ಗಡ್ಡ ಮೀಸೆ ಬೇಗನೆ ದಟ್ಟವಾಗಿ ಬೆಳೆಯುವಂತೆ ಮಾಡುವ ಸಿಂಪಲ್ ಟಿಪ್ಸ್

ಹುಡುಗಿಯರು ಇರಬಹುದು ಅಥವಾ ಹುಡುಗರು ಇರಬಹುದು. ನಮಗೆ ಕಣ್ಣಿನ ರೆಪ್ಪೆ ಬೆಳೆಯುತ್ತ ಇಲ್ಲ ಐಬ್ರೋ ಬೆಳೆಯುತ್ತಾ ಇಲ್ಲ, ಹುಡುಗರು ಗಡ್ಡ ಬೆಳೆಯುತ್ತ ಇಲ್ಲ ಅನ್ನೋ ಚಿಂತೆ ಮಾಡ್ತಾ ಇರ್ತಾರೆ. ಅವರೆಲ್ಲರಿಗಾಗಿ ಈ ಲೇಖನದಲ್ಲಿದೆ ಸುಲಭವಾದ ವಿಧಾನದ ಕೂದಲು ಬೆಳೆಯಲು ಔಷಧಿ.

ಕೂದಲು ಬೆಳೆಯೋದಕ್ಕೆ ಈಗ ಆಧುನಿಕ ಕ್ರೀಮುಗಳು ಬೇಕಾಡಷ್ಟು ಇದೆ ಅದನ್ನ ಈಗಾಗಲೇ ಎಷ್ಟೋ ಜನರು ಬಳಸುತ್ತಾ ಇದ್ದಾರೆ. ಆದರೆ ಅದರಿಂದ ಇನ್ನೇನೋ ಅಡ್ಡಪರಿಣಾಮವೂ ಆಗಬಹುದು. ಎಲ್ಲರ ಚರ್ಮವು ಎಲ್ಲ ಕ್ರೀಮ್ ಗಳಿಗೂ ಹೊಂದಿಕೊಳ್ಳಲ್ಲ. ಹಾಗಾಗಿ ಕೂದಲ ಬೆಳವಣಿಗೆಗಾಗಿ ಈ ಒಂದು ಎಣ್ಣೆಯನ್ನ ಮನೆಯಲ್ಲೇ ತಯಾರಿಸಿ ಹಚ್ಚಿ ನೋಡಿ. ಇದರಿಂದ ಯಾವುದೇ ಅಡ್ಡ ಪರಿಣಾಮಗಳೂ ಇರಲ್ಲ. ಇದನ್ನ ಹೇಗೆ ಮಾಡೋದು ಅಂತ ನೋಡಿ.

ಒಂದು ಬೌಲ್ ಗೆ ಒಂದು ಟೀ ಸ್ಪೂನ್ ಹರಳೆಣ್ಣೆ (ಕ್ಯಾಸ್ಟಾರ್ ಒಯಿಲ್), ನಂತರ ಶುದ್ಧವಾದ ಸಹಜವಾದ ಕೊಬ್ಬರಿ ಎಣ್ಣೆ ಒಂದು ಟಿ ಸ್ಪೂನ್, ನಂತರ ಒಂದು ಟೀ ಸ್ಪೂನ್ ಆಲಿವ್ ಎಣ್ಣೆ, ನಂತರ ಒಂದು ಟೀ ಸ್ಪೂನ್ ಬಾದಾಮಿ ಎಣ್ಣೆ, ನಂತರ 3 ವಿಟಮಿನ್ ಇ ಕ್ಯಾಪಸುಲ್ ಅನ್ನು ಪಿನ್ನಿನಿಂದ ಚುಚ್ಚಿ ಹಾಕಿ. ಇವೆಲ್ಲವನ್ನು ಪಕ್ಕಕ್ಕೆ ಇಟ್ಟುಕೊಂಡು, ಇನ್ನೊಂದು ಬೌಲ್ ತಗೊಂಡು ಅದಕ್ಕೆ ಚಿಕ್ಕದಾದ ಇರುಳ್ಳಿಯನ್ನ ತುರಿದುಕೊಳ್ಳಬೇಕು. ಈರುಳ್ಳಿ ಚಿಕ್ಕದಾಗಿ ತುರಿದುಕೊಂಡು ಪೆಸ್ಟ್ ಮಾಡಿಕೊಂಡು ಒಂದು ಟೀ ಸ್ಪೂನ್ ಅಷ್ಟು ಅದರ ರಸವನ್ನು ತೆಗೆದುಕೊಳ್ಳಬೇಕು. ಈರುಳ್ಳಿ ರಸವನ್ನು ಸಹ ಮಿದಲೇ ಹಾಕಿತ್ತುಕೊಂಡ ಎಣ್ಣೆಯ ನೌಲ್ ಗೆ ಹಾಕಿ ಸೆರಿಸಿ ಎಲ್ಲವೂ ಚೆನ್ನಾಗಿ ಹೊಂದಿಕೊಳ್ಳುವ ಹಾಗೆ ಮಿಕ್ಸ್ ಮಾಡಿ ಒಂದು ದಿನ ಪೂರ್ತಿ ಬಿಡಬೇಕು. ಮಾರನೇ ದಿನ ಎಲ್ಲವೂ ಚೆನ್ನಾಗಿ ಸರಿಯಾಗಿ ಹೊಂದಿಕೊಂಡು ಇರತ್ತೆ.

ಎಣ್ಣೆ ಏನೋ ಮಾಡಿಕೊಂಡು ಆಯ್ತು. ಇದನ್ನ ಹಚ್ಚೋದು ಹೇಗೆ? ಪ್ರತೀ ದಿನ ರಾತ್ರಿ ಮಲಗುವಾಗ ಸ್ವಲ್ಪ ಉಗುರು ಬೆಚ್ಚಗಿನ ನೀರಿನಿಂದ ಗಡ್ಡ ಅಥವಾ ಐಬ್ರೋಸ್ ಅಥವಾ ಕಣ್ಣು ರೆಪ್ಪೆಯನ್ನ ಸರಿಯಾಗಿ ತೊಳೆದು ಒರೆಸಿಕೊಂಡು ಈ ಎಣ್ಣೆಯನ್ನ ಹಚ್ಚಿಕೊಳ್ಳಬೇಕು. ಇದನ್ನ ಕನಿಷ್ಠ ಪಕ್ಷ ಎರಡು ವಾರ ಆದರೂ ಮಾಡಲೇಬೇಕು ಅಂದಾಗ ಮಾತ್ರ ಉತ್ತಮ ಫಲಿತಾಂಶ ದೊರೆಯತ್ತೆ. ಇದನ್ನ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಂಡು ಮಲಗಬೇಕು . ಇದನ್ನ ಯಾರು ಬೇಕಿದ್ರೂ ಬಳಸಬಹುದು. ಸಾಧ್ಯ ಆದರೆ ಸಮಯ ಇದ್ದಲ್ಲಿ ದಿನಕ್ಕೆ ಎರಡು ಬಾರಿ ಆದರೂ ಬಳಸಬಹುದು. ಇಲ್ಲ ರಾತ್ರಿ ಹಚ್ಚಿಕೊಂಡು ಮಾರನೇ ದಿನ ಬೆಳಿಗ್ಗೆ ತೊಳೆಯಬಹುದು. ಈ ಎಣ್ಣೆಯನ್ನ ಮಾಡಿ ಒಂದು ಗಾಳಿ ಆಡದ ಡಬ್ಬ ಅಥವಾ ಬಾಟಲಿಯಲ್ಲಿ ಹಾಕಿ ಹೊರಗಡೆಯು ಒಂದು ವಾರದವರೆಗೂ ಇಟ್ಟುಕೊಳ್ಳಬಹುದು.

ಹರಳೆಣ್ಣೆ ಇದು ಕೂದಲು ಬೆಳೆಯದೆ ಇರುವ ಜಾಗದಲ್ಲಿ ಮತ್ತೆ ಕೂದಲು ಹುಟ್ಟಲು ಸಹಾಯ ಮಾಡತ್ತೆ. ಕೆಲವರಿಗೆ ಐಬ್ರೋ ಕೂದಲು ಮತ್ತು ಕಣ್ಣು ರೆಪ್ಪೆಯ ಕೂದಲು ಕೂಡ ಉದರುತ್ತ ಇರತ್ತೆ ಅದನ್ನೂ ಕೂಡ ನಿಲ್ಲಿಸತ್ತೆ ಇದು. ಒಲಿವ್ ಒಯಿಲ್ ಇದು ಒಣಗು ಕೂದಲನ್ನ ಮೃದು ಆಗಿಸತ್ತೆ. ಬಾದಾಮಿ ಎಣ್ಣೆ ಇದು ಕೂದಲನ್ನ ಫುಲ್ ದಪ್ಪ ಆಗುವಂತೆ ಸಹಾಯ ಮಾಡತ್ತೆ. ವಿಟಮಿನ್ ಇ ಕ್ಯಾಪಸುಲ್ ಕೂದಲು ದಟ್ಟವಾಗಿ ಬೆಳೆಯಲು ಸಹಾಯಕಾರಿ. ಈರುಳ್ಳಿ ರಸ ಕೂಡ ಯಾವ ಭಾಗದಲ್ಲಿ ಕೂದಲು ಬೆಳೆಯುತ್ತ ಇರಲ್ಲವೋ ಆ ಭಾಗದಲ್ಲಿ ಮತ್ತೆ ಕೂದಲು ಹುಟ್ಟಲು ಸಹಾಯ ಮಾಡತ್ತೆ.

Leave A Reply

Your email address will not be published.

error: Content is protected !!