ಮನೆಯಲ್ಲೇ ಹನಿ ಕೇಕ್ ಮಾಡುವ ಸುಲಭ ವಿಧಾನ

ಕೇಕ್ ಯಾರಿಗೆ ತಾನೇ ಇಷ್ಟ ಆಗಲ್ಲಾ ಎಲ್ಲರಿಗೂ ಕೇಕ್ ಅಂದ್ರೆ ತುಂಬಾ ಇಷ್ಟ ಪಡ್ತಾರೆ ಆದ್ರೆ ಕೆಲವರಿಗೆ ಬೇಕರಿಯಲ್ಲಿ ಮಾಡಿದ ಕೇಕ್ ತಿನ್ನೋಕೆ ಇಷ್ಟ ಪದಲ್ಲ ಅಥವಾ ಮೊಟ್ಟೆ ಹಾಕಿದ ಕೇಕ್ ಕೂಡ ತಿನ್ನೋಕೆ ಇಷ್ಟ ಆಗಲ್ಲಾ. ಅಂಥವರಿಗೆ ಅಂತಾನೆ ಸುಲಭವಾಗಿ ಮನೆಯಲ್ಲಿಯೇ ಮೊಟ್ಟೆ ಬಳಸದೆ ಓವೆನ್ ಇಲ್ಲದೆ ಬಾಣಲೆಯಲ್ಲಿ ಹನಿ ಕೇಕ್ ಮಾಡೋದು ಹೇಗೆ ಅಂತ ನೋಡೋಣ.

ಹನಿ ಕೇಕ್ ಮಾಡೋಕೆ ಬೇಕಾದ ಸಾಮಗ್ರಿಗಳು :– ಕಾಲು ಕಪ್ ಅಡುಗೆ ಎಣ್ಣೆ, ಕಾಲು ಕಪ್ ಮೊಸರು ,ಅರ್ಧ ಕಪ್ ಸಕ್ಕರೆ ಪೌಡರ್, ಒಂದು ಕಪ್ ಮೈದ ಹಿಟ್ಟು, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್
ಅರ್ಧಕಪ್ ಹಾಲು, ವೆನಿಲ್ಲಾ ಎಸೆನ್ಸ್, ಉಪ್ಪು

ಸಿರಪ್ ಗೆ :– ಸಕ್ಕರೆ, ಜೇನುತುಪ್ಪ, ಫ್ರೂಟ್ ಜಾಮ್
ಮಾಡುವ ವಿಧಾನ:- ಮೊದಲು ಒಂದು ಕೇಕ್ ಪ್ಯಾನ್ ಗೆ ಅರ್ಧ ಸ್ಪೂನ್ ಎಣ್ಣೆ ಹಾಕಿ ಗ್ರೀಸ್ ಮಾಡಿಕೊಂಡು ಇಟ್ಟುಕೊಳ್ಳಬೇಕು. ಒಂದು ಬೌಲ್ ಗೆ ಕಾಲು ಕಪ್ ಅಡುಗೆ ಎಣ್ಣೆ ಮತ್ತು ಕಾಲು ಕಪ್ ಮೊಸರು ಸೇರಿಸಿ ಮಿಕ್ಸ್ ಮಾಡಿಕೊಂಡು, ಅರ್ಧ ಕಪ್ ಸಕ್ಕರೆ ಪೌಡರ್ ಸೇರಿಸಿ ಮಿಕ್ಸ್ ಮಾಡಿ ಅದಕ್ಕೆ ಒಂದು ಕಪ್ ಅಷ್ಟು ಮೈದ ಹಿಟ್ಟು ಹರಡಿ ಹಿಡಿದುಕೊಂಡು ಹಾಕಬೇಕು. ನಂತರ ಅರ್ಧ ಟಿ ಸ್ಪೂನ್ ಬೇಕಿಂಗ್ ಸೋಡಾ ಮತ್ತು ಮುಕ್ಕಾಲು ಟಿ ಸ್ಪೂನ್ ಬೇಕಿಂಗ್ ಪೌಡರ್ ಹಾಗೂ ಚಿಟಕಿ ಉಪ್ಪು ಹಾಕಿ ಎಲ್ಲವನ್ನೂ ಜರಡಿ ಹಿಡಿದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ನಂತರ ಅರ್ಧ ಕಪ್ ಕಾಯಿಸಿ ತಣ್ಣಗಾದ ಹಾಲನ್ನು ಸ್ವಲ್ಪ ಸ್ವಲ್ಪ ಸೇರಿಸಿ ಮಿಕ್ಸ್ ಮಾಡಿಕೊಂಡು ಕೊನೆಯಲ್ಲಿ ವೆನಿಲ್ಲಾ ಎಸೆನ್ಸ್ ಸೇರಿಸಿ ಮಿಕ್ಸ್ ಮಾಡಿ ಇಡ್ಲಿ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ.

ನಂತರ ಎಣ್ಣೆ ಸವರಿದ ಪ್ಯಾನ್ ಗೆ ಹಿಟ್ಟು ಹಾಕಿ ಎರಡು ಸಲ ಪ್ಯಾನ್ ಅನ್ನು ನೆಲಕ್ಕೂ ಕುಟ್ಟಿಕೊಳ್ಳಬೇಕು. ನಂತರ ಒಂದು ಬಾಣಲೆಯನ್ನು ಸ್ಟೌ ಮೇಲೆ ಇಟ್ಟು ಬಾಣಲೆ ಮಧ್ಯದಲ್ಲಿ ಒಂದು ಸ್ಟ್ಯಾಂಡ್ ಇಟ್ಟು ಮುಚ್ಚಳ ಮುಚ್ಚಿ ೧೦ ನಿಮಿಷ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು. ಬಾಣಲೆ ಬಿಸಿ ಆದ ನಂತರ ಕೇಕ್ ಪ್ಯಾನ್ ಅನ್ನು ಮಧ್ಯದಲ್ಲಿ ಇತ್ತು ಮತ್ತೆ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ೪೦/೪೫ ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು. ನಂತರ ಒಂದು ಟೂತ್ ಪಿಕ್ ಸಹಾಯದಿಂದ ಚುಚ್ಚಿ ನೋಡಿಕೊಂಡು‌ ಸ್ಟೌ ಆಫಾ ಮಾಡಿ ಅರ್ಧ ಗಂಟೆ ತಣಿಯಲು ಬಿಡಬೇಕು‌. ಅರ್ಧ ಗಂಟೆಯ ನಂತರ ಒಂದು ಚಾಕುವಿನಿಂದ ಸೈಡ್ ಬಿಡಿಸಿಕೊಂಡು ಅದನ್ನ ಒಂದು ಪ್ಲೇಟಿಗೆ ತೆಗೆದುಕೊಳ್ಳಬೇಕು.

ಹನಿ ಸಿರಪ್ ಗೆ ಒಂದೂ ಪ್ಯಾನ್ ಗೆ ೨ಸ್ಪೂನ್ ಸಕ್ಕರೆ ಮತ್ತು ಅರ್ಧ ಲೋಟ ನೀರು ಸೇರಿಸಿ ಸಕ್ಕರೆ ಕರಗಿದ ನಂತರ ೪ ಟಿ ಸ್ಪೂನ್ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಕುದಿ ತರಿಸಿ ಸ್ಟೌ ಆಫ್ ಮಾಡಿಕೊಳ್ಳಬೇಕು‌. ಕೇಕನ್ನು ಮಧ್ಯದಲ್ಲಿ ಟೂತ್ ಪಿಕ್ ಸಹಾಯದಿಂದ ಅಲ್ಲಲ್ಲಿ ಚುಚ್ಚಿಕೊಂಡು ಸಿರಪ್ ಬಿಸಿ ಇರುವಾಗಲೇ ಕೇಕ್ ಮೇಲೆ ಹಾಕಿ. ಮತ್ತೆ ಸಿರಪ್ ಮಾಡಿಕೊಂಡ ಪ್ಯಾನ್ ಗೆ ಒಂದು ಟಿ ಸ್ಪೂನ್ ಸಿರಪ್ ಹಾಕಿಕೊಂಡು ಅದಕ್ಕೆ ೨ ಸ್ಪೂನ್ ಮಿಕ್ಸ್ಡ್ ಫ್ರೂಟ್ ಜಾಮ್ ಸೇರಿಸಿ ಸಣ್ಣ ಉರಿಯಲ್ಲಿ ಜಾಮ್ ಕರಗಿಸಿಕೊಂಡು ಆಫ್ ಮಾಡಿ ಜಾಮ್ ಬಿಸಿ ಇರುವಾಗಲೇ ಕೇಕ್ ಮೇಲೆ ಹರಡಿ ಕೊನೆಯಲ್ಲಿ, ಬೇಕಿದ್ರೆ ತೆಂಗಿನಕಾಯಿಯ ತುರಿಯನ್ನ ಉದುರಿಸಬಹುದು‌. ಇಷ್ಟು ಮಾಡಿದ್ರೆ ಸುಲಭವಾಗಿ ಬೇಕರಿ ಶೈಲಿಯ ಮೊಟ್ಟೆ ರಹಿತ ಓವೇನ್ ಇಲ್ಲದೆಯೇ ಮನೆಯಲ್ಲೇ ಮಾಡಿದ ಹನಿ ಕೇಕ್ ರೆಡಿ.

Leave A Reply

Your email address will not be published.

error: Content is protected !!