6000 ಕೋಟಿ ರೂಪಾಯಿಗಳ ಒಡೆಯ ನಟ ನರೇಶ್ ಇಷ್ಟೊಂದು ಹಣ ಸಂಪಾದನೆ ಮಾಡಿದ್ದು ಹೇಗೆ ಗೊತ್ತಾ

ಸದ್ಯ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಒಂದೇ ಮಾತು, ಒಂದೇ ಗಾಸಿಪ್, ಒಂದೇ ಸುದ್ದಿ, ಅದೆವೇ ನಟಿ ಪವಿತ್ರ ಲೋಕೇಶ್ ಹಾಗೂ ನಟ ನರೇಶ್ ಅವರ ವಿಷಯ. ಕನ್ನಡದಲ್ಲಿ ಹಾಗೂ ತೆಲುಗಿನಲ್ಲಿ ಸಾಕಷ್ಟು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿ ಫೇಮಸ್ ಆದವರು ನಟಿ ಪವಿತ್ರ ಲೋಕೇಶ್. ಈ ಹಿಂದೆ ಕನ್ನಡದ ಅತ್ಯದ್ಭುತ ನಟ ಸುಚೇಂದ್ರ ಪ್ರಸಾದ್ ಅವರೊಂದಿಗೆ 11 ವರ್ಷಗಳ ಕಾಲ ಜೀವನ ನಡೆಸಿದ ಪವಿತ್ರ ಲೋಕೇಶ್ ಎರಡು ಮಕ್ಕಳನ್ನು ಹೊಂದಿದ್ದಾರೆ ಆದರೆ ಇಂದು ಸುಚೇಂದ್ರ ಪ್ರಸಾದ್ ಅವರಿಂದ ದೂರಾಗಿ ನರೇಶ್ ಅವರನ್ನು ಮದುವೆಯಾಗುತ್ತಿದ್ದಾರೆ ಅನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪವಿತ್ರ ಲೋಕೇಶ್ ಅವರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ಈ ನರೇಶ್ ನಿಜಕ್ಕೂ ಯಾರು ಗೊತ್ತಾ?!

ಕನ್ನಡದ ನಟಿ ಒಬ್ಬಳ ಹೆಸರು ತೆಲುಗು ನಟನೊಬ್ಬನ ಹೆಸರಿನೊಂದಿಗೆ ಬೆರೆತುಕೊಂಡಿದೆ. ಪವಿತ್ರ ಲೋಕೇಶ್ ಕನ್ನಡದಲ್ಲಿ ನಟಿಸಿದ್ದರು ತೆಲುಗಿನಲ್ಲಿಯೂ ಸಾಕಷ್ಟು ಸಿನಿಮಾಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಹೀಗೆ ನಟನಾ ಜಗತ್ತಿನಲ್ಲಿ ಪವಿತ್ರ ಲೋಕೇಶ್ ನರೇಶ್ ಅವರನ್ನು ಭೇಟಿಯಾಗಿದ್ದಾರೆ. ಕುಟಗಿ ಅಭಿನಯಿಸುತ್ತ ಒಟ್ಟಾಗಿ ಪ್ರಯಾಣ ಬೆಳೆಸುತ್ತಾ, ಇದೀಗ ಒಟ್ಟಾಗಿ ಜೀವನ ನಡೆಸುತ್ತಿದ್ದಾರೆ ಎನ್ನುವ ಸುದ್ದಿಯು ಸಿಕ್ಕಾಪಟ್ಟೆ ವೈರಲ್ ಆಗಿದೆ. ಟಾಲಿವುಡ್ ನಲ್ಲಿ ನರೇಶ್ ಅವರದ್ದು ಬಹಳ ದೊಡ್ಡ ಹೆಸರು. ಇದುವರೆಗೆ ಟಾಲಿವುಡ್ ನಲ್ಲಿ ನೂರಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿರುವ ನರೇಶ ಆಗರ್ಭ ಶ್ರೀಮಂತ.

ನಟ ನರೇಶ್ ಹುಟ್ಟುತ್ತಲೇ ಚಿನ್ನದ ಸ್ಪೂನ್ ಬಾಯಲ್ಲಿಟ್ಟುಕೊಂಡು ಬಂದಿದ್ದಾರೆ ಎಂದರೆ ತಪ್ಪಲ್ಲ. ಯಾಕಂದ್ರೆ ನರೇಶ್ ಅವರು ಟಾಲಿವುಡ್ ನ ಹೆಸರಾಂತ ನಟ ಕೃಷ್ಣ ಅವರ ಎರಡನೇ ಪತ್ನಿಯಾದ ವಿಜಯ ನಿರ್ಮಲ ಅವರ ಮಗ. ಆದರೆ ನರೇಶ್ ಕೃಷ್ಣ ಅವರ ಸ್ವಂತ ಮಗನಲ್ಲ. ಅವರು ವಿಜಯ ನಿರ್ಮಲ ಅವರ ಮೊದಲ ಪತಿ ಮೂರ್ತಿಯವರ ಮಗ. ನಟ ಕೃಷ್ಣ ಅವರಿಗೆ ವಿಜಯ ನಿರ್ಮಲ ಹೇಗೆ ಎರಡನೇ ಪತ್ನಿಯು ಹಾಗೆ ವಿಜಯ ನಿರ್ಮಲ ಅವರಿಗೆ ಕೃಷ್ಣ ಎರಡನೇ ಪತಿ. ಟಾಲಿವುಡ್ ನ ಪ್ರಖ್ಯಾತ ನಟರಲ್ಲಿ ಒಬ್ಬರಾಗಿರುವ ಮಹೇಶ್ ಬಾಬು ಅವರ ಸಹೋದರ ಈ ನರೇಶ್.

ನರೇಶ್ ಬಾಲನಟನಾಗಿ ತಮ್ಮ ಅಭಿನಯವನ್ನ ಆರಂಭಿಸಿದರು. ಕಲಾವಿದರು ಕುಟುಂಬದ ಹಿನ್ನೆಲೆಯನ್ನು ಹೊಂದಿರುವ ನರೇಶ್ ಟಾಲಿವುಡ್ ನಲ್ಲಿ ಪ್ರಖ್ಯಾತ ನಟ ಎನಿಸಿಕೊಂಡಿದ್ದಾರೆ. 1963 ರಲ್ಲಿ ಜನಿಸಿದ ನರೇಶ್, ಹುಟ್ಟಿದಾಗಿನಿಂದ ಶ್ರೀಮಂತಿಕೆಯನ್ನೇ ನೋಡಿ ಬೆಳೆದವರು. ತಮ್ಮ 17ನೇ ವಯಸ್ಸಿನಲ್ಲಿ ತೆಲುಗಿನಲ್ಲಿ ಹೀರೋ ಆಗಿ ಅಭಿನಯಿಸಲು ಆರಂಭಿಸಿದ ನರೇಶ್ ತಿರುಗಿ ನೋಡಿದ್ದೇ ಇಲ್ಲ. ಅಜಾತ ಬಳಿಕ ಒಂದಾದ ಮೇಲೆ ಒಂದರಂತೆ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದವರು ಈ ನರೇಶ್. ಇದೀಗ ಸುಮಾರು ಆರು ಸಾವಿರ ಕೋಟಿ ಆಸ್ತಿಯ ಒಡೆಯ ನಟ ನರೇಶ್!

ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನರೇಶ್ ಅವರ ವೈಯಕ್ತಿಕ ಜೀವನ ಮಾತ್ರ ಸಾಕಷ್ಟು ವೈಫಲ್ಯಗಳಿಂದ ಕೂಡಿದೆ. ಈಗಾಗಲೇ ಮೂರು ಮದುವೆಯಾಗಿರುವ ನರೇಶ್, ಇದೀಗ ಪವಿತ್ರ ಲೋಕೇಶ್ ಅವರೊಂದಿಗೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೆ. ನರೇಶ್ ಅವರ ಮೂರನೇ ಪತ್ನಿ ಕರ್ನಾಟಕದವರೇ ಆದ ರಮ್ಯಾ ರಘುಪತಿ. ಇವರಿಬ್ಬರ ದಾಂಪತ್ಯ ಜೀವನ ಸರಿಯಾಗಿಲ್ಲದ ಕಾರಣ, ನರೇಶ್ ರಮ್ಯಾ ಅವರಿಗೆ ವಿಚ್ಛೇದರ ಕೊಡುವ ನಿರ್ಧಾರವನ್ನು ಮಾಡಿದ್ದರು.

ನಟ ನರೇಶ್ ಅವರ ಪತ್ನಿ ರಮ್ಯಾ ಈ ವಿಚ್ಛೇದನದ ಪತ್ರವನ್ನು ನಿರಾಕರಿಸಿದ್ದು ತಾನು ಯಾವುದೇ ಕಾರಣಕ್ಕೂ ನರೇಶ್ ಅವರಿಗೆ ವಿಚ್ಛೇದನ ಕೊಡುವುದಿಲ್ಲ ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಅಲ್ಲದೆ ನರೇಶ್ ಅವರ ಬಗ್ಗೆ ಮಾತನಾಡಿದ ರಮ್ಯಾ ಕಳೆದ ಹತ್ತು ವರ್ಷಗಳಿಂದ ಈ ತರದ್ದು ನಡೆಯುತ್ತಲೇ ಇದೆ ಅವರ ಜೀವನದಲ್ಲಿ ಸಾಕಷ್ಟು ಮಹಿಳೆಯರು ಬಂದು ಹೋಗಿದ್ದಾರೆ ಆದರೆ ನಾನು ಅಧಿಕೃತವಾಗಿ ಮದುವೆಯಾದ ಕಾರಣ ಅವರನ್ನು ಬಿಟ್ಟು ಹೋಗುವುದಿಲ್ಲ. ನಡುವಲ್ಲಿ ಈ ಪವಿತ್ರ ಲೋಕೇಶ್ ಅವರು ಯಾಕೆ ಬಂದಿದ್ದಾರೆ ಎನ್ನುವುದು ನನಗೂ ಅರ್ಥವಾಗಿಲ್ಲ ಎಂದು ರಮ್ಯಾ ಮಾಧ್ಯಮಗಳಲ್ಲಿ ಹೇಳಿದ್ದಾರೆ.

ನಟನ ಜಗತ್ತಿನಲ್ಲಿ ಒಂದಾದ ಪವಿತ್ರ ಲೋಕೇಶ್ ಹಾಗೂ ನರೇಶ್ ಪರಸ್ಪರ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವುದರ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದರ ಮೂಲಕ ಸ್ನೇಹಿತರಾಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಪರಿಚಯವಿರುವ ಪವಿತ್ರ ಲೋಕೇಶ್ ಅವರು ತಾನು ಡಿಪ್ರೆಶನ್ ನಲ್ಲಿ ಇರುವಾಗ ನನಗೆ ಸಲಹೆಗಳನ್ನು ಕೊಡುವುದರ ಮೂಲಕ ನನ್ನ ಜೊತೆಗಿದ್ದರೂ ಎಂದು ನರೇಶ್ ಹೇಳಿದ್ದಾರೆ.

ಇನ್ನೂ ರಮ್ಯಾ ರಘುಪತಿ ನರೇಶ್ ಅವರ ಬಗ್ಗೆ ಮಾಧ್ಯಮಗಳಲ್ಲಿ ಹೇಳಿದ್ದಕ್ಕೆ ವಿರೋಧ ವ್ಯಕ್ತಪಡಿಸಿರುವ ನರೇಶ್ ಆಕೆ ಪಬ್ಲಿಸಿಟಿಗಾಗಿ ಹೀಗೆ ಮಾಧ್ಯಮದ ಮುಂದೆ ಬಂದು ತನಗೆ ಅನಿಸಿದ್ದನ್ನು ಹೇಳುತ್ತಿದ್ದಾಳೆ. ನಾನು ಆಕೆಯಿಂದ ಸಾಕಷ್ಟು ನೋವನ್ನ ಅನುಭವಿಸಿದ್ದೇನೆ ಎಂದು ನರೇಶ್ ಹೇಳಿಕೊಂಡಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪವಿತ್ರ ಲೋಕೇಶ್ ಕೂಡ ನಾನು ಹಾಗೂ ನರೇಶ್ ಉತ್ತಮ ಸ್ನೇಹಿತರು ಆದರೆ ರಮ್ಯಾ ಬಗ್ಗೆ ನನಗೆ ಗೊತ್ತಿಲ್ಲ ಯಾಕೆ ಅವಳು ನನ್ನ ಬಗ್ಗೆ ಮಾಧ್ಯಮದಲ್ಲಿ ಹೇಳುತ್ತಿದ್ದಾಳೆ ಎನ್ನುವುದು ನನಗೂ ಗೊತ್ತಿಲ್ಲ ಎಂದು ಹೇಳಿದ್ದಾರೆ.ಒಟ್ಟಿನಲ್ಲಿ ರಮ್ಯಾ ರಘುಪತಿ ನರೇಶ್ ಪವಿತ್ರ ಲೋಕೇಶ್ ಈ ಮೂವರ ನಡುವೆ ನಡೆಯುತ್ತಿರುವ ವಯಕ್ತಿಕ ಕಲಹಕ್ಕೆ ಅವರೇ ಪರಿಹಾರವನ್ನು ಕಂಡುಕೊಳ್ಳಬೇಕಷ್ಟೆ.

Leave A Reply

Your email address will not be published.

error: Content is protected !!