
ಮನೆಯಲ್ಲಿ ಮನಿ ಪ್ಲಾಂಟ್ ಗಿಡ ಬೆಳೆಸುವ ಸುಲಭ ವಿಧಾನ
ಒಂದು ಮನೆ ಅಂತ ಅಂದಮೇಲೆ ಮನೆಯಲ್ಲಿ ಶಾಂತಿ, ಸಮೃದ್ಧಿ, ನೆಮ್ಮದಿ ಇರಬೇಕಾಗುತ್ತದೆ. ಹಾಗಾಗಿ ಮನೆಯಲ್ಲಿ ಏನಾದ್ರೂ ಹಸಿರು ಗಿಡಗಳನ್ನ ಬೆಳೆಸಿ ತಂಪಾದ ವಾತಾವರಣ ಇರಲಿ ಅಂತ ಬಯಸ್ತಿವಿ ಆ ಗಿಡಗಳಲ್ಲಿ ಹೆಚ್ಚಿನದಾಗಿ ಮನಿ ಪ್ಲಾಂಟ್. ಇದರ ಬಗ್ಗೆ ನಾವು ಹೆಚ್ಚು ಕಾಳಜಿ ಮಾಡೋದು ಬೇಕಿಲ್ಲ. ಯಾಕೆಂದ್ರೆ ನಾವು ಎಲ್ಲಿ ಬೇಳೆಸುತ್ತಿವಿ ಅಲ್ಲಿ ಅದು ಸರಿಯಾಗಿ ಬೇಳೆಯತ್ತೆ. ಹೆಚ್ಚು ಬಿಸಿಲು ಬೇಡ ನೀರು ಬೇಡ. ಸ್ವಲ್ಪ ನೀರು ಸ್ವಲ್ಪ ನೀರು ಇದ್ರೆ ಸಾಕು. ಇದು ಮನೆಯ ಲಕ್ಷಣವನ್ನು ಹೆಚ್ಚಿಸುತ್ತದೆ ಅಲ್ಲದೆ ಮನಸ್ಸಿಗೆ ಶಾಂತಿಯನ್ನು ಸಹ ಕೊಡುತ್ತದೆ. ಕೆಲವರು ಮನಿ ಪ್ಲಾಂಟ್ ಮನೆಯಲ್ಲಿ ಇದ್ರೆ ಆ ಮನೆಯ ಸಮೃದ್ಧಿ ಹೆಚ್ಚು ಆಗತ್ತೆ ಅಂತ ಹೇಳ್ತಾರೆ.
ನಾವು ಈ ಮನಿ ಪ್ಲಾಂಟ್ ಮನೆಯ ಒಳಗೂ ಹೊರಗೂ ಎರಡು ಕಡೆ ಬೆಳೆಯಬಹುದು. ಇತ್ತೀಚಿಗೆ ಈ ಗಿಡವನ್ನು ತುಂಬಾ ಅಮೂಲ್ಯವಾದ ಗಿಡ ಅಂತ ಎಲ್ಲರೂ ಬೆಳೆಸುತ್ತಾ ಇದ್ದಾರೆ. ಕಾರಣ ಈ ಗಿಡದಿಂದ ಹೆಚ್ಚು ಹೆಚ್ಚು ಹಣ ಸಿಗತ್ತೆ ಅಂತ ಅಷ್ಟೇ. ಈ ತರ ಮನಿ ಪ್ಲಾಂಟ್ ಗಿಡಗಳನ್ನ ಮನೆಯ ಆಗ್ನೇಯ ದಿಕ್ಕಿಗೆ ಇಡುವುದರಿಂದ ಹಣದ ಸಮಸ್ಯೆ ಉಂಟಾಗುವುದಿಲ್ಲ. ಇದು ಒಂದು ಶುಭ ಸೂಚಕ ಇದರಿಂದ ಹಣ ವೃದ್ಧಿ ಆಗತ್ತೆ ಅಂತೆಲ್ಲ ಹೇಳ್ತಾರೆ. ಇಂತಹ ಮನಿ ಪ್ಲಾಂಟ್ ಅಣ್ಣಾ ನಾವು ಮನೆಯಲ್ಲಿಯೇ ಒಂದೇ ಎಲೆಯಲ್ಲಿ ಬೆಳೆಸಬಹುದು.
ಮನಿ ಪ್ಲಾಂಟ್ ಅನ್ನು ಒಂದೇ ಎಲೆ ಇಂದಲು ಬೆಳೆಸಬಹುದು ಅಥವಾ ಕೊಂಬೆಗಳಿಂದಲು ಬೆಳೆಸಬಹುದು. ಒಂದು ಎಲೆ ಕೆಳಗಡೆ ಒಂದು ಪುಟ್ಟದಾದ ಬೇರು ಇರತ್ತೆ ಆ ಬೇರನ್ನ ಸರಿಯಾಗಿ ನೋಡಿಕೊಂಡು ಬೇರು ಎಲೆಯ ಜೊತೆ ಬರುವಂತೆ ಸರಿಯಾಗಿ ಮಧ್ಯದಲ್ಲಿ ಕಟ್ ಮಾಡಿಕೊಳ್ಳಬೇಕು. ಬೇರಿನ ಸಮೇತ ಕಟ್ ಮಾಡಿದ ಎಲೆಯನ್ನು ಒಂದು ಲೋಟದಲ್ಲಿ
ಮುಕ್ಕಾಲು ಭಾಗ ನೀರು ಹಾಕಿ ಆ ನೀರಿನ ಲೋಟದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಎರಡೇ ವಾರದಲ್ಲಿ ಬೇರು ಮತ್ತಷ್ಟು ದೊಡ್ಡದಾಗಿ ಬೆಳೆಯುತ್ತೆ. ನಿಧಾನವಾಗಿ ಬೇರು ಬಿಟ್ಟಕೊಂಡು ಅಲ್ಲೇ ಮತ್ತೆ ಎಲೆಗಳು ಸಹ ಆಗತ್ತೆ . ಹದಿನೈದು ದಿನಗಳ ನಂತರ, ಬೇರು ಬಂದಂತಹ ಎಲೆಗಳನ್ನು ಮಣ್ಣು ತುಂಬಿರುವ ಪಾಟ್ ಗಳಲ್ಲಿ ನೆಡಬೇಕು. ಹಾಗೆ ಸರಿಯಾಗಿ ಮಣ್ಣನ್ನು ಮುಚ್ಚಿಡಬೇಕು. ಇದನ್ನ ಮನೆಯ ಒಳಗೆ ಕಿಟಕಿ ಮೇಲೆ ಶೋ ಕೇಸ್ ಅಲ್ಲಿ ಅಥವಾ ಮೆಟ್ಟಿಲುಗಳ ಮೇಲೆ / ಮನೆಯ ಹೊರಗೂ ಸಹ ಬೆಳೆಸಬಹುದು. ನಂತರದ ದಿನಗಳಲ್ಲಿ ಮಣ್ಣಿನಲ್ಲಿ ಇಟ್ಟಮೇಲೆ ಮತ್ತಷ್ಟು ಎಲೆಗಳು ಬೆಳೆದು ಬಳ್ಳಿ ಆಗತ್ತೆ.
ಮನಿ ಪ್ಲಾಂಟ್ ಬೆಳೆಸೋಕೆ ಪಾಟ್ ಹೇಗೆ ತಯಾರಿ ಮಾಡೋದು? ಪಾಟ್ ಗೆ ಮೊದಲು ಒಂದೆರಡು ಕಲ್ಲು ಹಾಕಿ ನಂತರ ಮಣ್ಣನ್ನು ಹಾಕಬೇಕು. ಮಣ್ಣಿನ ಮೇಲೆ ತೆಂಗಿನ ಕಾಯಿಯ ನಾರು ಅದನ್ನ ಸ್ವಲ್ಪ ಚಿಕ್ಕ ಚಿಕ್ಕದಾಗಿ ಕಟ್ ಮಾಡಿ ಹಾಕಿ ಮಣ್ಣಿನ ಜೊತೆ ಸರಿಯಾಗಿ ಮಿಕ್ಸ್ ಮಾಡಬೇಕು. ಆಮೇಲೆ ನೀರು ಹಾಕ್ಬೇಕು. ಹೀಗೆ ಮಾಡಿದರಂತೆ ತೆಂಗಿನ ನಾನು ಕ್ರಮೇಣವಾಗಿ ಗೊಬ್ಬರ ಸಹಾ ಆಗತ್ತೆ ಮತ್ತೆ ಮಣ್ಣಿನಲ್ಲಿ ಹೆಚ್ಚು ಕಾಲ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ ಹಾಗೂ ಮಣ್ಣು ಸಡಿಲವಾಗಿ ಇರೋಕೆ ಕೂಡ ಸಹಾಯ ಮಾಡತ್ತೆ. ಇದಕ್ಕೆ ನೀರು ಹಾಕಿ ೫ನಿಮಿಷ ಬಿಟ್ಟು ನಂತರ ಅದರಲ್ಲಿ ಮನಿ ಪ್ಲಾಂಟ್ ಎಲೆಗಳನ್ನು ನೆಡಬೇಕು.
ಆಮೇಲೆ ಅದಕ್ಕೆ ಒಂದು ಬೌಲ್ ನಲ್ಲಿ ನೀರು ತಗೊಂಡು ಅದಕ್ಕೆ ಮನೆಯಲ್ಲಿ ಬೆಳೆದ ಅಲೋವೆರಾ ತಗೊಂಡು ಸಣ್ಣದಾಗಿ ಕಟ್ ಮಾಡಿ ನೀರಿಗೆ ಹಾಕಿ ಕೈಯಲ್ಲಿ ಕಿವುಚಬೇಕು. ಅಲೋವೆರಾ ನೀರಲ್ಲಿ ಅದರ ರಸವನ್ನು ಬಿಟ್ಟ ಮೇಲೆ ಆ ನೀರನ್ನ ಒಂದು ಬಾಟಲ್ ನಲ್ಲಿ ಹಾಕಿ ಆ ನೀರನ್ನ ಮನಿ ಪ್ಲಾಂಟ್ ಗಳಿಗೆ ಸ್ಪ್ರೇ ಮೂಲಕ ನೀರನ್ನ ಕೊಡಬೇಕು. ಇದನ್ನ ಒಂದು ಬೂಸ್ಟ್ ಆಗಿ ಬಳಸಬಹುದು. ಹಾಗೆ ಈ ಮನಿ ಪ್ಲಾಂಟ್ ಗಳನ್ನಾ ಸ್ವಲ್ಪ ಬೆಳಕು ಬರುವ ಜಾಗದಲ್ಲಿ ಇಡಬೇಕು. ಇದರಿಂದ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಬೇಸಿಗೆ ಕಾಲದಲ್ಲಿ ಬಾಟಲ್ ಗಳಿಗೆ ನೀರನ್ನ ಹಾಕಿಕೊಂಡು ಎಲೆಗಳಿಗೆ ಸ್ಪ್ರೇ ಮಾಡುವುದರಿಂದ ಎಲೆಗಳು ಹಸಿರಾಗಿ ಇರತ್ತೆ. ಹೀಗೆ ಒಂದೇ ಮನಿ ಪ್ಲಾಂಟ್ ಎಲೆಯಿಂದ ಮನೆ ತುಂಬಾ ಗಿಡಗಳನ್ನು ಬೆಳೆಸಿಕೊಳ್ಳಬಹುದು.