ಯೌವನ ವೃದ್ಧಿಸುವ ನೆನೆಸಿದ ಕಾಳುಗಳಿವು

ವಯಸ್ಸು ಹೆಚ್ಚಾದಂತೆ ಆಯಸ್ಸು ಕಡಿಮೆ ಅನ್ನು ಮಾತಿದೆ ಆದ್ರೆ ಮುಪ್ಪಾದರೂ ಸೌಂದರ್ಯದ ಮೇಲಿನ ಮೋಹ ಮಾತ್ರ ಕಡಿಮೆ ಆಗೋದಿಲ್ಲ. ಯಂಗ್ ಆಗಿ ಕಾಣಬೇಕು ಎನ್ನುವ ಹಂಬಲದಿಂದ ಅನೇಕ ಸೌಂದರ್ಯ ವರ್ದಕಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಚರ್ಮಕ್ಕೆ ಹಾನಿಯೇ ಹೊರತು ಯೌವನ ಪಡೆಯಲಾಗದು.

ಹಿಂದಿನ ಕಾಲದ ನಮ್ಮ ಪೂರ್ವಜರು ನೈಸರ್ಗಿಕ ಪದಾರ್ಥಗಳ ಸೇವನೆಯಿಂದ ಎಷ್ಟೊಂದು ಉತ್ಸಾಹಕತೆಯಿಂದ ಗಟ್ಟಿಮುಟ್ಟಾಗಿರುತ್ತಿದ್ದರು ಆದರೆ ಇಂದಿನ ಯುವ ತಲೆಮಾರು ಬೆನ್ನುನೋವು, ತಲೆನೋವು, ಮಂಡಿನೋವು, ಆಯಾಸದಂತಹ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಇದಕ್ಕೆಲ್ಲ ಕಾರಣ ರೋಗನಿರೋಧಕ ಶಕ್ತಿಯ ಕೊರತೆ. ಆದರೆ ಇದಕ್ಕೆ ಚಿಂತಿಸುವ ಅಗತ್ಯವಿಲ್ಲ ಮನೆಯಲ್ಲಿನ ಈ ಕೆಳಗಿನ ಐದು ಪದಾರ್ಥಗಳನ್ನು ನೆನೆಸಿ ತಿನ್ನಿರಿ.

ಅಗಸೆ ಬೀಜ: ಅಗಸೆ ಬೀಜವು ಮಾನಸಿಕ ಒತ್ತಡ ಹಾಗೂ ಲೈಂಗಿಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಮುಖ್ಯವಾಗಿ ಇದರಲ್ಲಿರುವ ಒಮೇಗ ತ್ರೀ ಪ್ಲಾಟಿ ಅಂಶವು ಮಧುಮೇಹದಂತಹ ಸಮಸ್ಯೆಗಳಿಗೆ ರಾಮಬಾಣ. ಅಷ್ಟೇ ಅಲ್ಲದೆ ಕುದಲು ಉದುರುವಿಕೆ, ಮಹಿಳೆಯರ ಋತು ಚಕ್ರದ ವೇಳೆ ಶರೀರದಲ್ರಿ ರೋಗ ನಿರೋಧಕ ಶಕ್ತಿಯಾಗಿ ಅಗಸೆ ಬೀಜ ಕೆಲಸಮಾಡುತ್ತದೆ.

ಒಣದ್ರಾಕ್ಷಿ: ಒಣ ದ್ರಾಕ್ಷಿ ಯಲ್ಲಿ ಐರನ್ ಹಾಗೂ ಮೇಗ್ನಿಷಿಯಂ , ಪೋಟಷಿಯಂ ಹೆಚ್ಚಾಗಿರುವುದರಿಂದ ಇದನ್ನ ನೀರಲ್ಲಿ ನೆನೆಸಿ ತಿನ್ನದರೆ ಆಯೋಗ್ಯಕ್ಕೆ ತುಂಬಾ ಒಳ್ಳೆಯದು. ಒಣ ದ್ರಾಕ್ಷಿಯಲ್ಲಿ ಅತ್ಯಧಿಕ ವಾಗಿ ಕ್ಯಾಲಿಷಿಯಂ ಅಂಶವಿದ್ದು, ಶರೀರದಲ್ಲಿ ಹೆಚ್ಚು ಹ್ಯುಮ್ಯನಿಟಿ ಪವರ್ ಉತ್ಪತ್ತಿಸುತ್ತದೆ.

ಗಸೆಗಸೆ: ಗಸೆ ಗಸೆಯಲ್ಲಿರುವ ಫೈಬರ್ ಅಂಶ ವು ಮಲಬದ್ಧತೆ, ಕಿಡ್ನಿಯಲ್ಲಿ ಕಲ್ಲಗಳು ಉತ್ಪತ್ತಿಯಾಗದಂತೆ ತಡೆಗಟ್ಟುತ್ತದೆ. ಹಾಗೇ ಜಿರ್ಣಕ್ರಿಯೆ ಸರಾಗವಾಗಿ ನಡೆಯುವಂತೆ ಮಾಡುತ್ತೆ. ಮುಖ್ಯವಾಗಿ ನಿದ್ರಾ ಹೀನತೆ ಸಮಸ್ಯೆಯಿರುವವರು ಗಸೆ ಗಸೆ ಸೇವನೆಯಿಂದ ಆರಾಮಾಗಿ ನಿದ್ರೆ ಮಾಡಬಹುದು.

ಮೆಂತೆಕಾಳು: ಮೆಂತೆ ಕಾಳಿನಿಂದ ಎಷ್ಟೋ ಆರೋಗ್ಯ ಪ್ರಯೋಜನಗಳಿವೆ. ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಮೆಂತೆ ಕಾಳು ಸೇವನೆ ಹೆಚ್ಚು ಸಹಾಯಕ. ಆಂಟಿ ಏಜಿನ್ ತರ ಕೆಲಸ ಮಾಡೋ ಮೆಂತೆ ಕಾಳು ಮುಖದಲ್ಲಿರುವ ಸುಕ್ಕನ್ನು ದೂರಮಾಡಿ ಅಂದವಾಗಿ ಕಾಣುವಂತೆ ಮಾಡುತ್ತದೆ.ಅಲ್ಲದೆ ಮುಖದಲ್ಲಿರುವ ಮೊಡವೆಯನ್ನ ಹೋಗಲಾಡಿಸಿ ಹೊಸ ಕಾಂತಿಯನ್ನ ನೀಡುತ್ತದೆ.

ಕಡಲೆಕಾಳು: ಕಡಲೆಕಾಳಿನ ಸೇವನೆಯಿಂದ ಶರೀರದಲ್ಲಿನ ಕೆಟ್ಟ ಕೋಲೆಸ್ಟ್ರಾಲ್ ನಿವಾರಣೆಯಾಗುತ್ತದೆ.ಇದಲ್ಲದೆ ಮೂಳೆಯನ್ನು ಕಟ್ಟಿಗೊಳಿಸಿ ದೇಹದ ಮಾಂಸಖಂಡದಲ್ಲಿನ ನೋವನ್ನು ಕ್ರಮೇಣವಾಗಿ ಕಡಿಮೆಮಾಡುತ್ತದೆ.

ಈ ಮೇಲಿನ ಅಗಸೆ ಬೀಜ, ಒಣದ್ರಾಕ್ಷಿ, ಗಸೆಗಸೆ, ಮೆಂತೆಕಾಳು, ಕಡಲೆಕಾಳನ್ನು, ಒಂದೊಂದು ಚಮಚದಂತೆ ನೀರಿನಲ್ಲಿ ಹಾಕಿ ನೆನಸಿಟ್ಟು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಪ್ರತಿನಿತ್ಯ ಸೇವಿದರೆ ಉತ್ತಮ ರೀತಿಯಾದ ಆರೋಗ್ಯಕರ ಪ್ರಯೋಜಗಳನ್ನು ಪಡೆಯಬಹುದು.

Leave A Reply

Your email address will not be published.

error: Content is protected !!