ತಲೆಯಲ್ಲಿನ ಹೇನು ಸಮಸ್ಯೆಗೆ ಬೆಸ್ಟ್ ಮನೆಮದ್ದು

ಸಾಮಾನ್ಯವಾಗಿ ಮಹಿಳೆಯರಿಂದ ಹಿಡಿದು ಪುರುಷರು ಹಾಗೂ ಮಕ್ಕಳವರೆಗೂ ಕೂಡ ತಲೆಯಲ್ಲಿ ಹೇನಿನ ಸಮಸ್ಯೆ ಕಾಡುತ್ತಲೇ ಇರುತ್ತದೆ. ಮುಖ್ಯವಾಗಿ ಇದು ಸಣ್ಣ ಮಕ್ಕಳಿಂದ ದೊಡ್ಡವರಿಗೆ ಹರಡುತ್ತಾ ಬರುತ್ತದೆ. ನಾವು ಮನೆಯಲ್ಲಿ ಸಿಗುವಂತಹ ಹಲವು ಪದಾರ್ಥಗಳನ್ನು ಬಳಸಿಕೊಂಡು ಈ ಹೇನಿನ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಬಹುದು. ಅದು ಹೇಗೆ ಅನ್ನೋದು ಈ ಲೇಖನದ ಮೂಲಕ ವಿವರವಾಗಿ ತಿಳಿಸಿಕೊಡುತ್ತೇವೆ.

ಮೊದಲು ಒಂದು ಬೌಲ್ ಗೆ ಸುಮಾರು ನಾಲ್ಕು ಸ್ಪೂನ್ ಅಷ್ಟು ನೀರನ್ನು ಹಾಕಿಕೊಳ್ಳಬೇಕು. ಅದಕ್ಕೆ ಒಂದು ಟಿ ಸ್ಪೂನ್ ಅಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಅದಕ್ಕೆ ಅಡುಗೆಗೆ ಬಳಸುವ ವಿನೆಗರ್ ಅಥವಾ ಆ್ಯಪಲ್ ಸೈಡರ್ ವಿನೆಗರ್ ೩ ಸ್ಪೂನ್ (ಅಡುಗೆಗೆ ಬಳಸುವ ವಿನೆಗರ್ ಆದರೆ ಅದನ್ನ ಸ್ವಲ್ಪ ಬಿಸಿ ಮಾಡಿ ಬಳಸಬೇಕು) ಹಾಕಿ ಸರಿಯಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನ ಒಂದು ಸ್ಪ್ರೇ ಬಾಟಲ್ ನಲ್ಲಿ ಕೂಡ ಹಾಕಿ ಇಟ್ಟುಕೊಂಡು ಬಳಸಬಹುದು. ಸ್ಪ್ರೇ ಬಾಟಲ್ ಇಲ್ಲದೆ ಹೋದರೆ ಒಂದು ಹತ್ತಿಯನ್ನ ಈ ನೀರಿನಲ್ಲಿ ಅಡ್ಡಿಕೊಂದು ತಲೆಕೂದಲಿಗೆ ಹಚ್ಚಿಕೊಳ್ಳಬೇಕು. ಕೂದಲು ಬೆಳೆಯುವ ಬುಡದಿಂದ ಇದನ್ನು ಹಚ್ಚುತ್ತಾ ಬರಬೇಕು ಹಾಗೆ ಚೆನ್ನಾಗಿ ಹೀರಿಕೊಳ್ಳಲು ಬಿಡಬೇಕು.

ನಾವು ಇಲ್ಲಿ ಉಪ್ಪನ್ನು ಬಳಸಿರುವುದರಿಂದ ಕೆಲವರಿಗೆ ತಲೆ ಕೂದಲಿಗೆ ಉಪ್ಪನ್ನು ಬಳಸುವುದರಿಂದ ತಲೆ ಕೂದಲು ಉದುರಬಹುದು ಎಂಬ ಪ್ರಶ್ನೆ ಕಾಡಬಹುದು. ಉಪ್ಪು ಬಳಸುವುದರಿಂದ ತಲೆಯಲ್ಲಿ ಇರುವ ಹೇನನ್ನು ಸಂಪೂರ್ಣವಾಗಿ ಹೋಗಲಾಡಿಸಬಹುದು. ನಮ್ಮ ಕೂದಲಲ್ಲಿ ಉಪ್ಪನ್ನು ಬಳಸುವುದರಿಂದ ಕೂದಲು ತುಂಬಾ ಚೆನ್ನಾಗಿ, ಆರೋಗ್ಯದಿಂದ ಬೆಳೆಯುತ್ತದೆ. ತಲೆಯಲ್ಲಿ ಇರುವ ಡ್ಯಾಂಡ್ರಫ್ ಕೂಡ ಹೋಗಲಾಡಿಸುತ್ತದೆ. ಕೆಲವರ ತಲೆಯಲ್ಲಿ ಯಾವಾಗಲೂ ಎಣ್ಣೆಯ ಅಂಶ ಇದ್ದಂತೆ ಅನಿಸುತ್ತದೆ. ಉಪ್ಪನ್ನು ಬಳಸುವುದರಿಂದ ಇದನ್ನು ಕೂಡ ಕಡಿಮೆ ಮಾಡುತ್ತದೆ. ಆದರೆ ಒಣ ಚರ್ಮ ಇರುವವರು ಉಪ್ಪನ್ನು ಹೆಚ್ಚು ಬಳಸಬಾರದು ಇದರಿಂದ ಚರ್ಮ ಮತ್ತಷ್ಟು ಒಣಗುತ್ತದೆ.

ಇನ್ನು ವಿನೆಗರ್ ಬಳಕೆ ಇದರಲ್ಲಿ ಸಿಟ್ರಿಕ್ ಆಸಿಡ್ ಹೆಚ್ಚು ಇರುವುದರಿಂದ ಹೆನನ್ನು ಹೋಗಲಾಡಿಸಲು ಸಂಪೂರ್ಣ ಸಹಾಯ ಮಾಡುತ್ತದೆ. ಹಾಗಾಗಿ ಇವೆರಡನ್ನೂ ಸೇರಿಸಿ ಹಚ್ಚುವುದರಿಂದ ನಮ್ಮ ತಲೆಯಲ್ಲಿ ಇರುವ ಹೆಣಿಗೆ ಉಸಿರಾಡಲು ಕಷ್ಟ ಆಗತ್ತೆ ಇದರಿಂದ ಅವು ಅಲ್ಲೇ ಸತ್ತುಹೋಗುತ್ತವೆ. ಈ ನೀರನ್ನು ಚೆನ್ನಾಗಿ ಹಚ್ಚುವುದರಿಂದ ಚೆನ್ನಾಗಿ ಒಣಗಲು ಬಿಡಬೇಕು. ನಂತರ ತಲೆಗೆ ಆಲಿವ್ ಎಣ್ಣೆಯನ್ನ ಹಚ್ಚಿ ಎರಡು ಗಂಟೆಗಳ ಕಾಲ ಹಾಗೆ ಬಿಡಬೇಕು. ಎರಡು ಗಂಟೆಗಳ ನಂತರ ಸ್ನಾನ ಮಾಡುವ ಮೊದಲು ಒಮ್ಮೆ ತಲೆಯನ್ನ ಚೆನ್ನಾಗಿ ಬಾಚಿಕೊಳ್ಳಬೇಕು. ಇದರಿಂದ ಸತ್ತ ಹೇನುಗಳೆಲ್ಲ ಹೊರಗೆ ಬರುತ್ತವೆ. ನಂತರ ಹರ್ಬಲ್ ಶಾಂಪೂ ಬಳಸಿ ತಲೆಗೆ ಸ್ನಾನ ಮಾಡಿಕೊಳ್ಳಬೇಕು. ಇದನ್ನ ವಾರದಲ್ಲಿ ಎರಡು ಬಾರಿ ಆದರೂ ಮಾಡಿಕೊಳ್ಳಬೇಕು. ಇದರಿಂದ ತಲೆಯ ಹೇನು ಸಂಪೂರ್ಣವಾಗಿ ಇನ್ನೆಂದೂ ಬರದಂತೆ ಮಾಡುತ್ತದೆ.

Leave A Reply

Your email address will not be published.

error: Content is protected !!