ದೇಹಕ್ಕೆ ಬಲ ನೀಡುವ ಜೊತೆಗೆ ಹತ್ತಾರು ಸಮಸ್ಯೆಗಳ ನಿವಾರಕ ಬಾದಾಮಿ

ಡ್ರೈ ಪುಟ್ಸ್ ಗಳಲ್ಲಿ ಒಂದಾಗಿರುವಂತ ಬಾದಾಮಿ ಅರೋಗ್ಯ ಕಣಜವೆಂದು ಕರೆಸಿಕೊಳ್ಳುತ್ತದೆ, ಬಾದಾಮಿಯಲ್ಲಿರುವಂತ ಈ ಆರೋಗ್ಯಕಾರಿ ಗುಣಗಳ ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತೇ ಇಲ್ಲ, ಹೌದು ಬಾದಾಮಿಯಲಿ ಅಡಗಿದೆ ಆರೋಗ್ಯದ ಹತ್ತಾರು ಗುಣಗಳು. ಬಾದಾಮಿ ಬೀಜ ಹೇಗೆಲ್ಲ ಉಪಯೋಗಕಾರಿ ಅನ್ನೋದನ್ನ ಈ ಮೂಲಕ ತಿಳಿಯೋಣ ನಿಮಗೆ ಈ ಆರೋಗ್ಯದ ವಿಚಾರ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

ಪ್ರತಿದಿನ ನಾಲ್ಕಾರು ಬಾದಾಮಿ ಬೀಜಗಳನ್ನು ತಿನ್ನುತ್ತಿದ್ದರೆ ದೇಹಕ್ಕೆ ಎನರ್ಜಿ ದೊರೆಯುತ್ತದೆ ಹಾಗೂ ದೇಹಕ್ಕೆ ರೋಗ ನಿರೋಧಕ ಶಕ್ತಿ ಸಿಗುತ್ತದೆ. ಇನ್ನು ಬಾದಾಮಿಯಲ್ಲಿ ಯಾವೆಲ್ಲ ಪ್ರಯೋಜನವನ್ನು ಪಡೆದುಕೊಳ್ಳಬಹುದು ಅನ್ನೋದನ್ನ ಈ ಮೂಲಕ ತಿಳಿಯುವುದಾದರೆ, ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನಸಿ ಬೆಳಗ್ಗೆ ಸಿಪ್ಪೆ ತೆಗೆದು ಅರೆದು ಹಾಲು ಸಕ್ಕರೆ ಬೆರಸಿ ನಿತ್ಯವೂ ಕುಡಿದರೆ ದೇಹದ ಬಲ ಮತ್ತು ರಕ್ತ ವೃದ್ಧಿಯಾಗುತ್ತದೆ.

ಇನ್ನು ಸಾಮಾನ್ಯವಾಗಿ ಕೆಲವರಿಗೆ ಕಾಡುವಂತ ಕಣ್ಣಿನ ಸುತ್ತಲೂ ಕಪ್ಪು ವರ್ತುಲ ಸಮಸ್ಯೆಗೆ ಬಾದಾಮಿ ಸಹಕಾರಿ, ಬಾದಾಮಿಯನ್ನು ಹಾಲಿನಲ್ಲಿ ತೇದು ಹಚ್ಚಿರಿ, ಕಪ್ಪು ಬಣ್ಣ ಕ್ರಮೇಣ ಕಡಿಮೆಯಾಗುತ್ತದೆ ಬರುತ್ತದೆ. ಅಷ್ಟೇ ಅಲ್ದೆ ಬಾದಾಮಿ ಎಣ್ಣೆಯನ್ನು ಮುಖಕ್ಕೆ ಮಾಲೀಶು ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ತಲೆನೋವು ರಕ್ತದೊತ್ತಡ ಕಡಿಮೆಯಾಗಲು ರಾತ್ರಿ ಮೂರರಿಂದ ಆರು ಹನಿಗಳಷ್ಟು ಬಾದಾಮಿ ತೈಲವನ್ನು ನಿತ್ಯವೂ ತಲೆಗೆ ಹಚ್ಚಿದರೆ ತಲೆನೋವು ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ. ಬಾದಾಮಿ ತೈಲವನ್ನು ತುಟಿಗೆ ಹಚ್ಚಿದರೆ ತುಟಿ ಒಡೆಯುವುದಿಲ್ಲ. ಬಾದಾಮಿ ತೈಲ ತಲೆಗೆ ಒಳ್ಳೆಯದು ಕೂದಲನ್ನು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ ಹಾಗೂ ತಲೆಹೊಟ್ಟು ನಿವಾರಿಸುತ್ತದೆ.

ಇನ್ನು ಬಾದಾಮಿಯನ್ನು ನಿತ್ಯ ಸೇವಿಸುವುದರಿಂದ ಪುರುಷರಲ್ಲಿ ಪಲವತ್ತತೆ ಹೆಚ್ಚುತ್ತದೆ, ನರವ್ಯೂವಕ್ಕೆ ಬಾದಾಮಿ ಸೇವನೆ ಟಾನಿಕ್ ನಂತೆ ಕೆಲಸ ಮಾಡುತ್ತದೆ. ಬಾದಾಮಿಯಲ್ಲಿರುವ ಸಹಜ ಆಂಟಿ ಆಕ್ಸಿಡೆಂಟ್ ಗುಣಗಳು ಕ್ಯಾನ್ಸರ್ ಮಧುಮೇಹ, ಶ್ವಾಸಕೋಶದ ಕಾಯಿಲೆ ಮುಂತಾ ಸಮಸ್ಯೆಗಳಿಗೆ ಕಡಿವಾಣ ಹಾಕುತ್ತದೆ.

Leave a Comment

error: Content is protected !!