ಒಂದೊತ್ತಿನ ಊಟ ಇಲ್ಲದಿದ್ರೂ ಪರವಾಗಿಲ್ಲ ಆದ್ರೆ ಅದು ಮುಖ್ಯ, ಸಮಂತಾ ಹೇಳಿದ್ದೇನು ಗೊತ್ತಾ

ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆ ಆದ ಸಮಂತಾ ರುತ್​ ಪ್ರಭು ಮತ್ತು ನಾಗ ಚೈತನ್ಯ ಅವರು ವಿಚ್ಛೇದನ ಪಡೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಪರಸ್ಪರ ಅನ್ಯೋನ್ಯವಾಗಿ ಇದ್ದಂತೆ ಸದಾ ಕಾಣಿಸಿಕೊಳ್ಳುತ್ತಿದ್ದ ಅವರಿಬ್ಬರ ನಡುವೆ ಯಾವ ವಿಚಾರಕ್ಕೆ ಮನಸ್ತಾಪ ಮೂಡಿತೋ ಗೊತ್ತಿಲ್ಲ. ಅಂತಿಮವಾಗಿ ಅವರು ತಮ್ಮ ದಾಂಪತ್ಯ ಜೀವನಕ್ಕೆ ಫುಲ್​ ಸ್ಟಾಪ್​ ಹಾಕಿದರು. ಈ ವಿಚ್ಛೇದನಕ್ಕೆ ಕಾರಣ ಏನು ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾದಿದ್ದಾರೆ. ಆದರೆ ಈವರೆಗೂ ಆ ಕಾರಣದ ಬಗ್ಗೆ ಈ ಮಾಜಿ ದಂಪತಿ ಬಾಯಿ ಬಿಟ್ಟಿಲ್ಲ. ಅವರ ವಿಚ್ಛೇದನಕ್ಕೆ ಹಲವು ಅಂತೆ ಕಂತೆಗಳು ಹರಿದಾಡುತ್ತಿವೆ. ಸಮಂತಾ ಅವರ ಬೋಲ್ಡ್ ಸೀನ್ ನಟನೆಯ ನಿರ್ಧಾರವೇ ನಾಗಚೈತನ್ಯ ಜೊತೆಗಿನ ವಿಚ್ಛೇದನಕ್ಕೆ ಕಾರಣ ಆಗಿದೆ ಎನ್ನುವ ಮಾತು ಕೇಳಿ ಬಂದಿದೆ.

ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರೀತಿಸಿ ಮದುವೆ ಆದ ಅನೇಕ ಜೋಡಿಗಳು ಕೆಲವೇ ವರ್ಷಗಳಲ್ಲಿ ದೂರ ಆಗಿರುವ ಘಟನೆ ಅನೇಕ ನಡೆದಿದೆ. ಪ್ರೀತಿ ಅದೆಷ್ಟೇ ಗಾಢವಾಗಿದ್ದರೂ, ಮದುವೆ ಆದ ಕೆಲವೇ ವರ್ಷಗಳಲ್ಲಿ ಇಬ್ಬರೂ ಡಿವೋರ್ಸ್ ಮೊರೆ ಹೋಗುತ್ತಾರೆ. ಇನ್ನು ಟಾಲಿವುಡ್ ನ ಬಹು ಬೇಡಿಕೆಯ ನಟಿ ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರೂ ಪ್ರೀತಿಸಿ ಮದುವೆ ಆಗಿ, ಇದೀಗ ದೂರ ದೂರ ಆಗಿದ್ದಾರೆ. ಇಬ್ಬರೂ ತಮ್ಮ ದಾಂಪತ್ಯ ಜೀವನದ ನಾಲ್ಕೇ ವರ್ಷದಲ್ಲಿ ವಿಚ್ಛೇದನ ಪಡೆದು ದೂರ ಆಗಿದ್ದಾರೆ. ಇವರಿಬ್ಬರೂ ಟಾಲಿವುಡ್ ನ ಕ್ಯೂಟ್ ಜೋಡಿಗಳಾಗಿದ್ದರು. ಅಷ್ಟೆ ಅಲ್ಲ ಇಬ್ಬರೂ ನಂಬರ್ 1 ಸ್ಥಾನದಲ್ಲಿದ್ದ ಸ್ಟಾರ್ ಗಳಾಗಿದ್ದರು.

ಇಬ್ಬರಿಗೂ ಅಪಾರ ಸಂಖ್ಯೆಯ ಅಭಿಮಾನ ಬಳಗ ಇದೆ. ಈ ಇಬ್ಬರೂ ಮದುವೆ ಆಗಿರುವ ಬಗ್ಗೆ ಅಭಿಮಾನಿಗಳು ಮೆಚ್ಚಿ ಕೊಂಡಾಡಿದ್ದರು. ಆದರೆ ಇದೀಗ ಇಬ್ಬರೂ ದೂರ ಆಗಿರುವುದಕ್ಕೆ ಕಾರಣ ಏನು ಅನ್ನುವುದು ಮಾತ್ರ ಯಾರಿಗೂ ಗೊತ್ತಿಲ್ಲ. ಎಲ್ಲರೂ ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದರು. ನಾಗಚೈತನ್ಯ ಆಗಲಿ ಸಮಂತಾ ಆಗಲಿ ಎಲ್ಲೂ ಈ ಬಗ್ಗೆ ಹೇಳಿಕೊಂಡಿರಲಿಲ್ಲ. ಆದರೆ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಇವರಿಬ್ಬರ ಡಿವೋರ್ಸ್ ವಿಷಯದ ಕಾರಣಗಳು ಚರ್ಚೆ ಆಗುತ್ತಿದೆ. ಸಮಂತಾ ಅವರು ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿರುವುದು ಇವರಿಬ್ಬರ ಸಂಬಂಧದಲ್ಲಿ ಬಿರುಕು ಬೀಳಲು ಕಾರಣವಂತೆ. ಮದುವೆ ಬಳಿಕ ನಾಗಚೈತನ್ಯ ಅವರು ತನ್ನ ಮುದ್ದಿನ ಮಡದಿ ಸಮಂತಾ ಜೊತೆ ಹಾಟ್ ಹಾಗೂ ಬೋಲ್ಡ್ ಸಿನಿಮಾದಲ್ಲಿ ನಟಿಸಬಾರದು ಎಂದು ಹೇಳಿದ್ದರಂತೆ.

ಇದು ನಾಗಚೈತನ್ಯ ಹಾಗೂ ಅವರ ತಂದೆ ನಾಗಾರ್ಜುನ್ ಸೇರಿದಂತೆ ಆವರ ಫ್ಯಾಮಿಲಿಗೂ ಇಷ್ಟ ಇರಲಿಲ್ಲವಂತೆ. ಆದರೆ ಸಮಂತಾ ಅವರು ನೆಟ್ ಫ್ಲಿಕ್ಸ್ ನ ಫ್ಯಾಮಿಲಿ ಮ್ಯಾನ್ 2 ಸೀರಿಸ್ ನಲ್ಲಿ ಬೋಲ್ಡ್ ಆಗಿ ನಟಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ ಎನ್ನಲಾಗಿದೆ. ಫ್ಯಾಮಿಲಿ ಮ್ಯಾನ್ 2 ಸೀರಿಸ್ ಸಖತ್ ಹಿಟ್ ಸೀರಿಸ್ ಆಗಿತ್ತು. ಇದರಲ್ಲಿ ಸಮಂತಾ ಅವರದ್ದು ಮುಖ್ಯ ರೋಲ್ ಇತ್ತು. ಅದರಲ್ಲಿ ತುಂಬಾನೇ ಬೋಲ್ಡ್ ಆಗಿ ಸೆಕ್ಸ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿ ನಾಗಚೈತನ್ಯ ಹಾಗೂ ಅವರ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದರಂತೆ. ಅದುವೇ ಇವರಿಬ್ಬರ ಬಿರುಕಿಗೆ ಕಾರಣ ಎಂದು ಈಗ ಹೇಳಲಾಗಿದೆ. ಈ ನಡುವೆ ಸಮಂತಾ ಅವರು ಒಂದು ಹೊತ್ತಿನ ಊಟ ಇಲ್ಲದಿದ್ದರೂ ಪರವಾಗಿಲ್ಲ ಸೆಕ್ಸ್ ಮುಖ್ಯ ಎಂದು ಹೇಳಿರುವ ಹಳೆ ವಿಡಿಯೋ ಕೂಡ ಟ್ರೋಲ್ ಆಗಿತ್ತು.

Leave a Comment

error: Content is protected !!