
ನೀವು ಕಡಿಮೆ ನೀರು ಕುಡಿಯುತ್ತಿದ್ದರೆ ಏನಾಗುತ್ತೆ ತಿಳಿಯಿರಿ
ನಮ್ಮ ದೇಹಕ್ಕೆ ಪ್ರತಿದಿನ 8 ಲೋಟದಷ್ಟು ಶುದ್ಧ ನೀರಿನ ಅಗತ್ಯವಿದೆ ಎಂದು ಅನೇಕ ಸಂಶೋಧನೆಗಳು ಹೇಳುತ್ತವೆ.ಆದರೆ ಹೆಚ್ಚಿನವರು ಈ ಮಾತನ್ನು ಒಪ್ಪಿಕೊಳ್ಳುವುದಿಲ್ಲ. ತುಂಬಾ ಮೊಂಡುತನ ಜಾಸ್ತಿ. ಕೆಲವರ ನಂಬಿಕೆಯಂತೆ ಮರುಭೂಮಿಯ ಬಿಸಿಲಿನಲ್ಲಿ ಇರುವವರು ಮಾತ್ರ ಪದೇ ಪದೇ ನೀರು ಕುಡಿಯುವ ಅಗತ್ಯವಿರುತ್ತದೆ. ನಗರದಲ್ಲಿ ಇರುವ ನಮಗೆ ಮೂರು ಹೊತ್ತು ಊಟದ ಜೊತೆ ನೀರು ಸಾಕು ಅನ್ನಿಸುತ್ತೆ. ಪದೇ ಪದೇ ನೀರು ಕುಡಿದ್ರೆ ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕು ಅನ್ನೋದು ಒಂದು ಸಮಸ್ಯೆ. ಆದ್ರೂ ನಮ್ಮ ದೇಹಕ್ಕೆ ನಿಯಮಿತವಾಗಿ ನೀರಿನ ಸರಬರಾಜು ಆಗಲೇಬೇಕಾಗುತ್ತದೆ.ಹಾಗಾದ್ರೆ ಬೇಸಿಗೆಯಲ್ಲಿ ಕಡಿಮೆ ನೀರು ಕುಡಿಯೋದ್ರಿಂದ ಏನೇನೆಲ್ಲಾ ಆಗುತ್ತದೆ ಎಂಬುದನ್ನು ತಿಳಿಯೋಣ.
ನೀರಿನ ಕೊರತೆಯಿಂದ ಪ್ರತಿ ಜೀವ ಕೋಶಗಳ ಕಾರ್ಯಕ್ಷಮತೆ ಉಂಟಾಗುತ್ತದೆ. ಇದರ ಪರಿಣಾಮವಾಗಿ ಆಯಾಸ ಉಂಟಾಗುತ್ತದೆ.ಕುಸಿದು ಬೀಳುವ ಸಾಧ್ಯತೆ ಅಧಿಕವಾಗಿರುತ್ತದೆ.
ನೀರಿನ ಕೊರತೆಯಿಂದ ಅವಧಿಗೂ ಮುನ್ನ ತುಂಬಾ ವಯಸ್ಸಾದಂತೆ ಕಾಣುತ್ತೇವೆ.ತಲೆ ಮೇಲೆ ಹಾಗೂ ಗುಡ್ಡದ ಮೇಲೆ ಬಿಳಿ ಕೂದಲು ಬಂದ್ರೆ ಅದನ್ನು ಹೋಗಲಾಡಿಸಲು ತುಂಬಾ ಹರ ಸಾಹಸ ಪಡಬೇಕಾಗುತ್ತದೆ.ಅವರ ದೇಹ ಯೌವ್ವನ ವನ್ನು ಕಳೆದುಕೊಳ್ತಾ ಇದ್ದರೆ ಅದರ ಬಗ್ಗೆ ಕಾಳಜಿ ವಹಿಸಬಹುದು.
ದೇಹಕ್ಕೆ ನೀರಿನ ಅಭಾವ ದಿಂದ ಗ್ಯಾಸ್ ಸ್ಟ್ರೀಕ್ , ಕರುಳಿನ ಸಮಸ್ಯೆ , ಚರ್ಮದಲ್ಲಿ ತುರಿಕೆ, ಸಮಸ್ಯೆಗಳು ಉಂಟಾಗುತ್ತದೆ.ಹಾಗಾಗಿ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹದಲ್ಲಿ ನೀರಿನಾಂಶ ಹೆಚ್ಚಾಗುತ್ತದೆ.
ನಾವು ಪ್ರತಿದಿನ 4 ಲೀಟರ್ ನೀರನ್ನು ಕುಡಿಯಬೇಕು ಮತ್ತು ಊಟದ ಸಮಯದಲ್ಲಿ ನೀರು ಕುಡಿಯುವುದು ಜೊತೆಗೆ ದಿನಕ್ಕೆ ಮೂರು ಗಂಟೆಗೊಮ್ಮೆ ನೀರು ಕುಡಿಯುವುದರಿಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳೊದು ಉತ್ತಮ