ತಲೆ ಕೂದಲು ಉದುರುವುದನ್ನು ತಕ್ಷಣವೇ ನಿವಾರಿಸುವ ಮನೆಮದ್ದುಗಳಿವು

ಸಾಮಾನ್ಯವಾಗಿ ತಲೆಕೂದಲು ಉದುರುವಂತ ಸಮಸ್ಯೆಗಳಿಗೆ ಹಲವು ಪರಿಹಾರ ಮಾರ್ಗಗಳಿವೆ, ಅವುಗಳಲ್ಲಿ ಒಂದಿಸತು ಈ ಮೂಲಕ ತಿಳಿದುಕೊಳ್ಳೋಣ. ತಲೆಕೂದಲು ಉದುರಲು ಹಲವು ಕಾರಣಗಳಿವೆ ಮಾನಸಿಕ ಒತ್ತಡ ದೈಕ ಒತ್ತಡ ಹಾಗೂ ಪೌಷ್ಟಿಕಾಂಶದ ಕೊರತೆ ಹೀಗೆ ಅನೇಕ ಕಾರಣಗಳಿಂದ ತಲೆಕೂದಲು ಉದುರುವ ಸಂಭವ ಹೆಚ್ಚು. ಇದಕ್ಕೆ ಪರಿಹಾರ ಮಾರ್ಗಗಳು ಯಾವುವು ಅನ್ನೋದನ್ನ ತಿಳಿದುಕೊಳ್ಳೋಣ.

ತಲೆಕೂದಲಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚುತ್ತಿರಬೇಕು ಇದರಿಂದ ಕೂಡ ತಲೆಕೂದ ಉದುರುವ ಸಮಸ್ಯೆ ಕಡಿಮೆಯಾಗುತ್ತದೆ, ರಾತ್ರಿ ಮಲಗುವಾಗ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ತಲೆಗೆ ಹಚ್ಚಿ ಬುಡದಿಂದ ನಯವಾಗಿ ತಿಕ್ಕಬೇಕು.

ಕೂದಲು ಉದುರುವುದನ್ನು ತಡೆಯಲು ಸೋಫ್ಮ್ಯಾಗಿ ಬೆಕಾಯಬೇಕಾದರೆ ದಾಸವಾಳದ ಹೂವಿನ ರಸವನ್ನು ಕೊಬ್ಬರಿ ಎಣ್ಣೆಯಲ್ಲಿ ಸೇರಿಸಿ ಬಿಸಿ ಮಾಡಿ ಪ್ರತಿ ನಿತ್ಯ ತಲೆಕೂದಲಿಗೆ ಚನ್ನಾಗಿ ಹಚ್ಚುಕೊಳ್ಳುತ್ತಿದ್ದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ, ಇದಲ್ಲದೆ ಕೂದಲು ನೀಳವಾಗಿಯೂ ಕಪ್ಪಾಗಿಯೂ ಬೆಳೆಯುತ್ತದೆ.

ಇನ್ನು ವಾರಕ್ಕೆ ೩ ರಿಂದ ೪ ಬಾರಿ ದಾಸವಾಳದ ಎಲೆಗಳಿಂದ ರಸವನ್ನು ತಗೆದು ಕೂದಲಿಗೆ ಹಚ್ಚಿಕೊಂಡು ಚನ್ನಾಗಿ ತಿಕ್ಕಿ ಅರ್ಧ ಗಂಟೆಯ ನಂತರ ತಲೆ ಸ್ನಾನ ಮಾಡುವುದರಿಂದ ಕೂದಲು ಚನ್ನಾಗಿ ಬೆಳೆಯುವುದು. ಅಷ್ಟೇ ಅಲ್ಲದೆ ಒಣಗಿದ ಕರಬೇವು ನೆಳ್ಳುಕಾಯಿ ಇವುಗಳನ್ನು ಬಿಸಿಲಿನಲ್ಲಿ ಚನ್ನಾಗಿ ಒಣಗಿಸಿ ಪುಡಿಮಾಡಿ, ಕೊಬ್ಬರಿ ಎಣ್ಣೆಯಲ್ಲಿ ಬೆರಸಿ ಪ್ರತಿ ನಿತ್ಯ ತಲೆಗೆ ಹಚ್ಚಿಕೊಳ್ಳುತ್ತಿದ್ದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.

ಕೂದಲಿನ ಕಾಂತಿಯನ್ನು ಹೆಚ್ಚಿಸಲು ನೆಲ್ಲಿಯ ಚೆಟ್ಟನ್ನು ಹಿಂದಿನ ರಾತ್ರಿ ನೀರಿನಲ್ಲಿ ನೆನೆಹಾಕಿ ಮಾರನೆಯ ದಿನ ಚನ್ನಾಗಿ ಕಿವುಚಿ ಆ ನೀರಿನಲ್ಲಿ ತಲೆಕೂದಲನ್ನು ತೊಳೆದರೆ ಕೂದಲಿನ ಕಾಂತಿ ವೃದ್ಧಿಯಾಗುವುದು.

Leave a Comment

error: Content is protected !!