ಕರ್ನಾಟಕ ಭವನದಲ್ಲಿ ಉದ್ಯೋಗಾವಕಾಶ ಆಸಕ್ತರು ಅರ್ಜಿ ಸಲ್ಲಿಸಿ

ನವದೆಹಲಿಯ ಕರ್ನಾಟಕ ಭವನದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಉಳಿಕೆ ಮೂಲ ವೃಂದದ 25 ಮತ್ತು ಹೈದೆರಾಬಾದ್ ಕರ್ನಾಟಕ ವೃಂದದ 7 ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಗಳನ್ನು ಆಹ್ವಾನಿಸಲಾಗಿದ್ದು ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಹೇಗೆ ಅರ್ಜಿ ಸಲ್ಲಿಸಬೇಕು , ಅಭ್ಯರ್ಥಿಗಳಿಗೆ ಏನೆಲ್ಲಾ ಅರ್ಹತೆಗಳು ಇರಬೇಕು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮೊದಲಿಗೆ ಹುದ್ದೆಗಳ ವಿವರ ಈ ರೀತಿಯಾಗಿದೆ. ಸಹಾಯಕ ವ್ಯವಸ್ಥಾಪಕರು ಇಲ್ಲಿ 2 ಹುದ್ದೆಗಳು
ಸ್ವಾಗತಕಾರರು / ದೂರವಾಣಿ ಪ್ರವರ್ಧಕರು ಇಲಾಖೆಯಲ್ಲಿ 3 ಹುದ್ದೆಗಳು , ಕಿಚನ್ ಮೇಟ್ ಇಲ್ಲಿ 9 ಹುದ್ದೆಗಳು , ಪ್ಯೂನ್‌ ಕಮ್ ವಾಚ್‌ಮೆನ್ 6 ಹುದ್ದೆಗಳು , ಗಾರ್ಡನರ್ ಕಮ್ ಸ್ವೀಪರ್ 2 ಹುದ್ದೆಗಳು , ರೂಮ್ ಬಾಯ್‌ / ಬೇರರ್ 10 ಹುದ್ದೆಗಳು ಖಾಲಿ ಇದ್ದು ಒಟ್ಟು 32 ಹುದ್ದೆಗಳು ಖಾಲಿ ಇವೆ ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸದರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಭವನ, ನವದೆಹಲಿ ಇಲ್ಲಿಯೆ ಕಾರ್ಯ ನಿರ್ವಹಿಸಬೇಕಾಗಿರುತ್ತದೆ. ಪಿಂಚಣಿ ಸೌಲಭ್ಯವು ಇರಲಿದೆ.

ಇನ್ನೂ ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಪ್ರಮುಖ ದಿನಾಂಕಗಳು ಯಾವವು ಅಂತಾ ನೋಡುವುದಾದರೆ , ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಆರಂಭದ ದಿನಾಂಕ 22/02/2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 31/03/2021 ಹಾಗೂ ಅರ್ಜಿ ಸಲ್ಲಿಕೆಯ ಶುಲ್ಕ ಪಾವತಿಸಲು ಕೊನೆ ದಿನಾಂಕ 07/04/2021. ಉದ್ಯೋಗದ ವಿಧ Full Time ಉದ್ಯೋಗ ಇರುವುದು ಹಾಗೂ ಉದ್ಯೋಗ ಕ್ಷೇತ್ರ ಸರ್ಕಾರಿ ಉದ್ಯೋಗ. ಇನ್ನು ಈ ಉದ್ಯೋಗಗಳಿಗೆ ನೀಡುವ ವೇತನದ ವಿವರ ಪ್ರತೀ ತಿಂಗಳಿಗೆ 17,000 ಇಂದ 52,000 ರೂಪಾಯಿಯವರೆಗೆ ನೀಡಲಾಗುವುದು. ಪ್ರಾವಿಣ್ಯತೆ ಪರೀಕ್ಷೆ / ದಾಖಲಾತಿ ಪರಿಶೀಲನೆ ದಿನಾಂಕ ನಂತರ ತಿಳಿಸಲಾಗುವುದು.

ಇನ್ನೂ ಅರ್ಜಿ ಸಲ್ಲಿಸಲು ಭರಿಸಬೇಕಾದ ಶುಲ್ಕ ಎಷ್ಟು ಎಂದು ನೋಡುವುದಾದರೆ ಸಾಮಾನ್ಯ ವರ್ಗ, ಇತರೆ ಹಿಂದುಳಿದ ವರ್ಗಗಳಿಗೆ 200 ರೂಪಾಯಿ, ಎಸ್‌ಸಿ, ಎಸ್‌ಟಿ, ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದಲ್ಲಿ, ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಶುಲ್ಕವನ್ನು ಪಾವತಿಸಬೇಕು. ಇನ್ನೂ ಹೇಗೆ ಅರ್ಜಿ ಸಲ್ಲಿಸುವುದು ಎಂದು ನೋಡುವುದಾದರೆ , ನವದೆಹಲಿಯ ಕರ್ನಾಟಕ ಭವನದ ವೆಬ್ಸೈಟ್ ಗೆ ಭೇಟಿ ನೀಡಿ ಅಪ್ಲಿಕೇಶನ್ ಹಾಕಬಹುದು.

http://www.karnatakabhavana.karnataka.gov.in/ ಈ ವೆಬ್ಸೈಟ್ ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಯಾವ್ಯಾವ ಹುದ್ದೆಗೆ ಏನು ವಿದ್ಯಾರ್ಹತೆ, ಆಯ್ಕೆಪ್ರಕ್ರಿಯೆ ಹೇಗೆ ಎಂದು ತಿಳಿಯಲು ಮತ್ತು ಇತರೆ ಹೆಚ್ಚಿನ ಮಾಹಿತಿಗಾಗಿ ಅಫೀಶಿಯಲ್ ವೆಬ್‌ಸೈಟ್‌ ಗೆ ಭೇಟಿ ನೀಡಿ ಅಥವಾ ಈ ಕೆಳಗಿನ ನೋಟಿಫಿಕೇಶನ್‌ ಓದಿರಿ.

http://www.karnatakabhavan.karnataka.gov.in/kn/RECRUITMENT
http://nemaka.kar.nic.in/karnatakabhavan_recruit/
ಕೌಶಲ ಮತ್ತು ಶೈಕ್ಷಣಿಕ ಅರ್ಹತೆ ನೋಡುವುದಾದರೆ ಕೌಶಲ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ /ಪಿಯುಸಿ / ಪದವಿ ಆಗಿರಬೇಕು ಹಾಗೂ ಕಾರ್ಯಾನುಭವ ಯಾವುದೂ ಇಲ್ಲದೆ ಇದ್ದರೂ ತೊಂದರೆ ಇಲ್ಲ.
ನೇಮಕಾತಿ ಸಂಸ್ಥೆ ಹೆಸರು ಸಂಸ್ಥೆಯ ಹೆಸರು ನವದೆಹಲಿಯ ಕರ್ನಾಟಕ ಭವನ
ವೆಬ್‌ಸೈಟ್‌ ವಿಳಾಸ http://www.karnatakabhavan.karnataka.gov.in/kn

ಉದ್ಯೋಗ ಸ್ಥಳದ ವಿಳಾಸ :- ದೆಹಲಿ
ಸ್ಥಳ :-ದೆಹಲಿ ಕರ್ನಾಟಕ ಭವನ
ಪ್ರದೇಶ ನವದೆಹಲಿ , ಅಂಚೆ ಸಂಖ್ಯೆ 110021 ದೇಶ ಭಾರತ.

Leave A Reply

Your email address will not be published.

error: Content is protected !!