
ಕಡಿಮೆ ಬಂಡವಾಳ ಹೆಚ್ಚು ಲಾಭ ನೀಡುವ ಈ ಮೆಹಂದಿ ಬಿಸಿನೆಸ್ ಬಗ್ಗೆ ತಿಳಿಯಿರಿ
ಮದುವೆ ಸಮಾರಂಭದಲ್ಲಿ ಮದರಂಗಿ ತನ್ನದೇ ಆದ ಮಹತ್ವವನ್ನು ಪಡೆದಿದೆ ಮದುಮಗಳ ಅಲಂಕಾರ ಮೆಹೆಂದಿ ಇಲ್ಲದೆ ಪೂರ್ಣ ವಾಗದು. ಇದು ಕೇವಲ ಮದುವೆ ಶುಭ ಸಮಾರಂಭಕ್ಕೆ ಮಾತ್ರವಲ್ಲ ಇದರಿಂದ ನಾವು ಕಡಿಮೆ ಹಣದಲ್ಲಿ ಬಿಸಿನೆಸ್ ಕೂಡಾ ಸ್ಟಾರ್ಟ್ ಮಾಡಬಹುದು ಅದು ಯಾವುದೇ ಮಷೀನ್ ಬಳಸದೆ ಸುಲಭವಾಗಿ ಸ್ವಂತ ಮನೆಯಲ್ಲಿಯೇ ಸ್ಟಾರ್ಟ್ ಮಾಡಬಹುದು ಹೇಗೆ ಎಂದು ಹೆಚ್ಚಿನ ಮಾಹಿತಿ ಯನ್ನು ತಿಳಿದುಕೊಳ್ಳೋಣ
ನೀವೆಲ್ಲರೂ ತಿಳಿದಿರುವ ಹಾಗೆ ಬಿಸಿನೆಸ್ ಅಂದ್ರೆ ಜಾಸ್ತಿ ಹಣ ಜಾಸ್ತಿ ಇನ್ವೆಸ್ಟ್ಮೆಂಟ್ ಮತ್ತು ಜಾಸ್ತಿ ಕೆಲಸ ದಿಂದಲೇ ಪ್ರಾರಂಭ ಮಾಡಬೇಕೆಂದು ಆದರೆ ಕಡಿಮೆ ಹಣದಲ್ಲಿ ನಾವು ಮನೆಯಲ್ಲಿಯೇ ಕುಳಿತು ಈ ಬಿಸಿನೆಸ್ ಅನ್ನು ಪ್ರಾರಂಭ ಮಾಡಬಹುದು ಜಾಸ್ತಿ ಪ್ರಾಫಿಟ್ ಅನ್ನು ಕೂಡ ಗಳಿಸಬಹುದು ಹೆಗೆಂದರೆ ಕೇವಲ 500 ರೂಪಾಯಿ ಯಲ್ಲಿ ಸ್ಟಾರ್ಟ್ ಮಾಡಿ ದಿನಕ್ಕೆ 2 ಸಾವಿರ ರೂಪಾಯಿಯ ವರೆಗೂ ಸಂಪಾದನೆ ಮಾಡಬಹುದು. ಮತ್ತು ಇದನ್ನು ತುಂಬಾ ಸುಲಭವಾಗಿ ತಯಾರಿಸ ಬಹುದು. ಮೊದಲಿಗೆ 110 ರೂಪಾಯಿ 1ಕೆಜಿ ಹೆನ್ನ ಪೌಡರ್ ಅನ್ನು ತೆಗೆದುಕೊಳ್ಳಿ ನಂತರ ಕೊನ್ ಪೇಪರ್ ಅನ್ನು ತೆಗೆದುಕೊಳ್ಳಿ ಈ ಪೇಪರ್ ಲೋಕಲ್ ಮಾರುಕಟ್ಟೆ ಅಲ್ಲಿಯೇ ಸಿಗುತ್ತದೆ ಕೇವಲ1ರೂಪಾಯಿ ಗಿಂತ ಕಡಿಮೆ ಬೆಲೆಗೆ ಸಿಗುತ್ತದೆ ಈ ಮೆಹೆಂದಿ ಯನ್ನೂ ತಯಾರಿಸಲು ನೀರು ಮತ್ತು ಸಕ್ಕರೆ ಬೇಕಾಗುತ್ತದೆ. 100 ಗ್ರಾಂ ಹೆನ್ನಾ ಪೌಡರ್ ಮತ್ತು 30 ಗ್ರಾಂ ಸಕ್ಕರೆ ಸ್ವಲ್ಪ ನೀರು ಇದನ್ನೆಲ್ಲ ಚೆನ್ನಾಗಿ ಮಿಕ್ಸ್ ಮಾಡಿ 8 ರಿಂದ 12 ಗಂಟೆ ಗಳ ಕಾಲ ಮುಚ್ಚಿಡಿ ನಂತರ ಡೈರೆಕ್ಟ್ ಆಗಿ ಕೋನ್ ಪೇಪರ್ ಒಳಗಡೆ ತುಂಬಲು ಆಗೋದಿಲ್ಲ ಹಾಗಾಗಿ ಇದನ್ನು ನೈಲಾನ್ ಕಾಟನ್ ಸಹಾಯದಿಂದ ಮೆಹೆಂದಿ ಯನ್ನೂ ಕೋನ್ ಪೇಪರ ಒಳಗಡೆ ತುಂಬಬೇಕು ನಂತರ ಒಂದು ಟೇಪ್ ಇಂದ ಕೋನ್ ಪೇಪರ್ ಮೇಲೆ ಮಡಚಿ ಹಚ್ಚ ಬೇಕು ಈ ರೀತಿಯಾಗಿ ನಾವು ಮೆಹೆಂದಿ ಕೋನ್ ಅನ್ನೂ ತಯಾರಿಸಬಹುದು
ಈ ರೀತಿಯಾಗಿ ಬಿಸಿನೆಸ್ ಮಾಡುವ ಜನರು ತುಂಬಾ ಕಡಿಮೆ ಹಾಗಾಗಿ ಇದರಿಂದ ನಾವು ಒಳ್ಳೇ ಪ್ರಫಿಟ್ ಅನ್ನೂ ಪಡೆದುಕೊಳ್ಳಬಹುದು ಒಂದು ಕೋನ್ ತಯಾರಿಸಲು ನಮಿಗೆ ಆಗುವ ಖರ್ಚು ಕೇವಲ 2ರೂಪಾಯಿ. ನಾವು 8ರೂಪಾಯಿಗೆ ಮಾರಿದರು 6ರೂಪಾಯಿ ಲಾಭವನ್ನು ಪಡೆಯಬಹುದು ಹೀಗೆ ಈ ವ್ಯಾಪಾರದಲ್ಲಿ ಒಳ್ಳೆಯ ಲಾಭಾಂಶ ವನ್ನೂ ಗಳಿಸಬಹುದು.