿ. ಹಾಗೇ ಇದರಲ್ಲಿರುವ ವಿಟಮಿನ್ ಗಳು ಮತ್ತು ಪೋಶಕಾಂಶಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತವೆ. ಹಾಗೇ ಜೇನಿನಲ್ಲಿ ಇರುವ ಅಂಶಗಳು ಜೀರ್ಣಾಂಗ ಕ್ರಿಯೆಗೆ ಪೂರಕವಾಗಿದ್ದು ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತೆ ಹಾಗೂ ಮಲಬಧ್ಧತೆಯನ್ನೂ ಹೋಗಲಾಡಿಸುತ್ತದೆ.

ಹೊಟ್ಟೆಯುಬ್ಬರ, ಹುಳಿ ತೇಗು ಇವುಗಳನ್ನೂ ಸಹ ನಿವಾರಿಸುತ್ತದೆ‌ . ಬಾಯಿಯ ದುರ್ವಾಸನೆಯನ್ನೂ ನಿವಾರಿಸುತ್ತದೆ‌ . ಬಾಯಿಯ ದುರ್ವಾಸನೆಗೆ ಉಗುರು ಬೆಚ್ಚಗಿನ ನೀರಿಗೆ ಜೇನು ತುಪ್ಪ ಮತ್ತು ನಿಂಬೇ ರಸ ಬೆರೆಸಿ ಕುಡಿದರೆ ದುರ್ವಾಸನೆ ಹೋಗುತ್ತದೆ. ಜೇನಿನಿಂದ ಇಷ್ಟೆಲ್ಲ ಲಾಭಗಳು ಇರುವಾಗ ಪ್ರತೀ ದಿನ ಒಂದು ಲೋಟ ನೀರಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿದರೆ ನಾವೂ ಅದರ ಲಾಭವನ್ನು ಪಡೆಯಬಹುದು.

Leave a Comment

error: Content is protected !!