ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ತಿನ್ನೋದ್ರಿಂದ ಶರೀರಕ್ಕೆ ಸಿಗುವ ಲಾಭ

ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಹತ್ತಾರು ಆರೋಗ್ಯಕರ ಲಾಭಗಳು ದೊರೆಯುತ್ತವೆ. ಕಿಸ್ಮಿಸ್ ಎಂದು ಕರೆಯಲ್ಪಡುವ ಒಣದ್ರಾಕ್ಷಿ ಹಲವು ಪೋಷಕಾಂಶಗಳು ಆಗರವೇ ಆಗಿದೆ. ಹಣಬಲ ಗಳ ಪಟ್ಟಿಯಲ್ಲಿ ಒಣದ್ರಾಕ್ಷಿಯ ಒಂದು ಸೇರಿಕೊಂಡಿದೆ. ಬಾದಾಮಿ ಆಕ್ರೋಡ್ ಮುಂತಾದ ದುಬಾರಿ ಫಲಗಳ ಎದಿರು ಈ ಒಣದ್ರಾಕ್ಷಿ ಸ್ವಲ್ಪ ಕಡಿಮೆ ಬೆಲೆಯಲ್ಲಿ ಸಿಗುವ ಕಾರಣ ಹೆಚ್ಚಿನ ಜನರು ಒಣದ್ರಾಕ್ಷಿಯನ್ನು ಅಷ್ಟೊಂದು ಮಹತ್ವ ಎಂದು ಪರಿಗಣಿಸುವುದಿಲ್ಲ ಹಾಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಒಣದ್ರಾಕ್ಷಿ ಸೇವನೆಯಿಂದ ಎಷ್ಟೊಂದು ಆರೋಗ್ಯಕರ ಲಾಭಗಳಿವೆ ಎನ್ನುವುದರ ಬಗ್ಗೆ ಒಮ್ಮೆ ತಿಳಿದುಕೊಂಡರೆ ಪ್ರತಿನಿತ್ಯ ಒಣದ್ರಾಕ್ಷಿಯನ್ನು ಸೇವಿಸುಲು ನಾವೇ ಅಭ್ಯಾಸ ಮಾಡಿಕೊಳ್ಳುತ್ತೇವೆ.

ಆದರೆ ಈ ಒಣದ್ರಾಕ್ಷಿಯನ್ನು ಹೀಗೆ ತಿನ್ನುವುದರಿಂದ ಇದರಲ್ಲಿ ಸಾಂದ್ರೀಕೃತ ವಾಗಿರುವಂತಹ ಪೋಷಕಾಂಶಗಳು ನಮಗೆ ಲಭ್ಯವಾಗುವುದಿಲ್ಲ. ಬದಲಿಗೆಒಣದ್ರಾಕ್ಷಿಯನ್ನು ಸ್ವಲ್ಪ ಕಾಲ ನೀರಿನಲ್ಲಿ ನೆನೆಸಿ ರುವುದರ ಮೂಲಕ ಅದರಲ್ಲಿರುವ ಪೋಷಕಾಂಶಗಳು ನಾವು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳಬಹುದು. ಪ್ರತಿನಿತ್ಯ ಒಣದ್ರಾಕ್ಷಿಯನ್ನು ಸೇವಿಸಲು ಪ್ರತಿದಿನ ರಾತ್ರಿ ಒಂದು ಲೋಟ ತಣ್ಣೀರಿನಲ್ಲಿ ಎಂಟರಿಂದ ಹತ್ತು ಒಣದ್ರಾಕ್ಷಿಯನ್ನು ಹಾಕಿ ನೆನೆಸಿಟ್ಟು ಮಾರನೆ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ದ್ರಾಕ್ಷಿಯನ್ನು ತಿಂದು ಹಾಗೂ ಅದರ ಜೊತೆಗೆ ಅದರ ನೀರನ್ನು ಕುಡಿಯುವುದರಿಂದ ಅತ್ಯುತ್ತಮ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹೀಗೆ ನಾವು ಪ್ರತಿದಿನ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ತೆಗೆದುಕೊಳ್ಳುವುದರಿಂದ ಹಲವಾರು ಪ್ರಯೋಜನಗಳಿವೆ ಪ್ರಯೋಜನಗಳು ಈ ಕೆಳಗಿನಂತಿವೆ. ಇದರಿಂದ ಯಕೃತ ಅಂದರೆ ನಮ್ಮ ಲಿವರ್ ನ ಆರೋಗ್ಯಕ್ಕೆ ಒಣದ್ರಾಕ್ಷಿಯನ್ನು ಈ ರೀತಿಯಾಗಿ ಸೇರಿಸುವುದು ತುಂಬಾ ಒಳ್ಳೆಯದು. ಅಷ್ಟೇ ಅಲ್ಲದೆ ದ್ರಾಕ್ಷಿ ಮತ್ತು ನೀರು ಲಿವರ್ ನ ಆರೋಗ್ಯವನ್ನು ಬೆಳೆಸುತ್ತದೆ. ನೆನೆಸಿಟ್ಟ ಒಣದ್ರಾಕ್ಷಿ ಹಾಗೂ ಅದರ ನೀರನ್ನು ಸೇವಿಸುವುದರಿಂದ ಜೀರ್ಣ ಶಕ್ತಿಯನ್ನು ಉತ್ತಮಗೊಳಿಸಿ ಕೊಳ್ಳಬಹುದು. ಒಣದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ ಇರುವುದರಿಂದ ಪೋಷಕಾಂಶಗಳು ಈ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳುವಂತೆ ಮಾಡುವುದರ ಮೂಲಕ ಮೂಳೆಗಳು ಸಹ ಆರೋಗ್ಯವಾಗಿರುವಂತೆ ಮಾಡುತ್ತದೆ. ಇದರಿಂದ ಮೂಳೆಗಳು ಆರೋಗ್ಯಕರ ಹಾಗೂ ಸದೃಢವಾಗುತ್ತವೆ. ಒಣದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರಿನ ಅಂಶವಿರುವುದರಿಂದ ಇದು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ನಾಶಮಾಡಿ ಉತ್ತಮ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚಿಸಿ ಹೃದಯ ಸಂಬಂಧಿತ ಕಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ.

Leave A Reply

Your email address will not be published.

error: Content is protected !!