ನರೇಶ್ ಹಾಗೂ ಪವಿತ್ರ ಲೋಕೇಶ್ ನಡುವೆ ಏನಿದೆ? ಸತ್ಯ ಬಿಚ್ಚಿಟ್ಟ ನರೇಶ್ ಪತ್ನಿ ರಮ್ಯಾ ರಘುಪತಿ

ಸದ್ಯ ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದ್ದ ವಿಷಯ ಏನು ಅಂದರೆ ಅದೂ ಪವಿತ್ರ ಲೋಕೇಶ್ ಅವರ ಎರಡನೆಯ ಮದುವೆಯ ವಿಚಾರ ಎಂದು ಹೇಳಬಹುದು. ನಟಿ ಪವಿತ್ರ ಲೋಕೇಶ್ ಅವರು ಟಾಲಿವುಡ್ ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ನರೇಶ್ ಬಾಬು ಅವರನ್ನ ಎರಡನೆಯ ಮದುವೆ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದೆ. ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಪವಿತ್ರ ಲೋಕೇಶ್ ಅಥವಾ ನರೇಶ್ ಬಾಬು ಅವರು ಯಾವುದೇ ಸ್ಪಷ್ಟನೆಯನ್ನ ನೀಡಿಲ್ಲ. ಇನ್ನು ಇದರ ನಡುವೆ ಈಗ ನರೇಶ್ ಬಾಬು ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ನರೇಶ್ ಬಾಬು ಬಗ್ಗೆ ಶಾಕಿಂಗ್ ಹೇಳಿಕೆನ್ನ ಕೊಟ್ಟಿದ್ದು ಈ ಸುದ್ದಿ ಮಾದ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ನರೇಶ್​ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನಟಿ ಪವಿತ್ರಾ ಲೋಕೇಶ್ ಅವರ ವೈಯಕ್ತಿಕ ಜೀವನದ ಕುರಿತು ಅನೇಕ ಅಂಕೆ-ಕಂತೆಗಳು ಕೇಳಿಬರುತ್ತಿವೆ. ತೆಲುಗಿನ ನಟ ನರೇಶ್​ ಜೊತೆ ಅವರು ವಿವಾಹ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ನರೇಶ್​ ಅವರ 3ನೇ ಪತ್ನಿ ರಮ್ಯಾ ರಘುಪತಿ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನರೇಶ್ ಬಾಬು ಅವರು ಮೂರನೇ ಪತ್ನಿ ರಮ್ಯಾ ರಘುಪತಿ ಅವರಿಗೆ ವಿಚ್ಛೇಧನವನ್ನ ನೀಡದೆ ನಾಲ್ಕನೇ ಮದುವೆ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದ್ದಂತೆ ನರೇಶ್ ಬಾಬು ಮೂರನೇ ಪತ್ನಿ ರಮ್ಯಾ ಅವರು ಈ ಮದುವೆ ಬಗ್ಗೆ ಹೇಳಿಕೆಯನ್ನ ಕೊಟ್ಟಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ನರೇಶ್ ಬಾಬು ಅವರ ಮೂರನೇ ಪತ್ನಿ ರಮ್ಯಾ ಅವರು ನರೇಶ್ ಬಾಬು ಕುರಿತಂತೆ ಕೆಲವು ಮಾಹಿತಿಯನ್ನ ಹೇಳಿದ್ದಾರೆ. ಸಂದರ್ಶನದಲ್ಲಿ, ನರೇಶ್ ಬಾಬು ಒಬ್ಬ ಹೆಣ್ಣುಬಾಕ. ಆತ ಒಬ್ಬ ಹೆಣ್ಣುಬಾಕ ಅನ್ನುವುದು ಆತನನ್ನ ಮದುವೆಯಾದ ಮೂರೂ ವರ್ಷದ ನಂತರ ನನಗೆ ತಿಳಿಯಿತು.

ಈ ವಿಷಯ ತಿಳಿದ ನಂತರ ಆತನ ಬಳಿ ನಾನು ಎಲ್ಲಾ ರೀತಿಯಲ್ಲಿ ಕೇಳಿಕೊಂಡೆ, ಆದರೆ ಆತನ ಕೆಟ್ಟ ಅಭ್ಯಾಸ ಸರಿ ಹೋಗಲಿಲ್ಲ ಎಂದು ಅವರು ಹೇಳಿದ್ದಾರೆ. ನರೇಶ್ ಬಾಬು ಮತ್ತು ಪವಿತ್ರ ಲೋಕೇಶ್ ಅವರು ಕಳೆದ ಆರು ವರ್ಷದಿಂದ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದಾರೆ ಮತ್ತು ಈಗ ಅವರು ಮದುವೆ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ನರೇಶ್ ಬಾಬು ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಹೇಳಿದ್ದಾರೆ.

ಅತ್ತೆಯವರದ್ದು ತುಂಬು ಕುಟುಂಬ ಮತ್ತು ನಾವೆಲ್ಲ ಒಟ್ಟಿಗೆ ಇದ್ದು ಪ್ರತಿ ಕ್ಷಣವನ್ನ ಖುಷಿಯಿಂದ ಅನುಭವಿಸೋಣ ಎಂದು ಅವರು ನನ್ನ ಬಳಿ ಹೇಳಿದ್ದರು, ಆದರೆ ಹೆಣ್ಣು ಅಂದರೆ ಆತ ಬಾಯಿ ಬಿಡುತ್ತಿದ್ದ ಮತ್ತು ಈ ವಿಷಯದ ಕುರಿತಂತೆ ನಾನು ಎಲ್ಲಾ ರೀತಿಯಲ್ಲಿ ಅವರ ಬಳಿ ಕೇಳಿಕೊಂಡಿದ್ದೆ ಎಂದು ಅವರು ಹೇಳಿದ್ದಾರೆ. ಸದ್ಯ ನರೇಶ್ ಬಾಬು ಅವರ ಮೂರನೇ ಪತ್ನಿಯ ಈ ಹೇಳಿಕೆ ಸಕತ್ ಚರ್ಚೆಗೆ ಕಾರಣವಾಗಿದೆ.

ಪವಿತ್ರಾ ಲೋಕೇಶ್ ಇದು ಚಿತ್ರರಂಗದ ಪರಿಚಿತ ಹೆಸರು. ಕಳೆದ 26 ವರ್ಷಗಳಿಂದ ಕನ್ನಡ, ತೆಲುಗು, ತಮಿಳು ಚಿತ್ರರಂಗಗಳಲ್ಲಿ ಸಕ್ರಿಯವಾಗಿರುವ ಪವಿತ್ರಾ ಲೋಕೇಶ್ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತೆಲುಗು ಅತ್ಯಂತ ಬೇಡಿಕೆಯ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ ಮೈಸೂರು ಲೋಕೇಶ್ ಪುತ್ರಿಯೇ ಪವಿತ್ರಾ ಲೋಕೇಶ್. ಇವರು ಕಳೆದ ಎರಡೂವರೆ ದಶಕದಿಂದ ಬ್ಯುಸಿ ನಟಿ. ಸೋದರ ಆದಿ ಲೋಕೇಶ್ ಕೂಡ ಕನ್ನಡದ ನಟ. ಮೈಸೂರಿನಲ್ಲಿ ಹುಟ್ಟಿ ಬೆಳೆದ ಪವಿತ್ರಾ ಲೋಕೇಶ್, ಆರಂಭದಲ್ಲಿ ಸಿವಿಲ್ ಸರ್ವೀಸ್ ಹುದ್ದೆಯ ಕನಸು ಕಂಡಿದ್ರು. ಆದ್ರೆ ತಂದೆಯ ನಿಧನದಿಂದಾಗಿ ಆ ಕನಸು ಕೈಗೂಡಲಿಲ್ಲ. 1996ರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಮಿಸ್ಟರ್ ಅಭಿಷೇಕ್ ಚಿತ್ರದ ನಾಯಕಿಯಾಗಿ ಪವಿತ್ರಾ ಲೋಕೇಶ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು ಶಿವರಾಜ್ ಕುಮಾರ್ ನಟನೆಯ ಜನುಮದ ಜೋಡಿ ಚಿತ್ರ. ಮುಂದೆ ಕನ್ನಡದ ನಾಯಿ ನೆರಳು ಚಿತ್ರಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿ ಗಿಟ್ಟಿಸಿದ್ರು. ನೂರಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳ ಮೂಲಕ ಛಾಪು ಮೂಡಿಸಿರುವ ಪವಿತ್ರಾ, ಕನ್ನಡದ ದಿಯಾ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಮಹೇಶ್ ಬಾಬು ನಟನೆಯ ತೆಲುಗು ಚಿತ್ರ ಸರ್ಕಾರಿ ವಾರಿ ಪಾಟ ಅವರ ಇತ್ತೀಚಿನ ಸಿನಿಮಾ. ಕಿರುತೆರೆಯಲ್ಲೂ ಹೆಸರು ಮಾಡಿರುವ ಪವಿತ್ರಾ ಲೋಕೇಶ್ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

2007ರಲ್ಲಿ ಕನ್ನಡ ಚಿತ್ರರಂಗದ ಪೋಷಕ ನಟ ಸುಚೇಂದ್ರ ಪ್ರಸಾದ್ ಮದುವೆಯಾಗಿರುವ ಪವಿತ್ರಾ ಲೋಕೇಶ್, ಅದಾಗಲೇ ಸಾಫ್ಟ್​ವೇರ್​ ಎಂಜಿನಿಯರ್​ ಒಬ್ಬರನ್ನ ಮದುವೆಯಾಗಿ ಡೈವೋರ್ಸ್ ನೀಡಿದ್ರು. ಪವಿತ್ರಾ ಲೋಕೇಶ್-ಸುಚೇಂದ್ರ ಪ್ರಸಾದ್ ಇಬ್ಬರಿಗೂ ಇದು 2ನೇ ಮದುವೆ. ನಟಿ ಪವಿತ್ರಾ ಲೋಕೇಶ್​ಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಪವಿತ್ರಾ ಲೋಕೇಶ್ ಹಾಗೂ ಪತಿ ನರೇಶ್ ಬಗ್ಗೆನೂ ರಮ್ಯಾ ರಘುಪತಿ ಸ್ಟೋಟಕ ಹೇಳಿಕೆ ಕೊಟ್ಟಿದ್ದಾರೆ. ‘ಪವಿತ್ರಾ ಲೋಕೇಶ್ ಹಾಗೂ ನರೇಶ್ ಕಳೆದ 6 ವರ್ಷಗಳಿಂದ ಲಿವ್ ಇನ್ ರಿಲೇಷನ್‌ ಶಿಫ್‌ನಲ್ಲಿದ್ದಾರೆ. ಈಗ ಅವರು ಮದುವೆ ಆಗಲು ಹೊರಟಿದ್ದಾರೆ’ ಎಂದು ಅವರು ಆರೋಪ ಮಾಡಿದ್ದಾರೆ. ಕಳೆದ ಒಂದು ವಾರದಿಂದ ಕನ್ನಡ ಚಿತ್ರರಂಗದ ಪವಿತ್ರ ಲೋಕೇಶ್​ ಹಾಗೂ ಮಹೇಶ್​ ಬಾಬು ಅಣ್ಣ ನರೇಶ್​ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಎಲ್ಲಿ ನೋಡಿದರೂ ಇವರಿಬ್ಬರ ಮದುವೆ ವಿಚಾರದ್ದೆ ಮಾತು. ತಮ್ಮ ಅಭಿನಯದ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದರು. ಕೇವಲ ಕನ್ನಡ ಚಿತ್ರರಂಗಷ್ಟೇ ಅಲ್ಲದೇ, ತಮಿಳು ತೆಲುಗು ಸಿನಿಮಾಗಳಲ್ಲೂ ತಮ್ಮ ಪ್ರಭಾವ ಬೀರುತ್ತಿದ್ದಾರೆ. ಆದರೆ, ಇತ್ತೀಚೆಗೆ ವೈಯಕ್ತಿಕ ವಿಚಾರಕ್ಕೆ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ನರೇಶ್​ ಮತ್ತು ಪವಿತ್ರ ಲೋಕೇಶ್​ ಒಟ್ಟಿಗೆ ಇದ್ದಾರೆ ಎಂದು ನರೇಶ್​ ಮೂರನೇ ಪತ್ನಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Leave a Comment

error: Content is protected !!