ರೆಸಪಿ: ಚಿಕನ್ ಬಿರಿಯಾನಿ ಮಾಡುವ ಅತಿ ಸುಲಭ ವಿಧಾನ

ಚಿಕನ್ ಬಿರಿಯಾನಿಯನ್ನು ಸುಮಾರು ಸಸ್ಯಾಹಾರಿಗಳಲ್ಲದವರೆಲ್ಲರೂ ತಿಂದಿರುತ್ತಾರೆ. ಇನ್ನು ಮಾಂಸಾಹಾರಿಗಳಂತೂ ಹಸಿವಾದರೆ ಹೋಗುವುದೇ ನಾನ್-ವೆಜ್ ಹೋಟೆಲ್ ಗಳಿಗೆ. ನಾನ್ ವೆಜ್ ಹೋಟೆಲ್ ಗಳಿಗೆ ಹೋಗಿ ಹೆಚ್ಚಾಗಿ ಒರ್ಡರ್ ಮಾಡುವುದೇ ಚಿಕನ್ ಬಿರಿಯಾನಿ. ಹಣ ಕೊಟ್ಟು ಸ್ವಚ್ಛವಿಲ್ಲದೆ ಹೋಟೆಲ್ ಗಳಲ್ಲಿ ಮಾಡಿದ ಚಿಕನ್ ಬಿರಿಯಾನಿ ತಿನ್ನುವುದರ ಬದಲು ಮನೆಯಲ್ಲಿ ಮಾಡಿ ತಿನ್ನುವುದು ಒಳ್ಳೆಯದು. ನಾವು ಇಲ್ಲಿ ಚಿಕನ್ ಬಿರಿಯಾನಿ ಮಾಡುವ ವಿಧಾನವನ್ನು ನೋಡೋಣ.

ಮೊದಲು ಅರ್ಧ ಕೆಜಿ ಚಿಕನ್ ನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.ಅದನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಅಚ್ಚಖಾರದ ಪುಡಿ, ಗರಂ ಮಸಾಲಾ, ದನಿಯಾಪುಡಿ,ಅರಿಶಿನ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಇವುಗಳನ್ನು ಅರ್ಧ ಟೀ ಸ್ಪೂನ್ ನಷ್ಟು ಹಾಕಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅದಕ್ಕೆ ನಿಂಬೆರಸ ಸೇರಿಸಬೇಕು. ನಂತರ ಸುಮಾರು ಅರ್ಧ ಕಪ್ ನಷ್ಟು ಮೊಸರು ಹಾಕಿಕೊಳ್ಳಬೇಕು.ಎಲ್ಲವನ್ನೂ ಚೆನ್ನಾಗಿ ಕೈಯಲ್ಲಿ ಮಿಕ್ಸ್ ಮಾಡಬೇಕು.ನಂತರ ಅದನ್ನು ಪಕ್ಕಕ್ಕಿಡಬೇಕು.

ಗ್ಯಾಸ್ ಒನ್ ಮಾಡಿ ಕುಕ್ಕರ್ ಪಾತ್ರೆಯನ್ನು ಇಟ್ಟು ಅದಕ್ಕೆ 2ಸ್ಪೂನ್ ತುಪ್ಪ ಹಾಕಿಕೊಳ್ಳಬೇಕು.ನಂತರ ಎಣ್ಣೆ ಹಾಕಿಕೊಳ್ಳಬೇಕು. ತುಪ್ಪ ಎಣ್ಣೆ ಸರಿಯಾಗಿ ಬಿಸಿಯಾದ ನಂತರ ಚಕ್ಕೆ, ಲವಂಗ,ಫಲಾವ್ ಎಲೆ,ಕಾಳುಮೆಣಸು,ಏಲಕ್ಕಿ,ಮರಾಠಿಮೊಗ್ಗು ನಿಮ್ಮ ಅಂದಾಜಿಗೆ ಹಾಕಿ ಎಣ್ಣೆಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ 4ಹಸಿಮೆಣಸಿನ ಚೂರುಗಳು, ಉದ್ದುದ್ದಗೆ ಹೆಚ್ಚಿದ ಈರುಳ್ಳಿ ಹಾಕಿ ಕಲಸಬೇಕು.

ಈರುಳ್ಳಿ ಬಂಗಾರದ ಬಣ್ಣಕ್ಕೆ ಬಂದ ನಂತರ ಮೊದಲು ಕಲಸಿಟ್ಟ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.ನಂತರ ಸ್ವಲ್ಪ ನೀರು ಹಾಕಿ ಮತ್ತೆ ಮಿಕ್ಸ್ ಮಾಡಿ ಕುಕ್ಕರಿನಲ್ಲಿ ಒಂದು ವಿಜಲ್ ಹೊಡೆಸಬೇಕು.

ನಂತರ ಕುಕ್ಕರ್ ಮುಚ್ಚಳ ತೆಗೆದು ಮತ್ತೆ ಒಲೆಯ ಮೇಲಿಟ್ಟು ಚಿಕನ್ ಬಿರಿಯಾನಿ ಪೌಡರ್ ನ್ನು ಒಂದು ಟೀ ಸ್ಪೂನ್ ನಷ್ಟು ಹಾಕಬೇಕು. ನಂತರ ಒಂದು ಕಪ್ ನಷ್ಟು ಅಕ್ಕಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅಕ್ಕಿಯ 2ಪಟ್ಟು ನೀರು ಹಾಕಬೇಕು. ಜಾಸ್ತಿ ನೀರು ಹಾಕಬಾರದು. ನಂತರ ಸ್ವಲ್ಪ ಪುದಿನಾ ಸೊಪ್ಪು,ಉಪ್ಪು,ಸ್ವಲ್ಪ ನಿಂಬೆರಸ ಹಾಕಬೇಕು.ನಂತರ ಕುಕ್ಕರ್ ನಲ್ಲಿ 2ವಿಜಲ್ ಹೊಡೆಸಬೇಕು. ಕುಕ್ಕರ್ ತಣ್ಣಗಾದ ನಂತರ ಬಿಸಿ ಬಿಸಿಯಾದ ಚಿಕನ್ ಬಿರಿಯಾನಿ ರೆಡಿ.

Leave a Comment

error: Content is protected !!