ಈ ಜ್ಯೂಸ್ ಕುಡಿದರೆ ನೀವು ಕನ್ನಡಕ ಹಾಕೋದೆ ಬೇಡ

ಮುಪ್ಪಿನ ಕಾಲದಲ್ಲಿ ಕಣ್ಣಿನ ಸಮಸ್ಯೆ ಬರುವುದು ಅದಕ್ಕಾಗಿ ಕಣ್ಣಿನ ಆಪರೇಷನ್ ಮಾಡಿಸಿಕೊಳ್ಳುವುದು ಕನ್ನಡಕವನ್ನು ಹಾಕಿಕೊಳ್ಳುವುದು ಇವೆಲ್ಲವೂ ಸರ್ವೇ ಸಾಮಾನ್ಯ ಯಾಕಂದ್ರೆ ಸಾಮಾನ್ಯವಾಗಿ ಮನುಷ್ಯ ತನ್ನ ಯೌವ್ವನವನ್ನು ಕಳೆದು ಗೃಹಸ್ಥ ಜೀವನವನ್ನೂ ಕಳೆದು ನಂತರದಲ್ಲಿ ಮುಪ್ಪಿನ ಜೀವನಕ್ಕೆ ಕಾಲಿಡುತ್ತಾನೆ, ಈ ಸಮಯಕ್ಕೆ ಆತನ ದೇಹದ ಶಕ್ತಿ ವ್ಯತಿರಿಕ್ತವಾಗಿ ಕುಗ್ಗುತ್ತಾ ಹೋಗಿರುತ್ತದೆ ಅಲ್ಲದೇ ದೇಹದಲ್ಲಿನ ಹಲವಾರು ಅಂಗಾಗಗಳು ತಮ್ಮ ಕೆಲಸವನ್ನು ಸರಿಯಾಗಿ ಮಾಡುವುದನ್ನು ನಿಲ್ಲಿಸಿರುತ್ತವೆ. ಹಾಗಾಗಿ ತಮ್ಮ ನರಗಳ ಬಲಹೀನತೆಯಿಂದ ಕಣ್ಣು ಕಾಣದಂತಾಗುವುದು ಸೇರಿದಂತೆ ಹಲವಾರು ಕಣ್ಣಿನ ಸಮಸ್ಯೆಗಳನ್ನು ಎದುರಿಸುವುದು ಸಹಜವಾಗಿದೆ, ಆದರೆ ಈ ನಡುವೆ ವಯಸ್ಸಾದವರಿಗಿಂತ ಚಿಕ್ಕ ಚಿಕ್ಕ ಮಕ್ಕಳಲ್ಲಿಯೇ ಹೆಚ್ಚು ಕಣ್ಣಿನ ಸಮಸ್ಯೆಗಳನ್ನು ಕಾಣಬಹುದಾಗಿದೆ.

ಮಕ್ಕಳಲ್ಲಿ ತುಂಬಾ ಚಿಕ್ಕ ಚಿಕ್ಕ ವಯಸ್ಸಿನಲ್ಲಿಯೇ ಹೀಗೆ ಕಣ್ಣುಗಳ ಸಮಸ್ಯೆ ಗಳು ಸೃಷ್ಟಿಯಾಗುವುದಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪೋಷಕರೇ ಕಾರಣರಾಗುತ್ತಿದ್ದಾರೆ ಯಾಕಂದ್ರೆ ಅವರು ತಮ್ಮ ಮಕ್ಕಳಿಗೆ ಉತ್ತಮ ಆಹಾರ ಪದ್ದತಿಯ ಆರೋಗ್ಯಕಾರಿ ತರಕಾರಿಗಳ ಸೊಪ್ಪುಗಳ ರುಚಿಯನ್ನು ತೋರಿಸದೇ ಜಂಕ್ ಫುಡ್ ಗಳ ರುಚಿಯನ್ನು ತೋರಿಸುತ್ತಿದ್ದಾರೆ, ಅಷ್ಟೇ ಅಲ್ಲದೇ ಮಕ್ಕಳಿಗೆ ಬಾರದ ವಯಸ್ಸಿನಲ್ಲಿ ಮೊಬೈಲ್ ಫೋನನ್ನು ಕೊಟ್ಟು ಮಕ್ಕಳು ಸದಾ ಮೊಬೈಲ್ ಅನ್ನು ನೋಡಿಕೊಂಡು ಅದರ ಜೊತೆಗೇ ಬೆರೆತು ಹೋಗಿದ್ದರೆ ಆ ಕಾರಂದಿಂದಾಗಿ ಮಕ್ಕಳಲ್ಲಿ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಾವಿಂದು ನೋಡುವುದು ಸಹಜವಾಗಿದೆ.

ಇನ್ನು ಕಣ್ಣಿನ ಸಮಸ್ಯೆಗಾಗಿ ಕನ್ನಡಕವನ್ನು ಹಾಕುವುದನ್ನು ಬಿಟ್ಟು ನಾವು ಹೇಳುವ ಈ ಜ್ಯೂಸ್ ಅನ್ನು ಕುಡಿಯಿರಿ ಸಾಕು ನೀವು ಯಾವುದೇ ಕಣ್ಣಿನ ಸಮಸ್ಯೆಯಿಂದ ದೂರ ಇರಬಹುದು ಕಣ್ಣಿನ ದೃಷ್ಟಿ ಚೆನ್ನಾಗಿರುವುದು ಅಷ್ಟೇ ಅಲ್ಲದೇ ನೀವು ಕಣ್ಣಿಗೆ ಕನ್ನಡಕವನ್ನು ಹಾಕುವ ಯಾವ ಅಗತ್ಯವೂ ಸಹ ಇರುವುದಿಲ್ಲ, ಹಾಗಾದ್ರೆ ಆ ಜ್ಯೂಸ್ ಯಾವುದು ಮತ್ತು ಅದನ್ನು ಮಾಡುವ ಉಪಯೋಗಿಸುವ ವಿಧಾನಗಳನ್ನು ತಿಳಿದುಕೊಳ್ಳೋಣ ಬನ್ನಿ.

ಒಂದು ಕ್ಯಾರೆಟ್ ಅನ್ನು ಕತ್ತರಿಸಿಕೊಂಡು ಅದಕ್ಕೆ ಅರ್ಧ ಹೋಳು ಟೋಮ್ಯಾಟೋ ಹಣ್ಣನ್ನು ಹಾಕಿಕೊಂಡು ಅದನ್ನು ಒಂದು ಮಿಕ್ಸಿ ಜಾರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು, ಹೀಗೆ ನುಣ್ಣಗೆ ಆರ್ದ ಕ್ಯಾರೆಟ್ ಮತ್ತು ಟೋಮ್ಯಾಟೋ ಮಿಶ್ರಣವನ್ನು ಒಂದು ಚಿಕ್ಕ ಬೌಲ್ ಗೆ ಹಾಕಿಕೊಳ್ಳಬೇಕು ಬೌಲ್ ಗೆ ಹಾಕಿಕೊಂಡ ಆ ಮಿಶ್ರಣಕ್ಕೆ ಎರಡರಿಂದ ಮೂರು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು, ಹೀಗೆ ಮಾಡಿಕೊಂಡು ಪ್ರತಿನಿತ್ಯ ನಿಯಮಿತವಾಗಿ ಸೇವಿಸುತ್ತಾ ಬರುವುದರಿಂದ ನಿಮ್ಮ ಕಣ್ಣಿಗೆ ಸಂಬಂಧಿಸಿದ ಏನೇ ಸಮಸ್ಯೆ ಇದ್ದರೂ ಸಹ ಅತೀ ವೇಗವಾಗಿ ಗುಣವಾಗಿ ನಿಮ್ಮ ಕಣ್ಣಿನ ದೃಷ್ಟಿ ಕ್ರಮೇಣ ಸುದಾರಿಸುವುದರಲ್ಲಿ ಸಂಶಯವಿಲ್ಲ ಅಷ್ಟೇ ಅಲ್ಲದೇ ನೀವು ಮಾಡುವ ಅಡುಗೆಯಲ್ಲಿ ಪ್ರತಿನಿತ್ಯ ಆರೋಗ್ಯಕಾರಿ ಸೊಪ್ಪುಗಳನ್ನು ಮತ್ತು ತರಕಾರಿಗಳನ್ನು ಉಪಯೋಗಿಸುವುದರಿಂದಲೂ ಸಹ ನಿಮ್ಮ ಕಣ್ಣಿನ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಬಹಳಷ್ಟು ಪ್ರಯೋಜನಕಾರಿಯಾಗಿದೆ.

Leave a Comment

error: Content is protected !!