ಪೊಲೀಸ್ ಪರೀಕ್ಷೆಯಲ್ಲಿ ಫೇಲಾದ ಈ ಚಾಲಾಕಿ ವ್ಯಕ್ತಿ ಮುಂದೆ ಮಾಡಿದ್ದೇನು ನೋಡಿ!

ಪೊಲೀಸ್ ಎಂದರೆ ಜನಸಾಮಾನ್ಯರ ರಕ್ಷಣೆ ಮತ್ತು ಸಮಾಜವನ್ನು ರಕ್ಷಿಸುವಂತಹ ತೊಂದರೆಯಿಂದ ದೂರ ಮಾಡುವಂತಹ ಒಂದು ಅದ್ಭುತ ಸೇವಾ ಕಾರ್ಯವಾಗಿದೆ. ಆದರೆ ಇಂದಿನ ದಿನಗಳಲ್ಲಿ ರಕ್ಷಕರೆ ಜನರ ಭಕ್ಷಕರಾಗುತ್ತಿರುವುದು ಸರ್ವೇಸಾಮಾನ್ಯವಾಗಿ ಎಲ್ಲರಿಗೂ ಕಾಣುತ್ತಿರುವ ವಿಚಾರವಾಗಿದೆ. ಅಂತೆಯೇ ಇಲ್ಲೊಬ್ಬ ವ್ಯಕ್ತಿ ಪೊಲೀಸ್ ಪರೀಕ್ಷೆಯಲ್ಲಿ ಫೇಲಾದರೂ ತಾನೊಬ್ಬ ಪೊಲೀಸ್ ಎಂದು ಹೇಳಿಕೊಂಡು ಜನರನ್ನು ವಸೂಲಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇವನ ಬಗ್ಗೆ ಇಂದು ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕಾನೂನು ಚೌಕಟ್ಟಿನ ವಿಚಾರದಲ್ಲಿ ಜನರನ್ನು ಭಕ್ಷಣೆ ಮಾಡುತ್ತಿದ್ದಾರೆ. ಅಂತೆಯೇ ಪ್ರಾಮಾಣಿಕ ದಕ್ಷತೆಯ ಕೆಲಸವನ್ನು ನಿರ್ವಹಿಸುವ ಆರಕ್ಷಕರು ಕೂಡ  ಇದ್ದಾರೆ. ಕೆಲವು ಅನಿಷ್ಠಾವಂತ ಪೊಲೀಸರ ನಡವಳಿಕೆಯಿಂದ ನಿಷ್ಠಾವಂತ ಸೇವೆಯನ್ನು ನೀಡುವ ಪೊಲೀಸ್ ಅಧಿಕಾರಿಗಳಿಗೂ ಕೂಡ ಕೆಟ್ಟ ಹೆಸರು ಬರುವಂತಾಗಿದೆ. ಈತನ ಹೆಸರು ಪಕೀರಪ್ಪ ಅಲಿಯಾಸ್ ಪ್ರಕಾಶ್. ಈತನು 2018ರಲ್ಲಿ ಸಿಎಆರ್ ಕಾನ್ಸ್ಟೇಬಲ್ ಎಕ್ಸಾಮ್ ಬರೆದು  ಫೇಲಾಗುತ್ತಾನೆ. ಆದರೆ ಅದಕ್ಕಿಂತಲೂ ಮುಂಚೆ ತಾನೊಬ್ಬ ಪೊಲೀಸ್ ಎಂದು ಶಿವಾಜಿನಗರಕ್ಕೆ ಹೋಗಿ ಪೊಲೀಸ್ ಡ್ರೆಸ್ಸನ್ನು ಹೊಲಿಸಿಕೊಂಡು

ಅದನ್ನು ಹಾಕಿಕೊಂಡೆ ಓಡಾಡಲು ಶುರು ಮಾಡುತ್ತಾನೆ. ಅಂತೆಯೇ ಇವನ ಪಲ್ಸರ್ ಬೈಕ್ ನ ಹಿಂದೆ ಮತ್ತು ಮುಂದೆ ಪೊಲೀಸ್ ಎಂಬ ಹೆಸರನ್ನು ಬಳಸಿಕೊಳ್ಳುತ್ತಾನೆ. ಎಲ್ಲ ಪೊಲೀಸರಂತೆ ಈತನು ಬೈಕಿಗೆ ಲಾಠಿಯನ್ನು ಕೂಡ ಇಟ್ಟುಕೊಳ್ಳುತ್ತಾನೆ. ಬಾಗಲಗುಂಟೆ ಠಾಣಾವ್ಯಾಪ್ತಿಯಲ್ಲಿ ತಾನೊಬ್ಬ ಪೊಲೀಸ್ ಎಂದು ಹೇಳಿಕೊಂಡು ಜನರನ್ನು ಸುಲಿಗೆ ಮಾಡುವ ಕಾಯಕವನ್ನು ಮಾಡುತ್ತಿದ್ದ. ಹೋಟೆಲ್ ಗಳಿಗೆ ಹೋಗಿ ಊಟ ಮಾಡಿ ತಾನು ಪೊಲೀಸ್ ಎಂದು ಹೇಳಿ ಹಣವನ್ನು ನೀಡದೆ ಬರುತ್ತಿದ್ದ. ಅಂತೆಯೇ ಡಿಜೆ ಹಳ್ಳಿ ಗಲಭೆಯಲ್ಲಿ ಬಂದೋಬಸ್ತ್ ಡ್ಯೂಟಿಯಲ್ಲಿ ತಾನೊಬ್ಬ ಪೊಲೀಸ್ ಎಂದು ಡ್ಯೂಟಿಯನ್ನು ಕೂಡ ಮಾಡಿದ್ದ. ಅಸಲಿ ಪೊಲೀಸರ ಜೊತೆ ಫೋಟೋವನ್ನು ತೆಗೆದುಕೊಂಡಿದ್ದ.

ಅಂತೆಯೇ ಈ ವ್ಯಕ್ತಿ ತನ್ನ ಏರಿಯಾದಲ್ಲಿ ಒಂದು ಪಿಜಿಗೆ ಹೋಗಿ ನೀವು ಅಕ್ರಮವಾಗಿ ಪಿಜಿ ಏನು ನಡೆಸುತ್ತಿದ್ದೀರಿ ಎಂದು ಹೆದರಿಸಿ ಅವರಿಂದ 10ಸಾವಿರ ರೂಪಾಯಿ ಹಣವನ್ನು ದೋಚಿದ್ದಾನೆ. ಅನುಮಾನದಿಂದ ಪಿಜಿ ಮಾಲೀಕ ಬಾಗಲಗುಂಟೆ ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟನ್ನು ನೀಡುತ್ತಾರೆ. ಆಗ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಎಲ್ಲಾ ಸತ್ಯವನ್ನು ಹೇಳಿಕೊಳ್ಳುತ್ತಾನೆ. ಈಗ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದ್ದಾನೆ. ಇದರ ಅನೇಕ ಬಗೆಯ ಲೂಟಿಕೋರರು ಹೆಚ್ಚಾಗಿದ್ದಾರೆ. ಮೋಸ ಹೋಗುವ ಜನರ ಮಧ್ಯೆ ಮೋಸ ಮಾಡುವವರು ತುಂಬಾ ಜನರಿದ್ದಾರೆ.

Leave A Reply

Your email address will not be published.

error: Content is protected !!