ಹಸಿದು ಬರೋ ಭಕ್ತರಿಗೆ ಹೊಟ್ಟೆ ತುಂಬಾ ಊಟ ನೀಡುವ ಭಾರತದ ಸುಪ್ರಸಿದ್ದ ದೇವಾಲಯಗಳಿವು

ಭಾರತ ಎಂದರೇನೆ ಅದೊಂದು ದೈವಗಳ ನಾಡು ವಿವಿಧತೆಯಲ್ಲಿ ಏಕತೆಯನ್ನು ಕಂಡಂತಹ ಭಾವೈಕ್ಯತೆಯನ್ನು ತನ್ನಲ್ಲಿಯೇ ಹುದುಗಿಸಿಕೊಂಡಿರುವಂತಹ ವಿಶ್ವದ ಪವಿತ್ರ ರಾಷ್ಟ್ರ ಎಂದರೆ ತಪ್ಪಾಗಲಾರದು ಯಾಕಂದ್ರೆ ಭಾರತವು ಹಿಂದೂ ಸಂಸ್ಕೃತಿಯನ್ನು ಒಳಗೊಂಡಂತ ಒಂದು ಅಪ್ಪಟ ಸಂಸ್ಕಾರಶೀಲ ರಾಷ್ಟ್ರವಾಗಿದೆ ಅತಿಥಿ ದೇವೋಭವ ಎಂಬುದೇ ಭಾರತದ ವೇದ ಮಂತ್ರವಾಗಿದೆ ಆದ್ದರಿಂದ ನಮ್ಮ ಭಾರತಕ್ಕೆ ವಿಶ್ವದ ಮಟ್ಟದಲ್ಲಿ ಅತಿ ದೊಡ್ಡ ಸ್ಥಾನಮಾನವಿದೆ ಈ ಕಾರಣಕ್ಕಾಗಿಯೇ ಹೊರಗಿನವರೂ ಕೂಡ ನಮ್ಮ ಸನಾತನ ಧರ್ಮ ಸಂಸ್ಕೃತಿಯನ್ನು ಪ್ರೀತಿಸಿ ಮನಸಾರೆ ಪೂಜಿಸುತ್ತಾರೆ ಕೂಡ.

ಭಾರತದ ತುಂಬೆಲ್ಲ ಆನೆಕಾನೇಕ ಪ್ರಸಿದ್ಧ ದೇವಾಲಯಗಳನ್ನು ನಾವು ಕಾಣಬಹುದಾಗಿದೆ ಅಷ್ಟೇ ಅಲ್ಲದೇ ಭಾರತದಲ್ಲಿ ಅನೇಕ ದೇವಾಲಯಗಳಲ್ಲಿ ಹಸಿದು ಬಂದಂತಹ ಭಕ್ತಾದಿಗಳಿಗೆ ಹೊಟ್ಟೆ ತುಂಬಾ ಊಟ ನೀಡಿ ಸಲಹುವ ಪ್ರವೃತ್ತಿಯೂ ಕೂಡ ಬಹಳ ಹಿಂದಿನ ಕಾಲದಿಂದಲೂ ಕೂಡ ನಡೆದುಕೊಂಡು ಬಂದಿದೆ ಹಾಗಾದ್ರೆ ಹಸಿದು ಬರುವಂತಹ ಭಕ್ತರಿಗೆ ಹೊಟ್ಟೆ ತುಂಬಾ ಅನ್ನವನ್ನು ನೀಡುವ ದೇವಾಲಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಹಸಿದು ಬರುವ ಭಕ್ತರ ಹೊಟ್ಟೆ ತುಂಬಿಸುವ ಭಾರತದ ದೇವಾಲಯಗಳ ಪೈಕಿ ಮಹಾರಾಷ್ಟ್ರದಲ್ಲಿರುವ ಶಿರಡಿ ಸಾಯಿ ಬಾಬಾ ದೇವಾಲಯವು ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ ಅಷ್ಟೇ ಅಲ್ಲದೇ ಅಮೃತಸರ ಪಂಜಾಬ್ ನ ಗೋಲ್ಡನ್ ಟೆಂಪಲ್, ಇಸ್ಕಾನ್ ಫೌಂಡೇಶನ್ ನ ಅಕ್ಷಯ ಪಾತ್ರೆ ಫೌಂಡೇಶನ್ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ದ ಅನ್ನ ಪೂರ್ಣ ಭೋಜನಾಲಯ ಪೂರಿ ಜಗನ್ನಾಥ ದೇವಾಲಯ, ತಿರುಮಲ ತಿರುಪತಿ ದೇವಾಲಯ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಜಮ್ಮುವಿನಲ್ಲಿರುವ ವೈಷ್ಣೋದೇವಿ ದೇವಾಲಯ ರಾಜಸ್ಥಾನದ ಸಲಸಾರ್ ದೇವಾಲಯ ಸೇರಿದಂತೆ ಇನ್ನೂ ಹತ್ತು ಹಲವಾರು ದೇವಾಲಯಗಳು ಹಸಿದು ಬರುವ ಭಕ್ತರಿಗೆ ಹೊಟ್ಟೆ ತುಂಬಾ ಊಟ ನೀಡಿ ಸಲಹುತ್ತಿವೆ

ಈ ದೇವಾಲಯಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಜನಗಳಿಗೆ ಹಸಿದು ಬರುವ ಭಕ್ತರಿಗೆ ಹೊಟ್ಟೆ ತುಂಬಾ ಅನ್ನವನ್ನು ನೀಡುತ್ತಿವೆ ಅಲ್ಲದೇ ನಮ್ಮ ಭಾರತದ ಸಂಸ್ಕೃತಿಯನ್ನು ಬಹಳ ಎತ್ತರಕ್ಕೆ ಏರಿಸಿವೆ ಎಂದರೂ ತಪ್ಪಾಗಲಾರದು.

Leave a Comment

error: Content is protected !!