ಬೆಳಗ್ಗೆ ಈ ಚಿಕ್ಕ ಕೆಲಸ ಮಾಡಿದ್ರೆ ದೇಹದ ಬೊಜ್ಜು ಬಹುಬೇಗನೆ ಕರಗುತ್ತೆ

ನಿಂಬೆಹಣ್ಣು ಅಡುಗೆಗೆ ಮಾತ್ರವಲ್ಲದೆ ಹತ್ತಾರು ಲಾಭಗಳನ್ನು ನೀಡುವಂತ ಉಪಯೋಗಗಳನ್ನು ಹೊಂದಿದೆ, ದೈವಿಕ ಗುಣಗಳನ್ನು ಹೊಂದಿರುವಂತ ನಿಂಬೆ ಹಣ್ಣು ದೇಹಕ್ಕೆ ಹಲವು ಪ್ರಯೋಜನಕಾರಿ ಅಂಶಗಳನ್ನು ಒದಗಿಸುತ್ತದೆ, ನಿಂಬೆಹಣ್ಣು ದೇಹಕ್ಕೆ ಹೇಗೆಲ್ಲ ಸಹಕಾರಿ ಹಾಗು ಇದರಲ್ಲಿರುವಂತ ಆರೋಗ್ಯಕಾರಿ ಪ್ರಯೋಜನಗಳೇನು ಅನ್ನೋದನ್ನ ಈ ಮೂಲಕ ತಿಳಿಯೋಣ ಬನ್ನಿ.

ಮೊದಲನೆಯದಾಗಿ ದೇಹದ ಬೊಜ್ಜು ನಿವಾರಿಸಲು ನಿಂಬೆಹಣ್ಣು ಹೇಗೆ ಸಹಕಾರಿ ಅನ್ನೋದನ್ನ ತಿಳಿಯುವುದಾದರೆ ಬೆಳಗ್ಗೆ ಖಾಲಿ ಹೊಟ್ಟೆಗೆ ಪ್ರತಿದಿನ ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ನಿಂಬೆ ಹಣ್ಣಿನ ರಸವನ್ನು ಬೆರಸಿ ಕುಡಿದರೆ ದೇಹದ ಬೊಜ್ಜು ಬಹುಬೇಗನೆ ಕರಗುತ್ತದೆ, ಅಷ್ಟೇ ಅಲ್ಲದೆ ಇದರ ಜೊತೆಗೆ ಮಂಡಿ ನೋವು ಸಹ ಕಡಿಮೆಯಾಗುತ್ತದೆ. ಈ ವಿಧಾನವನ್ನು ಅನುಸರಿಸಿ ದೇಹದ ಬೊಜ್ಜು ಕರಗಿಸಿಕೊಳ್ಳಬಹುದಾಗಿದೆ.

ಇನ್ನು ನಿಂಬೆಹಣ್ಣು ಹೇಗೆ ಉಪಯೋಗಕಾರಿ ಅನ್ನೋದನ್ನ ತಿಳಿಯುವುದಾದರೆ ಮುಖದ ಮೇಲಿನ ಮೊಡವೆಯನ್ನು ನಿವಾರಿಸಲು ಉಪಯೋಗಕಾರಿಯಾಗಿದೆ, ಹೌದು ನಿಂಬೆ ರಸದಲ್ಲಿ ಶಂಖವನ್ನು ತೇದು ಈ ಮಿಶ್ರಣವನ್ನು ಮೊಡವೆ ಇರುವಂತ ಜಾಗದಲ್ಲಿ ಹಚ್ಚಿದರೆ ಮೊಡವೆ ನಿವಾರಣೆಯಾಗುತ್ತದೆ. ನಿಂಬೆ ಮೊಡವೆ ನಿವಾರಣೆಗೆ ಇದು ಪರಿಣಾಮಕಾರಿ.

ಕಜ್ಜಿ ತುರಿಕೆ ಹುಣ್ಣುಗಳಿಗೆ ನಿಂಬೆ ಮನೆಮದ್ದು: ನಿಂಬೆ ರಸ ವಿಳ್ಳೇದೆಲೇಯಾ ರಸ ಮತ್ತು ಕೊಬ್ಬರಿ ಎಣ್ಣೆಯನ್ನು ಮಿಶ್ರಣಮಾಡಿ ಕುದಿಸಿ ಅದಕ್ಕೆ ಒಂದು ಚಮಚ ಅರಸಿನ ಪುಡಿ ಹಾಗು ಸ್ವಲ್ಪ ಕರಿಜೀರಿಗೆಯ ಪುಡಿ ಬೆರೆಸಬೇಕು. ಈ ಮಿಶ್ರಣ ಕಜ್ಜಿ ತುರಿಕೆ ಹುಣ್ಣುಗಳಿಗೆ ಒಳ್ಳೆಯ ಮನೆಮದ್ದಾಗಿದೆ. ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

Leave a Comment

error: Content is protected !!