ಕಣ್ಣುಗಳ ಆರೋಗ್ಯಕ್ಕಾಗಿ ಈ ಚಿಕ್ಕ ಕೆಲಸವನ್ನು ಮಾಡುತ್ತೀರಿ

ಮನುಷ್ಯನ ದೇಹಕ್ಕೆ ಪ್ರತಿ ಅಂಗಾಂಗಳು ಹೇಗೆ ಪ್ರಾಮುಖ್ಯತೆವಹಿಸುತ್ತದೆಯೋ ಹಾಗೆಯೆ ಕಣ್ಣು ಕೂಡ ದೇಹಕ್ಕೆ ಅಷ್ಟೇ ಮಹತ್ವದಾಗಿದೆ. ಕಣ್ಣಿನ ಅರೋಗ್ಯ ವೃದ್ಧಿಗೆ ಏನು ಮಾಡಬೇಕು ಹಾಗು ಕಣ್ಣಿನ ರಕ್ಷಣೆ ಎಷ್ಟು ಮಹತ್ವದಾಗಿದೆ ಅನ್ನೋದನ್ನ ಈ ಮೂಲಕ ತಿಳಿಯುವ ಚಿಕ್ಕ ಪ್ರಯತವನ್ನು ಮಾಡೋಣ.

ಕಣ್ಣಿನ ರಕ್ಷಣೆಗೆ ಏನು ಮಾಡಬೇಕು ಅನ್ನೋದನ್ನ ತಿಳಿಯುವುದಾದರೆ, ಕಣ್ಣುಗಳ ಸಂರಕ್ಷಣೆಗಾಗಿ ವಿಟಮಿನ್ ಎ ಅಧಿಕವಾಗಿ ದೊರೆಯುವಂತಹ ತರಕಾರಿ, ಹಣ್ಣು ಹಾಗು ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಬೇಕು. ಇನ್ನು ಸೂರ್ಯನ ಕಿರಣಗಳು ಕಣ್ಣಿಗೆ ಹಾನಿಯುಂಟು ಮಾಡಬಹುದು ಆದ್ದರಿಂದ ಬಿಸಿಲಿನಲ್ಲಿ ಮನೆಯ ಹೊರಗೆ ಹೋಗುವಾಗ ಕಣ್ಣಿಗೆ ತಂಪು ಕನ್ನಡಕವನ್ನು ಹಾಕಿಕೊಳ್ಳುವುದು ಉತ್ತಮ.

ಇನ್ನು ಯಾವುದೇ ವಾಹನವನ್ನು ಓಡಿಸುವಾಗ ಅದರಲ್ಲೂ ದ್ವಿ ಚಕ್ರಗಳನ್ನು ಓಡಿಸುವಾಗ ನಿಮ್ಮ ಕಣ್ಣುಗಳು ದೂಳು ಗಾಳಿಗೆ ಅಲರ್ಜಿ ಆಗಬಹದು ಆಗಾಗಿ ಅವುಗಳಿಂದ ರಕ್ಷಣೆ ಪಡೆಯಲು ಕೊಲಿಂಗ್ ಗ್ಲಾಸ್ ಬಳಸುವುದು ಅವಶ್ಯಕವಾಗಿದೆ.

ಕಂಪ್ಯೂಟರ್ ಕೆಲಸ ಮಾಡುವವರು ಅಥವಾ ಟಿವಿ ನೋಡುವವರು ಅದರ ಪರದೆಯನ್ನು ಒಂದೇ ಸಮನೆ ನೋಡದೆ ಸ್ವಲ್ಪ ಹೊತ್ತು ಅತ್ತಿತ್ತ ನೋಡಿ ದೂರದ ಆಕಾಶವನ್ನು ನೋಡಿ, ಹೀಗೆ ಮಾಡುವುದರಿಂದ ಕಣ್ಣಿನ ಆಯಾಸ ಕಡಿಮೆಯಾಗುವುದರ ಜೊತೆಗೆ ದೃಷ್ಟಿದೋಷ ಬರದಂತೆ ತಡೆಗಟ್ಟುತ್ತದೆ.

ಇನ್ನು ವಯಸ್ಕರು ಮಕ್ಕಳು ಪುಸ್ತಕವನ್ನು ಓದುವಾಗ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ, ಹೌದು ಓದುವಾಗ ಪುಸ್ತಕವನ್ನು ಕಣ್ಣಿಗೆ ಅತ್ಯಂತ ಹತ್ತಿರದಲ್ಲಿ ಅಥವಾ ಅತ್ಯಂತ ದೂರದಲ್ಲಿ ಹಿಡಿದು ಓದಬೇಡಿ, ಮಲಗಿಕೊಂಡು ಓದಬೇಡಿ ಅಷ್ಟೇ ಅಲ್ಲದೆ ಅತ್ಯಂತ ತೀಕ್ಷ್ಣವಾದ ಬೆಳಕನ್ನು, ಸೂರ್ಯನನ್ನು ಬರಿಗಣ್ಣಿನಿಂದ ನೋಡಬೇಡಿ.

ಕಣ್ಣುಗಳಿಗೆ ಆಯಾಸ ಆದಲ್ಲಿ ಎರಡು ಕಾಣುಗಳ ಮೇಲೆ ಸೌತೆಕಾಯಿ ಬಿಲ್ಲೆಗಳನ್ನು ಇಟ್ಟು ಸ್ವಲ್ಪ ಹೊತ್ತು ವಿಶ್ರಮಿಸಿ. ಇನ್ನು ಕಣ್ಣಿನ ಉರಿ ಅಥವಾ ನಾವೇ ಉಂಟಾಗಿದ್ದಲ್ಲಿ ಕನನ್ನು ಉಜ್ಜಬೇಡಿ ಬದಲಾಗಿ ಶುದ್ಧವಾದ ನೀರಿಂದ ತೊಳೆದು ಶುಭ್ರಗೊಳಿಸಿ.

Leave A Reply

Your email address will not be published.

error: Content is protected !!