ಕಣ್ಣಿನ ದೃಷ್ಟಿ ಹೆಚ್ಚಿಸುವ ಜೊತೆಗೆ ಹತ್ತಾರು ಲಾಭಗಳನ್ನು ನೀಡುವ ಮೀನು

ಪ್ರಕೃತಿ ನಮಗೆ ನೀಡಿರುವ ಆಹಾರಗಳಲ್ಲಿ ಮೀನು ಸಹ ಒಂದಾಗಿದೆ.ಮೀನು ಎಲ್ಲರಿಗೂ ಪ್ರಿಯವಾದ ಆಹಾರ.ಅದರಲ್ಲೂ ಕರಾವಳಿಗರಿಗೆ ಮೀನು ಎಂದರೆ ಪಂಚ ಪ್ರಾಣ.ಮೀನು ಆರೋಗ್ಯಕರ ಆಹಾರ ಅಂತ ನಮಗೆಲ್ಲಾ ಗೋತ್ತೆ ಇದೆ.ಇದರಲ್ಲಿನ ಹಲವಾರು ಪೋಷಕಾಂಶಗಳು ದೇಹಕ್ಕೆ ಒಳ್ಳೆಯದನ್ನ ಮಾಡುತ್ತದೆ.

ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಡಿ ಕ್ಯಾಲ್ಸಿಯಂ, ಪಾಸ್ ಪೋರಸ್ ಅಂಶಗಳು ಹೇರಳ ಸಿಗುತ್ತವೆ, ಅಲ್ಲದೆ ಮ್ಯಾಗ್ನಿಷಿಯಂ, ಆಯೋಡಿನ್ ಮತ್ತು ಪೊಟಾಷಿಯಂ ನಂತಹ ಖನಿಜಾಂಶಗಳಿರುತ್ತವೆ. ಇದರಲ್ಲಿ ಒಮೇಗಾ ತ್ರೀ ಆಮ್ಲವು ಅಧಿಕವಾಗಿರುತ್ತದೆ. ಇದೆಲ್ಲವು ನಮ್ಮ ದೇಹದ ತೂಕವನ್ನು ಸಮತೋಲನದಲ್ಲಿರಿಸುತ್ತದೆ.

ಯಕೃತ್, ಮಿದುಳು ಸರಿಯಾಗಿ ಕಾರ್ಯನಿರ್ವಹಿಸಲು ಮೀನುಗಳು ಸಹಕಾರಿ. ಸರಿಯಾರಿ ನಿದ್ರೆ ಮಾಡಲು ಮೀನುಗಳ ಸೇವನೆ ಉಪಯುಕ್ತ.ಅದರಲ್ಲೂ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು. ಹಾಗಾದರೆ ಮೀನುಗಳಿಂದಾಗುವ ಮತ್ತಷ್ಟು ಪ್ರಯೋಜನಗಳೇನು ಇಲ್ಲಿದೆ ಓದಿ.

ಹೃದಯ ಸಂಬಂಧಿ ಕಾಯಿಲೆ ನಿವಾರಣೆ: ಮೀನುಗಳನ್ನ ಸೇವಿಸುವುದರಿಂದ ಹೃದಯದಲ್ಲಾಗುವ ಅಪಾಯಗಳನ್ನು ತಡೆಯಬಹುದು.ಅಲ್ಲದೆ ಹೃದಯವನ್ನ ರಕ್ಷಿಸುತ್ತದೆ. ಅಷ್ಟೇ ಅಲ್ಲದೆ ಅಲ್ಪೆಮಾರ್ ಕಾಯಿಲೆಯನ್ನು ತಗ್ಗಿಸುತ್ತೆ ಮಿದುಳಿನ ಕ್ರಿಯೆಗಳು ಸರಾಗವಾಗಿ ಸಾಗಲು ಮೀನು ಒಳ್ಳೆಯ ಆಹಾರವಾಗಿದೆ. ಪ್ರತಿದಿನ ಮೀನು ತಿನ್ನುವುದರಿಂದ ಅಲ್ಪೆಮಾರ್ ಕಾಯಿಲೆ ವಾಸಿಯಾಗುತ್ತದೆ.

ಖಿನ್ನತೆಯಿಂದ ಹೊರಬರಲು ಸಹಾಯಕ: ಮಾನಸಿಕ ಖಿನ್ನತೆಯಿರುವವರು ಮೀನನನ್ನು ತಿದ್ದರೆ ಮಾನಸಿಕ ಸ್ಥಿಮಿತ ಸಕಾರಾತ್ಮಕವಾಗುತ್ತದೆ,ಅಲ್ಲದೆ ಇದರ ಎಣ್ಣೆಯು ಬಳಸುವುದರಿಂದ ಮನಸ್ಸು ಬಲಗೊಳ್ಳುತ್ತದೆ.

ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ: ಮೀನಿನಲ್ಲಿರುವ ಒಮೇಗಾ ತ್ರಿ ಆಮ್ಲವು ಕಣ್ಣಿನ ದೃಷ್ಟಿಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಯಾಕೆಂದರೆ ಮಿದುಳು ಮತ್ತು ಕಣ್ಣುಗಳು ಒಮೇಗಾ ತ್ರಿ ಆಮ್ಲವನ್ನು ಅವಲಂಭಿಸಿರುತ್ತದೆ.

ಸರಿಯಾದ ನಿದ್ರೆಗೆ ಸಹಕಾರಿ: ನಿದ್ರೆಯಾಗಿ ಬಾರದಿದ್ರೆ ಮೀನಿನ ನಿಯಮಿತ ಸೇವನೆ ಇದಕ್ಕೆ ಉತ್ತಮ ಔಷಧಿ. ಮೀನಿನಲ್ಲಿರುವ ವಿಟಮಿನ್ ಡಿ ನಿದ್ರಾ ಹೀನತೆಯ ಸಮಸ್ಯೆಯನ್ನ ದೂರ ಮಾಡುತ್ತದೆ. ಅಷ್ಟೇ ಅಲ್ಲದೆ ಸಂಧಿವಾತ ಸಮಸ್ಯೆ ಕಡಿಮೆ ಮಾಡುತ್ತದೆ ಸಂಧಿವಾತದಿಂದ ಬಳಲುವವರು ಮೀನಿನ ಸೇವನೆ ಮಾಡಿ ಇದರಿಂದ ನೋವು ಹಾಗೂ ಉರಿಊತ ಕಡಿಮೆ ಮಾಡುತ್ತದೆ.

ಕೋಲೆಸ್ಟ್ರಾಲ್ ನಿಯಂತ್ರಣ: ದೇಹದಲ್ಲಿನ ಕೊಬ್ಬಿನಾಂಶವನ್ನು ನಿಯಂತ್ರಣದಲ್ಲಿಡಲು ಮೀನಿನ ಸೇವನೆ ತುಂಬಾ ಒಳ್ಳೆಯದು.ಅಲ್ಲದೆ ಕೆಟ್ಟ ಕೋಲೆಸ್ಟ್ರಾಲ್ ಅನ್ನು ತಗ್ಗಿಸುತ್ತದೆ. ಹಾಗೂ ಮಧುಮೇಹದ ನಿಯಂತ್ರಣ ಮಧುಮೇಹದ ನಿಯಂತ್ರಣಕ್ಕೆ ಮೀನಿನ ಸೇವನೆ ಬಲೂ ಪ್ರಯೋಜನಕಾರಿ. ಮೀನಿನಲ್ಲಿರುವ ವಿಟಮಿನ್ ಡಿ ನಮ್ಮ ದೇಹ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಚಯಾಪಚಯ ಕ್ರಿಯೆ ಸರಿಯಾಗಿ ಆಗುತ್ತದೆ. ಈ ರೀತಿ ಮೀನಿನ ಸೇವನೆಯಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆಯಬಹುದು

Leave a Comment

error: Content is protected !!