ಸಚಿವ ಸುರೇಶ್ ಕುಮಾರ್ ಅವರು ಪರೀಕ್ಷೆಯ ಬಗ್ಗೆ ಶಾಲೆಗೆ ಭೇಟಿ ನೀಡಿದಾಗ ಬಾಲಕಿ ಮಾರ್ಚ್ ನಲ್ಲಿ ಪರೀಕ್ಷೆ ಬೇಡ ಸರ್ ಅಂದಿದ್ದು ಯಾಕೆ ನೋಡಿ

ಕೊರೋನ ವೈರಸ್ ಕಾರಣದಿಂದ ಶಾಲೆಗಳಲ್ಲಿ ಪಾಠ ನಡೆಯದೇ ಶಾಲೆಗಳು ಖಾಲಿ ಖಾಲಿಯಾಗಿತ್ತು ಇದೀಗ ಮಕ್ಕಳು ಶಾಲೆಯತ್ತ ತೆರಳಿದ್ದಾರೆ ಆದರೆ ಪರೀಕ್ಷೆಗಳನ್ನು ನಡೆಸುವ ಕುರಿತು ಶಿಕ್ಷಣ ಸಚಿವರು ಗೊಂದಲದಲ್ಲಿದ್ದಾರೆ. ಸಚಿವ ಸುರೇಶ್ ಕುಮಾರ್ ಅವರು ಪರೀಕ್ಷೆಯ ಬಗ್ಗೆ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಅದರ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಕೊರೋನ ವೈರಸ್ ಕಾರಣದಿಂದ ಶಾಲೆ ನಡೆಯದೇ ರಜೆ ಘೋಷಿಸಲಾಗಿತ್ತು ಇದೀಗ ಮತ್ತೆ ಶಾಲೆಗಳನ್ನು ತೆರೆಯಲಾಗಿದ್ದು ಮಕ್ಕಳು ಸೋಷಿಯಲ್ ಡಿಸ್ಟೆನ್ಸ್, ಮಾಸ್ಕ್, ಸ್ಯಾನಿಟೈಸರ್ ಬಳಸುವಂತೆ ಹೇಳಲಾಗಿದೆ ಅಲ್ಲದೆ ಶಾಲೆಯಲ್ಲಿ ಒಂದು ಕ್ಲಾಸ್ ರೂಮಿನಲ್ಲಿ ದೂರ ದೂರ ಬೆಂಚ್ ವ್ಯವಸ್ಥೆ ಮಾಡಿ ಕಡಿಮೆ ವಿದ್ಯಾರ್ಥಿಗಳು ಕುಳಿತುಕೊಳ್ಳುವಂತೆ ನೋಡಿಕೊಳ್ಳಲಾಗಿದೆ. ನಮ್ಮ ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಅವರು ಭೇಟಿ ಮಾಡಿದ ಶಾಲೆಯಲ್ಲಿ ಒಂದು ಕ್ಲಾಸ್ ರೂಮ್ ನಲ್ಲಿ 15 ವಿದ್ಯಾರ್ಥಿಗಳು ಕುಳಿತುಕೊಂಡಿದ್ದರು. ಅವರು ಮಕ್ಕಳ ಆರೋಗ್ಯವನ್ನು ವಿಚಾರಿಸಿದರು ಮತ್ತು ವಿದ್ಯಾರ್ಥಿಗಳಿಗೆ ಮಾರ್ಚ್ ತಿಂಗಳಿನಲ್ಲಿ ಪರೀಕ್ಷೆ ನಡೆಸಿದರೆ ಸಮಸ್ಯೆ ಆಗಲಿದೆಯೇ ಪರೀಕ್ಷೆ ಬರೆಯಲು ತಯಾರಿದ್ದೀರಾ ಎಂದು ವಿದ್ಯಾರ್ಥಿಗಳಿಗೆ ಕೇಳಿದರು. ಕೆಲವು ವಿದ್ಯಾರ್ಥಿಗಳು ಮಾರ್ಚ್ ತಿಂಗಳಿನಲ್ಲಿ ಪರೀಕ್ಷೆ ಬರೆಯಲು ತಯಾರಿದ್ದೇವೆ ಎಂದು ಉತ್ತರಿಸಿದರು. ಕೆಲವು ವಿದ್ಯಾರ್ಥಿಗಳು ಮಾರ್ಚ್ ತಿಂಗಳಿನಲ್ಲಿ ಪರೀಕ್ಷೆ ಬರೆಯಲು ಸಿದ್ಧರಿಲ್ಲ ಎಂದು ಹೇಳಿದರು ಅದಕ್ಕೆ ಸುರೇಶ್ ಕುಮಾರ್ ಅವರು ಎಷ್ಟು ಸಮಯ ಓದಲು ಬೇಕು ಎಂದು ಕೇಳಿದರು. ಜೊತೆಗೆ ಈ ವರ್ಷ ಪರೀಕ್ಷೆ ಬೇಕಾ ಬೇಡವಾ ಎಂದು ಕೇಳಿದಾಗ ವಿದ್ಯಾರ್ಥಿಗಳು ಪರೀಕ್ಷೆ ಬೇಕು ಜೂನ್ ತಿಂಗಳಿನಲ್ಲಿ ಪರೀಕ್ಷೆ ಇಟ್ಟರೆ ಅನುಕೂಲವಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಸುರೇಶ್ ಕುಮಾರ್ ಅವರ ಬಳಿ ಹೇಳಿಕೊಂಡರು. ಸರ್ಕಾರಿ ಶಾಲೆಗಳು ಕನ್ನಡ ಮೀಡಿಯಂ ಆಗಿರುವುದರಿಂದ ಇಂಗ್ಲಿಷ್ ಮೀಡಿಯಂಗಿಂತ ಕನ್ನಡ ಮೀಡಿಯಂ ವಿದ್ಯಾರ್ಥಿಗಳು ಕಡಿಮೆ ಇಲ್ಲ. ಸಾಧನೆ ಮಾಡಿದ ಬಹಳಷ್ಟು ಸಾಧಕರು ಓದಿರುವುದು ಕನ್ನಡ ಮೀಡಿಯಂನಲ್ಲಿ, ಆತ್ಮವಿಶ್ವಾಸವನ್ನು ಕಳೆದುಕೊಳ್ಳದಿರಿ ಎಂದು ಸುರೇಶ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಹೇಳಿದರು.

ಈಗಾಗಲೇ ರಜೆ ಘೋಷಿಸಲಾಗಿರುವುದರಿಂದ ಇನ್ನುಮುಂದೆ ರಜೆಯನ್ನು ಕೇಳಬಾರದು ಮುಂದಿನ ದಿನಗಳಲ್ಲಿ ಶಿಕ್ಷಣವನ್ನು ಪಡೆಯುವತ್ತ ನಿಮ್ಮ ಗಮನವಿರಬೇಕು. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಯನ್ನು ತೆಗೆದುಕೊಂಡು ಉತ್ತರಿಸಿ ಪ್ರಾಕ್ಟಿಸ್ ಮಾಡಿ. ಕೊರೋನವೈರಸ್ ಬಗ್ಗೆಯಾಗಲಿ, ಪರೀಕ್ಷೆ ಬಗ್ಗೆಯಾಗಲಿ ಗಾಬರಿಯಾಗಬೇಡಿ. ಒಳ್ಳೆಯ ಮಾರ್ಕ್ಸ್ ಪಡೆದು ಜೀವನದಲ್ಲಿ ಯಶಸ್ಸನ್ನು ಗಳಿಸಿ ಎಂದು ಸುರೇಶ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಕೊರೋನ ವೈರಸ್ ಕಾರಣದಿಂದ ಶಾಲೆಗಳನ್ನು ತೆರೆಯಲು ಬಹಳ ಗೊಂದಲವಿದ್ದು ಇದೀಗ ಶಾಲೆಯನ್ನು ತೆರೆದು ತರಗತಿ ಆರಂಭಿಸಿದ್ದಾರೆ ಈಗ ಪರೀಕ್ಷೆಯನ್ನು ಯಾವಾಗ ಮಾಡಬೇಕು ಎಂಬುದರ ಬಗ್ಗೆ ಗೊಂದಲವಿದೆ ಸಧ್ಯದಲ್ಲೇ ಅದಕ್ಕೆ ಪರಿಹಾರ ಸಿಗಲಿದೆ. ವಿದ್ಯಾರ್ಥಿಗಳು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಓದುವಿನತ್ತ ಗಮನಹರಿಸುವುದು ಒಳ್ಳೆಯದು.

Leave A Reply

Your email address will not be published.

error: Content is protected !!