
ಕೆಮ್ಮು ಶೀತ ಕಫ, ಜ್ವರಕ್ಕೆ ಅಂಗೈಯಲ್ಲೇ ಇದೆ ಮದ್ದು
ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯನ್ನ ಎಲ್ಲರೂ ಕೇಳಿರುತ್ತೇವೆ. ಆರೋಗ್ಯ ಎಂದರೆ ಯಾವುದೇ ರೋಗ ಬಾಧೆ ಇಲ್ಲದೆ ಇರುವುದರ ಹೊರತು, ಸಂಪೂರ್ಣವಾಗಿ ದೈಹಿಕ ಮತ್ತು ಮಾನಸಿಕ ಸುಸ್ಥಿತಿ ಆಗಿದೆ. ಅದರಂತೆ ನಮ್ಮ ಆರೋಗ್ಯ ಚೆನ್ನಾಗಿ ಇದ್ರೆ ಮಾತ್ರ ನಾವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸರಿಯಾಗಿ ಇರಲು ಸಾಧ್ಯ. ನಮ್ಮ ಆರೋಗ್ಯವೇ ಸರಿಬಿಲ್ಲದ ಮೇಲೆ ಹೊರಗಿನ ಪ್ರಪಂಚದಲ್ಲಿ ನೆಮ್ಮದಿಯೇ ಇಲ್ಲದಂತೆ ಆಗುತ್ತದೆ. ಹಾಗಾಗಿ ನಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತವಾದ ದಿನಚರಿ ಅತ್ಯಗತ್ಯ. ಇವುಗಳಲ್ಲಿ ಯೋಗ, ಪ್ರಾಣಾಯಾಮ ನಿಗಧಿತ ಪ್ರಮಾಣದ ಆಹಾರ ಇವುಗಳ ಕಡೆ ಗಮನ ಹರಿಸಬೇಕು. ಆದಾಗ್ಯೂ ಸಹ ಮಾನವನಿಗೆ ಆದಷ್ಟು ಬೇಗ ತಂಡಿ ಕೆಮ್ಮು ಜ್ವರದಂತಹ ಕೆಲವೊಂದು ರೋಗಗಳು ಬಹಳ ಬೇಗನೆ ಬರುತ್ತವೆ. ಅದಕ್ಕೆಲ್ಲ ಸುಲಭವಾದ ಮನೆ ಮದ್ದು ಇಲ್ಲಿದೆ. ಪ್ರತಿಯೊಂದು ಚಿಕ್ಕ ಪುಟ್ಟ ಕಾಯಿಲೆಗಳಿಗೂ ವೈದ್ಯರ ಬಳಿ ಹೋಗುವುದು ಸಹಜ ಆದರೆ ಅದಕ್ಕೂ ಮುನ್ನ ನಮ್ಮ ಮನೆಯಲ್ಲಿಯೇ ಸಿಗುವ ಈ ವಸ್ತುಗಳಿಂದ ಸಹ ಒಮ್ಮೆ ಔಷಧಿ ಉಪಚಾರಗಳನ್ನು ಮಾಡಿ ನೋಡೋಣ. ಇಂದು ನಿಮಗೆ ಶೀತ, ಗಂಟಲು ನೋವು ಹಾಗೂ ಕೆಮ್ಮು ಇವುಗಳನ್ನ ಕಡಿಮೆ ಮಾಡಿಕೊಳ್ಳೋಕೆ ಒಂದು ಸುಲಭವಾದ ಜ್ಯೂಸ್ ಹೇಗೆ ಮಾಡೋದು ಅಂತ ತಿಳಿಸಿಕೊಡ್ತೀವಿ.
ಈ ಒಂದು ಪಾನೀಯವನ್ನು ಕುಡಿಯೋದರಿಂದ ದೇಹದ ಉಷ್ಣಾಂಶ ಬೇಗ ಕಡಿಮೆ ಆಗತ್ತೆ ದೇಹಕ್ಕೂ ತುಂಬಾ ಒಳ್ಳೆಯದು. ಇದರಿಂದ ಯಾವುದೇ ಅಡ್ಡ ಪರಿಣಾಮಗಳೂ ಇಲ್ಲ ಹಾಗಾಗಿ ಚಿಕ್ಕ ಮಕ್ಕಳಿಗೂ ಸಹ ಕೊಡಬಹುದು. ಇದನ್ನ ಹೇಗೆ ಮಾಡೋದು ಅಂದ್ರೆ
ಒಂದು ಪಾತ್ರೆಗೆ ಎರಡು ಲೋಟ ನೀರು, ಅರ್ಧ ಕಪ್ ಅಷ್ಟು ಪುಡಿ ಮಾಡಿದ ಬೆಲ್ಲ ಸಿಹಿಗೆ ಅನುಗುಣವಾಗಿ. ಬೆಲ್ಲ ಬೇಡವಾದರೆ ಸಕ್ಕರೆ ಬಳಸಬಹುದು, ಬೆಲ್ಲವನ್ನು ಚೆನ್ನಾಗಿ ನೀರಲ್ಲಿ ಕರಗಿಸಿ. ನಂತರ ಇನ್ನೊಂದು ಬೌಲ್ ನಲ್ಲಿ ಒಂದು ಸ್ಪೂನ್ ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿಕೊಳ್ಳಿ. (ಇದು ಶೀತ, ಖಫ ಕಟ್ಟಿದ್ದು ಇದ್ದರೆ ಸಹ ತೆಗೆಯುತ್ತದೆ ಜೊತೆಗೆ ದೇಹದ ಉಷ್ಣತೆಯನ್ನು ಸಹ ಬೇಗ ಕಡಿಮೆ ಮಾಡುತ್ತದೆ.) ನಂತರ ಕರಗಿದ ಬೆಲ್ಲದ ನೀರಿಗೆ ಅರ್ಧ ಇಂಚು ಶುಂಠಿಯನ್ನು ತುರಿದು ಹಾಕಿ.

ನಂತರ ಒಂದು ನಿಂಬೆ ಹಣ್ಣಿನ ರಸ ಹಾಕಿ, ಹುಳಿ ಜಾಸ್ತಿ ಬೇಕಿದ್ರೆ ತೆಗೆದುಕೊಂಡ ನೀರಿಗೆ ಅನುಗುಣವಾಗಿ ನಿಂಬೆ ಹಣ್ಣಿನ ರಸವನ್ನು ಹಾಕಿ. ನಂತರ ಕಾಲು ಸ್ಪೂನ್ ಅಷ್ಟು ಯೇಲಕ್ಕಿ ಪುಡಿ ಹಾಗೂ ಐದು ಪುದೀನಾ ಎಳೆಯನ್ನ ಕೈಯಲ್ಲಿ ಚೂರು ಮಾಡಿ ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ ಎರಡು ನಿಮಿಷ ಬಿಟ್ಟು ಅದನ್ನು ಶೋಧಿಸಿಕೊಳ್ಳಿ. ನಂತರ ಅದಕ್ಕೆ ನೆನೆಸಿಟ್ಟ ಕಾಮಕಸ್ತೂರಿ ಬೀಜವನ್ನು ಸೇರಿಸಿ ಕುದಿಯಲು ಕೊಡಿ.ಈ ಒಂದು ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಉಷ್ಣ ಪ್ರಕೃತಿಯವರೀಗೆ ಇದು ತುಂಬಾನೇ ಉಪಯೋಗಕಾರಿ