ಕಿವಿ ನೋವು, ಕಿವಿ ಸೋರುವ ಸಮಸ್ಯೆ ಮುಂತಾದ ವ್ಯಾಧಿಗಳಿಗೆ ಪರಿಹಾರ

ಕಣ್ಣು ಎಷ್ಟು ಮುಖ್ಯವಾದ ಅಂಗವೋ ಕಿವಿಯು ಸಹ ಅಷ್ಟೇ ಮುಖ್ಯವಾದ ಅಂಗವಾಗಿದೆ. ಕಿವಿ ನೋವು, ಕಿವಿ ಸೋರುವಿಕೆ, ಕಿವಿಯಲ್ಲಿ ಶಬ್ಧ ಬರುವುದು, ಕಿವಿ ಸರಿಯಾಗಿ ಕೇಳದೆ ಇರುವುದು ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳಿಗೆ ಕಾರಣ ಹಾಗೂ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಯೋಣ.

ಕಿವಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಾದ ಕಿವಿ ನೋವು, ಕಿವಿಯಲ್ಲಿ ಶಬ್ಧ ಬರುವುದು, ಕಿವಿ ಸೋರುವಿಕೆ ಸಮಸ್ಯೆಗಳಿಗೆ ಕಾರಣ ಕಿವಿಯ ಕುಗ್ಗಿಯನ್ನು ತೆಗೆಯದೆ ಇರುವುದು. ಸಾಮಾನ್ಯವಾಗಿ ಕಿವಿಯ ಕುಗ್ಗಿಯನ್ನು 3-6 ತಿಂಗಳಿಗೊಮ್ಮೆ ತೆಗೆಯುತ್ತಾರೆ ಆದರೆ ಕಿವಿಯ ಕುಗ್ಗಿಯನ್ನು ಪ್ರತಿದಿನ ಸ್ನಾನವಾದ ನಂತರ ಕಿವಿಯ ಕುಗ್ಗಿ ತೆಗೆಯಲು ಕಡ್ಡಿ ಸಿಗುತ್ತದೆ ಅದರಿಂದ ಎರಡು ಕಿವಿಯ ಕುಗ್ಗಿ ತೆಗೆದು ಹತ್ತಿಯ ಕಡ್ಡಿಯಿಂದ ಕ್ಲೀನ್ ಮಾಡಬೇಕು. ಹಲವು ಸಮಸ್ಯೆಗಳಿಗೆ ಕಾರಣವಾದ ಮಲಬದ್ಧತೆಯಿಂದ ಕಿವಿಯ ಸಮಸ್ಯೆಗಳು ಬರುತ್ತದೆ ಆದ್ದರಿಂದ ಹೊಟ್ಟೆಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಡಾಕ್ಟರ ಬಳಿ ಹೋಗುವುದರಿಂದ ಶಾಶ್ವತ ಪರಿಹಾರ ಸಿಗುವುದಿಲ್ಲ. ಯೋಗ, ವ್ಯಾಯಾಮ, ಧ್ಯಾನ ಮಾಡುವುದರಿಂದ ಮಲಬದ್ಧತೆಯು ಹಂತ ಹಂತವಾಗಿ ಕಡಿಮೆಯಾಗುತ್ತದೆ.

ಯೋಗವನ ಬೆಟ್ಟ ಬೆಂಗಳೂರು, ಕುಣಿಗಲ್, ಚಿತ್ರದುರ್ಗದಲ್ಲಿ ಇದೆ ಅಲ್ಲಿಗೆ ಭೇಟಿ ಮಾಡಿ ಚಿಕಿತ್ಸೆ ಪಡೆದು ಬಹಳಷ್ಟು ಜನರು ಗುಣಮುಖರಾಗಿದ್ದಾರೆ. ಕಿವಿಯ ಸಮಸ್ಯೆ ಅಲ್ಲದೇ ಹಲವು ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಸಿಗುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಿಕೊಂಡರೆ ಕಿವಿಯ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. ಪ್ರತಿಯೊಬ್ಬರು ಕಿವಿಯನ್ನು ಸ್ವಚ್ಛವಾಗಿಟ್ಟು ಕೊಳ್ಳುವುದರೊಂದಿಗೆ ಹೊಟ್ಟೆಯನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು. ಕಿವಿ ನೋವು ಇತರೆ ಸಮಸ್ಯೆಗಳು ಇದ್ದಾಗ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಮಕ್ಕಳಿಗೆ ಈ ಸಮಸ್ಯೆ ಬಂದರೆ ಅವರನ್ನು ಸಮಾಧಾನ ಮಾಡುವುದು ಬಹಳ ಕಷ್ಟವಾಗಿದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಕಿವಿ ನೋವಿಗೆ ಪರಿಹಾರ ಕಂಡುಕೊಳ್ಳಿ.

Leave A Reply

Your email address will not be published.

error: Content is protected !!