ಚೇಳು ಕಚ್ಚಿದರೆ ತಕ್ಷಣ ಏನ್ ಮಾಡಬೇಕು? ಈ ಉಪಯುಕ್ತ ಮಾಹಿತಿ ತಿಳಿದುಕೊಳ್ಳಿ

ಚೇಳು ಕುಟುಕಿದರೆ ಅತೀವ ನೋವಾಗುತ್ತದೆ. ಹಾಗೆಯೇ ಜಾನುವಾರುಗಳಲ್ಲೂ ಚೇಳು ಕಡಿದು ತೊಂದರೆಯನ್ನುಂಟು ಮಾಡುತ್ತವೆ. ಆದ್ದರಿಂದ ರೈತರು ಈ ಕುರಿತು ಎಚ್ಚರ ವಹಿಸುವುದು ಒಳಿತು.
ಚೇಳಿನಲ್ಲೂ ವಿವಿಧ ಬಗೆಯಿವೆ. ಇದರಲ್ಲಿ ಮುಖ್ಯವಾದವು ಕಪ್ಪು, ಕಂದು ಬಣ್ಣದ ಚೇಳುಗಳು, ಕೆಂಪು ಕಾಲಿನ ಚೇಳುಗಳು, ಹಾರುವ ಮತ್ತು ಓಡುವ ಚೇಳುಗಳು ಇತ್ಯಾದಿ. ಒಟ್ಟಾರೆ ಪ್ರಾಣಿಗಳಲ್ಲಿ ಈ ಕಪ್ಪು ಬಣ್ಣದ ಚೇಳುಗಳು ನಾಯಿ ಮತ್ತು ಬೆಕ್ಕುಗಳನ್ನು ಹೆಚ್ಚಾಗಿ ಬಾಧಿಸುತ್ತಿದ್ದು ಇದರ ವೈಜ್ಞಾನಿಕ ಹೆಸರು ಲಾಟ್ರೋಡಕ್ಟಸ್ ಮ್ಯಾಕ್ಟನ್ಸ್. ಈ ಚೇಳು ಆಲ್ಫಾ ಲಾಟರೋಟಾಕ್ಸಿನ್ ಎಂಬ ವಿಷಕಾರಿ ಅಂಶವನ್ನು ಸ್ರವಿಸುತ್ತವೆ.

ಚೇಳು ಕಚ್ಚಿದಾಗ ಮೊದಲು ಮನೆ ಮದ್ದನ್ನು ಮಾಡಬೇಕು. ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು, ಅದನ್ನು ಕತ್ತರಿಸಿ ರಸ ತೆಗೆದುಕೊಳ್ಳಬೇಕು. ಅದಾದ ಮೇಲೆ ತುಳಸಿ ಗಿಡದ ಬೇರಿನ ಮಣ್ಣನ್ನು ನಿಂಬೆ ರಸದ ಜೊತೆಗೆ ಚೆನ್ನಾಗಿ ಮಿಕ್ಸ್​​​ ಮಾಡಿ ಚೇಳು ಕಚ್ಚಿದ ಭಾಗಕ್ಕೆ ಹಚ್ಚಬೇಕು. ಹೀಗೆ ಮಾಡುವುದರಿಂದ ಚೇಳಿನ ವಿಷ,ನವೆ, ತುರಿಕೆ ಹಾಗೂ ನೋವು ಕಡಿಮೆ ಆಗುತ್ತದೆ.

ಒಂದು ವೇಳೆ ತುಳಸಿ ಗಿಡದ ಬೇರಿನ ಮಣ್ಣು ಸಿಗಲಿಲ್ಲ ಅಂದಾದರೆ, ತುಳಸಿ ಎಲೆಯ ರಸ ಅಥವಾ ತುಳಸಿ ಗಿಡಿದ ಯಾವುದೇ ಭಾಗದ ರಸವನ್ನು ತೆಗೆದು ನಿಂಬೆ ರಸದೊಂದಿಗೆ ಮಿಕ್ಸ್​ ಮಾಡಿ ಚೇಳು ಕಚ್ಚಿದ ಜಾಗಕ್ಕೆ ಹಚ್ಚಬೇಕು.ಈ ಮನೆಮದ್ದು ಸಾಕಷ್ಟು ಉಪಯೋಗಕಾರಿ.

ಚೇಳು ಕಡಿದ ಜಾಗದಲ್ಲಿ ತುಂಬಾ ನೋವು ಮತ್ತು ಬಾವು ಇರುವುದರಿಂದ, ಕಚ್ಚಿದ ಜಾಗಕ್ಕೆ ಮಂಜುಗಡ್ಡೆಯನ್ನು ತಗಲಿಸಿ ಹಿಡಿಯಬೇಕು. ಕಡಿದ ಜಾಗಕ್ಕೆ ಸೋಂಕು ತಗಲದಂತೆ, ಆ ಜಾಗವನ್ನು ಸೋಪು ಹಚ್ಚಿ, ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಸೋಂಕು ನಿವಾರಕ ಅರಿಶಿಣವನ್ನು ಬೇವಿನ ಎಣ್ಣೆಯಲ್ಲಿ ಮಿಶ್ರ ಮಾಡಿ ಹಚ್ಚಬಹುದು.

ಕಚ್ಚಿದ ಜಾಗದ ಸ್ವಲ್ಪ ಮೇಲೆ ಬಟ್ಟೆಯೊಂದನ್ನು ಕಟ್ಟಿದರೆ, ವಿಷ ಶರೀರಕ್ಕೆ ಏರುವ ಸಾಧ್ಯತೆ ಕಡಿಮೆಯಾಗುತ್ತದೆ. ಆದರೆ ಈ ಚಿಕಿತ್ಸೆಯನ್ನು ಚೇಳು ಕಡಿದ ಒಂದೆರಡು ಗಂಟೆಯೊಳಗೆ ಮಾಡಬೇಕು. ಒಂದು ಸಲ ವಿಷ ಶರೀರ ಸೇರಿದರೆ, ಇದರಿಂದ ಪ್ರಯೋಜನವಾಗುವುದಿಲ್ಲ. ಜಾನುವಾರು ನೋವಿನಿಂದ ಕಂಗಾಲಾಗಿ ದಿಕ್ಕು ತಪ್ಪಿ ಓಡುವ ಸಾಧ್ಯತೆ ಇರುವುದರಿಂದ ಅದನ್ನು ಹಗ್ಗದಿಂದ ಸರಿಯಾಗಿ ಕಟ್ಟಬೇಕು. ಮನೆಯಲ್ಲಿ ಅಡುಗೆ ಸೋಡಾ ಇದ್ದೇ ಇರುವುದರಿಂದ, ಚೇಳು ಕಚ್ಚಿದ ಜಾಗಕ್ಕೆ, ಅಡುಗೆ ಸೋಡಾದ ದ್ರಾವಣ ಮಾಡಿ ಹಚ್ಚಿದರೆ ಊತ ಕಡಿಮೆಯಾಗುವ ಸಾಧ್ಯತೆ ಇದೆ.

ಚೇಳು ಕಚ್ಚಿದ ಪ್ರದೇಶವನ್ನು ಸೋಪ್ ಮತ್ತು ನೀರಿನಿಂದ ತೊಳೆಯಿರಿ. ಆ ಜಾಗದಲ್ಲಿ ಯಾವುದೇ ರೀತಿಯ ಆಭರಣ ಅಥವಾ ಪರಿಕರಗಳನ್ನು ಧರಿಸಿದ್ದರೆ ಕೂಡಲೇ ತೆಗೆದುಹಾಕಿ. ಉದಾಹರಣೆಗೆ, ನಿಮ್ಮ ಬೆರಳುಗಳ ಮೇಲೆ ಕಚ್ಚಿದರೆ, ನೀವು ರಿಂಗ್ ಧರಿಸಿದ್ದರೆ, ಈ ಮಧ್ಯೆ ನೀವು ಅದನ್ನು ತೆಗೆದುಹಾಕಬೇಕು. ಬೆಳ್ಳುಳ್ಳಿಯು ಸಹ ಚೇಳು ಕಚ್ಚಿದಾಗ ಉಪಯೋಗಿಸಬಹುದಾದ ಉತ್ತಮ ಮದ್ದು ಚೇಳು ಕಚ್ಚಿದ ಸ್ಥಳದಲ್ಲಿ ಮೂಲಂಗಿ ಹಾಗೂ ಉಪ್ಪಿನ ಪುಡಿ ಹಚ್ಚುವುದರಿಂದ ಉರಿ ಕಡಿಮೆಯಾಗುವುದು, ಹಾಗೂ ಯಾವುದೇ ರೀತಿಯ ವಿಷವು ದೇಹಕ್ಕೆ ಇರುವುದಿಲ್ಲ, ಇದನ್ನು ಇನ್ನಿತರ ವಿಷಕಾರಿ ಜಂತು ಕಚ್ಚಿದಾಗಲೂ ಮಾಡಬಹುದು. ನೋವು ಮತ್ತು ಅಸ್ವಸ್ಥತೆಯನ್ನು ನಿರ್ವಹಿಸಲು ನೋವು ನಿವಾರಕವನ್ನು ತೆಗೆದುಕೊಳ್ಳುವುದು ಉತ್ತಮ.

ಚೇಳು ಕಚ್ಚಿದಾಗ ಬೆಳ್ಳುಳ್ಳಿ ಜಜ್ಜಿ ಕಚ್ಚಿದ ಜಾಗಕ್ಕೆ ಹಚ್ಚಿದರೆ ಶಮನವಾಗುವುದು. ಹುಣಸೆ ಬೀಜವನ್ನು ಕಲ್ಲಿನಲ್ಲಿ ತೇದು ಕಚ್ಚಿದ ಭಾಗಕ್ಕೆ ಹಚ್ಚಿದರೆ ಹಿಡಿದುಕೊಳ್ಳುತ್ತದೆ. ವಿಷ ಇಳಿದ ನಂತರ ಬೀಳುತ್ತದೆ. ಏಲಕ್ಕಿ ಬೀಜವನ್ನು ತಿಂದು ಕಿವಿಯಲ್ಲಿ ಬೀಜದ ಸುವಾಸನೆಯನ್ನು ಊದಿದರೆ ವಿಷ ಇಳಿಯುವುದು. ಕಚ್ಚಿದ ಜಾಗಕ್ಕೆ ದೇಶಿ ಆಕಳ ಸಗಣಿ ಲೇಪಿಸಿದರೆ ನೋವು ಕಡಿಮೆ ಆಗುತ್ತದೆ.

Leave a Comment

error: Content is protected !!